Horoscope Today January 2nd: ಕುಜನಿಂದ ಈ ರಾಶಿಯವರಿಗೆ ಎಲ್ಲ ಕಾರ್ಯದಲ್ಲೂ ಜಯ
ನಿತ್ಯ ಭವಿಷ್ಯ ಜನವರಿ 2, 2026: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಶುಕ್ಷ ಪಕ್ಷ, ಚತುರ್ಥಿ ತಿಥಿ, ಮೃಗಶಿರ ನಕ್ಷತ್ರದ ಜನವರಿ 2ನೇ ತಾರೀಖಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು, ಜ. 2: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷದ, ಚತುರ್ಥಿ ತಿಥಿ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಮೃಗಶಿರ ನಕ್ಷತ್ರ ಇದ್ದು, ಇದರ ಅಧಿಪತಿ ಕುಜ. ಹೀಗಾಗಿ ಎಲ್ಲ ರಾಶಿಯವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೆ ಸಂಸಾರದ ತಾಪತ್ರಯ ಇರಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮ್ಮ ಪ್ರೀತಿ ಪಾತ್ರರ ಜತೆಗೂ ಉತ್ತಮ ಸಮಯ ಕಳೆಯಲಿದ್ದೀರಿ. ಸೋಶಿಯಲ್ ಮೀಡಿಯಾ, ಮಾರ್ಕೆಟಿಂಗ್‌ನಲ್ಲಿ ಇರುವವರಿಗೆ ಲಾಭದಾಯಕ ದಿನವಾಗಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರಲಿದೆ. ಮಧ್ಯಾಹ್ನ ಬಳಿಕ ಇದೇ ಖುಷಿಯನ್ನು ನಿಮ್ಮ ಮನೆಯವರ ಜತೆ ಹಂಚಿಕೊಂಡು ಸಮಯ ಕಳೆಯಲಿದ್ದೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನಾನಾ ರೀತಿಯ ಕ್ಷೇಷ ಇರಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಮುಂದೆ ಏನು ಮಾಡಬೇಕು ಎನ್ನುವ ಮಾರ್ಗದರ್ಶನ ನಿಮಗೆ ಸಿಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ಉತ್ತಮ ದಿನವಾಗಲಿದೆ. ಆದರೆ ಮಧ್ಯಾಹ್ನ ಬಳಿಕ ಮನಸ್ಸಿಗೆ ಬಹಳ ಬೇಸರವಾಗಲಿದ್ದು, ಮುಖ್ಯವಾದ ಯಾವುದೇ ನಿರ್ಧಾರ ಬೇಡ. ಯಾರ ಸಹಕಾರ ಕೂಡ ನಿಮಗೆ ಸಿಗದೇ ಇರಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಕಷ್ಟದ ದಿನವಾಗಲಿದೆ. ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಹಾಗೂ ಮಿತ್ರರಿಂದ ಸಂತೋಷ ಸಿಗುತ್ತದೆ.
ಕನ್ಯಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ಅದೃಷ್ಟದ ದಿನವಾಗಲಿದೆ. ಹಿಂದಿನ ತೊಂದರೆಗಳೆಲ್ಲವೂ ಪರಿಹಾರವಾಗುತ್ತದೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದ ಜವಾಬ್ದಾರಿ ಹೆಚ್ಚಾಗುತ್ತದೆ.
ಕಾರ್ಯಕ್ಷೇತ್ರದಲ್ಲಿ ಯಶಸ್ಸು ಬೇಕೇ..?; ತಪ್ಪದೇ ಈ ವಾಸ್ತು ನಿಯಮ ಪಾಲಿಸಿ
ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಬಹಳಷ್ಟು ಕ್ಷೇಷ ಇರಲಿದ್ದು ಮಧ್ಯಾಹ್ನ ಬಳಿಕ ಅದೃಷ್ಟ ಅರಸಿಕೊಂಡು ಬರಲಿದೆ. ಮನಸ್ಸಿಗೆ ಖುಷಿ ಸಿಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ದಿನ ಚೆನ್ನಾಗಿ ಇರಲಿದ್ದು ಮಧ್ಯಾಹ್ನ ಬಳಿಕ ಮನಸ್ಸಿಗೆ ನಾನಾ ರೀತಿಯ ಕ್ಷೇಷ ಬರಬಹುದು. ಮುಖ್ಯವಾದ ನಿರ್ಧಾರಗಳು, ಮೀಟಿಂಗ್ ಯಾವುದೂ ಇಂದು ಬೇಡ.
ಧನಸ್ಸು ರಾಶಿ: ಧನಸ್ಸು ರಾಶಿಯವರ ದಿನ ಚೆನ್ನಾಗಿರಲಿದೆ. ಪ್ರೀತಿ ಪಾತ್ರರಿಂದ ಅಕ್ಕರೆ, ನೆಮ್ಮದಿ ಎಲ್ಲವೂ ಪ್ರಾಪ್ತಿಯಾಗುತ್ತದೆ.
ಮಕರ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಯೋಚನೆ, ಕಷ್ಟ ಬರಬಹುದು. ಹಣಕಾಸಿನ ವಿಚಾರ, ಮಕ್ಕಳ ಬಗ್ಗೆ ತೊಂದರೆ ಕಾಡಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗುವ ಜತೆಗೆ ಶತ್ರು ಭಾದೆ ಕಡಿಮೆಯಾಗಲಿದೆ.
ಕುಂಭರಾಶಿ: ಈ ರಾಶಿಯವರಿಗೆ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ. ನಾನಾ ರೀತಿಯ ಯೋಚನೆಗಳು ಕಾಡಲಿದ್ದು ಆಸ್ತಿ ಪಾಸ್ತಿ ವಿಚಾರ ಹಾಗೂ ಮಕ್ಕಳ ಬಗ್ಗೆ ಯೋಚನೆಗಳು ಕಾಡಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ದಿನ ಚೆನ್ನಾಗಿರಲಿದ್ದು, ಮಧ್ಯಾಹ್ನ ಬಳಿಕ ಬೇಸರ, ನೋವು ಇತ್ಯಾದಿ ಕಾಡುವ ಸಾಧ್ಯತೆ ಇದೆ. ಮಾನಸಿಕ ನೋವುಗಳು ಕೂಡ ನಿಮ್ಮನ್ನು ಕಾಡಬಹುದು. ಹಾಗಾಗಿ ಮಧ್ಯಾಹ್ನ ಬಳಿಕ ಮಾತ್ರ ಯಾವುದೇ ಮುಖ್ಯ ನಿರ್ಧಾರ ಬೇಡ.