ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today January 17th: ಬುಧ ಮಕರ ಪ್ರವೇಶ; ಈ ರಾಶಿಗೆ ಇಂದು ಮುಟ್ಟಿದ್ದೆಲಾ ಯಶಸ್ಸು ಆಗುವ ಪರ್ವಕಾಲ!

ನಿತ್ಯ ಭವಿಷ್ಯ ಜನವರಿ 17, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಹಿಮದೃತು ಪೌಸ ಮಾಸೆ, ಕೃಷ್ಣ ಪಕ್ಷದ, ಚತುರ್ದಶಿ ತಿಥಿ ಮೂಲ ನಕ್ಷತ್ರದ ಜನವರಿ 17ನೇ ತಾರೀಖಿನ ಶನಿವಾರದ ಈ ದಿನ ಬುಧ ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಈ ರಾಶಿಯವರಿಗೆ ಇಂದು ಈ ಮೂಲಗಳಿಂದ ಆರ್ಥಿಕವಾಗಿ ಲಾಭ

ಸಂಗ್ರಹ ಚಿತ್ರ -

Profile
Pushpa Kumari Jan 17, 2026 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷದ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಅನ್ನು ನೀವು ಕಾಣುತ್ತೀರಿ. ಅದೇ ರೀತಿ ಮಾತಿನಲ್ಲಿ ನೀವು ಹಿಡಿತವನ್ನು ಸಾಧಿಸಬೇಕಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ಫಲ ಇರುತ್ತದೆ. ನೀವು ಆಡಿದ ಮಾತಿನಲ್ಲಿ ಕೊಂಕುಗಳು ಜಾಸ್ತಿ ಎದುರಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಹಿರಿಯರಿಂದಲೂ ಹೆಚ್ಚಿನ ಟೀಕೆಗಳನ್ನು ನೀವು ಕೇಳಬೇಕಾಗಿ ಬರಬಹುದು.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸ್ವಲ್ಪ ಮನಸ್ಸಿಗೆ ನೆಮ್ಮದಿ ತರುವ ದಿನ ವಾಗುತ್ತದೆ. ಈ ಹಿಂದೆ ಉಂಟಾದ ಒಡಕುಗಳಲ್ಲಿ ಸ್ವಲ್ಪ ಮನಸ್ಸಿಗೆ ಸಮಾಧಾನ ಉಂಟು ಮಾಡ ಬಹುದು. ಹಾಗಾಗಿ ಮನಸ್ಸಿನ ವ್ಯಥೆಯನ್ನು ನೀವು ಕಡಿಮೆ ಮಾಡಬೇಕಾಗುತ್ತದೆ. ಸ್ವಲ್ಪ ಮನಸ್ಸಿಗೆ ಸಮಾಧಾನ ತರುವ ದಿನವಾಗಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ಗೋಚರ ವಾಗಿದೆ.ಯಾವುದಾದರೂ ಅಪಾದನೆ ಕೇಳಿ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.ಆದರೆ ನೀವು ತಾಳ್ಮೆಯಿಂದ ಇರುವುದು ಮುಖ್ಯವಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಷಷ್ಠ ಭಾವಕ್ಕೆ ಬುಧ ಬರುತ್ತಿದ್ದಾನೆ. ಹಾಗಾಗಿ ನೀವು ಆಡಿದ ಮಾತಿನಿಂದ ಕೆಲವರಿಗೆ ಬೇಸರ ಸಿಟ್ಟು ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಬಗ್ಗೆ ಜಾಗೃತರಾಗಿ ಇರಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಅಷ್ಟಾಗಿ ಇರೋದಿಲ್ಲ. ಮುಖ್ಯವಾದ ಕೆಲಸ ಕಾರ್ಯಗಳು ಬೇಡ. ಅದೇ ರೀತಿ ನಿಮ್ಮ ಮಾತಿನಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ.

Vastu Tips: ಮನೆಯ ಆರ್ಥಿಕ ಸಮಸ್ಯೆಗೆ ಕರ್ಪೂರದಲ್ಲಿದೆ ಪರಿಹಾರ: ವಾಸ್ತು ಸಲಹೆ ಪ್ರಕಾರ ಹೀಗೆ ಬಳಸಿ

ತುಲಾ ರಾಶಿ: ತುಲಾ ರಾಶಿಗೆ ಉತ್ತಮವಾದ ಗೋಚರ ಇರಲಿದೆ‌.ನಿಮ್ಮ ಮನೆಯಲ್ಲಿ ಹಾಗೂ ಪ್ರೀತಿ ಪಾತ್ರರಿಂದ ಖುಷಿ ಸಿಗುವ ದಿನವಾಗಿದೆ. ಹಿಂದೆ ಇದ್ದ ಕ್ಷೇಷಗಳು ಕೂಡ ಕಡಿಮೆಯಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ಗೋಚರ ಇರಲಿದೆ. ನಿಮ್ಮ ಮಾತಿಗೆ ಟೀಕೆಗಳು ಇಂದು ಹೆಚ್ಚಾಗಬಹುದು. ಆದ್ದರಿಂದ ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ಮನೆ ಇರುವುದು ಒಳ್ಳೆಯದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಸ್ವಲ್ಪ ಮನಸ್ಸಿಗೆ ನೆಮ್ಮದಿ ಸಿಗುವ ದಿನವಾಗಿದೆ. ಇಂದು ಹಣಕಾಸಿನ ಮಾರ್ಗಗಳು ಉತ್ತಮವಾಗಿ ಸಿಗುತ್ತವೆ. ಮನೆಯಲ್ಲಿ ಕೂಡ ಹಿತಕರವಾದ ಮನೋಭಾವ ಮೂಡುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮಾತಿನಿಂದ ಕಷ್ಟಕರವಾಗಿದೆ. ಹಾಗಾಗಿ ನೀವು ಸುಮ್ಮನಿದ್ದಷ್ಟು ಒಳಿತು ಆಗುತ್ತದೆ. ಇಂದು ನೀವು ತಾಳ್ಮೆಯಿಂದ ಇರುವುದು ಮುಖ್ಯ ವಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮಾತಿನಲ್ಲಿ ನೀವು ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಯಾರದಾರೂ ಜೊತೆ ತಪ್ಪು ಕಲ್ಪನೆ ಮಾಡಯವ ಸಾಧ್ಯತೆ ಇರುತ್ತದೆ. ಹಾಗಾಗಿ ಧ್ಯಾನದಿಗಳನ್ನು ಮಾಡಿ ಸಮಯ ಕಳೆಯಬೇಕಾಗುತ್ತದೆ

ಮೀನ ರಾಶಿ: ಮೀನ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿ ಯಾಗಲಿದ್ದು ಧನ ಆಗಮನ ವಾಗುತ್ತದೆ. ಮಿತ್ರರಿಂದ, ಗುಂಪುಗಳಿಂದ ಯಶಸ್ಸು ಸಿಗುತ್ತದೆ.ಹೊಸ ಜನರ ಪರಿಚಯವಾಗುತ್ತದೆ.