Daily Horoscope: ಈ ರಾಶಿಯವರಿಗೆ ಇಂದು ಅದೃಷ್ಟವೋ ಅದೃಷ್ಟ; ಧನಾಗಮನದ ಜತೆ ಮಾನಸಿಕ ನೆಮ್ಮದಿ
ದಿನ ಭವಿಷ್ಯ: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷದ ತೃತೀಯ ತಿಥಿ, ಅನುರಾಧ ನಕ್ಷತ್ರದ ಅಕ್ಟೋಬರ್ 24ನೇ ತಾರೀಖಿನ ಈ ದಿನದಂದು ಬುಧ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
Daily Horoscope -
ಬೆಂಗಳೂರು: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ, ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷದ ತೃತೀಯ ತಿಥಿ, ಅನುರಾಧ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ಸಾಕಷ್ಟು ವಿಚಾರದಲ್ಲಿ ನೆಮ್ಮದಿ ಪ್ರಾಪ್ತಿಯಾಗಲಿದೆ. ಮನೆಯಲ್ಲಿ, ನಿಮ್ಮ ಕುಟುಂಬದಲ್ಲಿ ಬಹಳಷ್ಟು ನೆಮ್ಮದಿ ಸಿಗಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಹಾಗಾಗಿ ನೀವು ಮಾತುಕತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಮಿತ್ರರಿಂದ ನಿಮಗೆ ತೊಂದರೆ ಆಗಬಹುದು. ದಾಂಪತ್ಯ ವಿಚಾರದಲ್ಲಿಯು ವೈ ಮನಸ್ಸು ಮೂಡಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಉತ್ತಮ ದಿನವಾಗಲಿದೆ. ನಿಮ್ಮ ಮಾತಿನ ಚಾಕಚಾಕತ್ಯೆಯಿಂದ ಎಲ್ಲರನ್ನು ಗೆಲ್ಲಲಿದ್ದೀರಿ. ಶತ್ರುಗಳನ್ನು ಕೂಡ ನೀವು ಹಿಮ್ಮೆಟ್ಟಿಸಲಿದ್ದೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಈ ದಿನ ಕಷ್ಟದಿಂದ ಕೂಡಿರಲಿದೆ. ನಿಮ್ಮ ಮಾತಿನಲ್ಲಿ ಯಾವುದೇ ರೀತಿಯಲ್ಲಿ ಸರಿ ಹೋಗುವುದಿಲ್ಲ. ಅದರಲ್ಲೂ ಭಾಷಣಕಾರರು, ಮಾತುಗಾರರಿಗೆ ಅವರ ಮಾತಿನಿಂದಲೇ ತೊಂದರೆ ಆಗುವ ಸಾಧ್ಯತೆ ಇದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅದೇ ರೀತಿ ಮನೆಯಲ್ಲಿ, ಆಸ್ತಿ-ಪಾಸ್ತಿ ವಿಚಾರದಲ್ಲಿ ಕೂಡ ನೆಮ್ಮದಿ ದೊರೆಯಲಿದೆ. ಕೋರ್ಟ್, ವ್ಯವಹಾರ ವಿಚಾರದಲ್ಲೂ ಗೆಲುವು ನಿಮ್ಮದಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಲಿದೆ. ಮಾತುಕತೆಯಲ್ಲಿ ನಿಮಗೆ ತೊಂದರೆ ಆಗಬಹುದು. ಅಣ್ಣ - ತಮ್ಮಂದಿರ ಜತೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಇದನ್ನು ಓದಿ:Vastu Tips: ಅದೃಷ್ಟ, ಸಮೃದ್ಧಿಯನ್ನು ಆಹ್ವಾನಿಸುತ್ತದೆ ಬಿದಿರು
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ವಿಚಾರ ಕಂಡುಬರಲಿದೆ. ಮನಸ್ಸಿಗೆ, ಸಂಸಾರದಲ್ಲಿಯೂ ನೆಮ್ಮದಿ ಸಿಗಲಿದೆ. ಧನಾಗಮನ ಕೂಡ ಆಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ನಿಮ್ಮ ರಾಶಿಗೆ ಬುಧ ಬರು ವುದರಿಂದ ನೀವು ಆಡಿದ ಮಾತಿನಿಂದ ಬೇರೆಯವರಿಗೆ ಬೇಸರ ಮೂಡಬಹುದು. ಹಾಗಾಗಿ ಮಾತಿನಲ್ಲಿ ಬಹಳಷ್ಟು ನಿಗಾ ಇರಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನವಾಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಯಾವುದಾದರೂ ಒಂದು ರೀತಿಯಲ್ಲಿ ನಿಮಗೆ ತೊಂದರೆ ಆಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುವ ದಿನವಾಗಲಿದೆ. ಮಾತಿನ ಚಾಕಚಕ್ಯತೆಯಿಂದ ಪ್ರಮೋಷನ್ ಸಿಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಕಷ್ಟದಿಂದ ಕೂಡಿರಲಿಎ. ನಿಮಗೆ ಬೇರೆಯವರು ಕೆಲವೊಂದು ವಿಚಾರದಲ್ಲಿ ತೊಂದರೆ ನೀಡಬಹುದು. ಆದರೂ ನಿಮಗೆ ಗುರು ಬಲ ಇರುವುದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗಬಹುದು.