ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 2nd: ಕೇತುವಿನಿಂದ ಈ ರಾಶಿಯವರ ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು

ನಿತ್ಯ ಭವಿಷ್ಯ ಡಿಸೆಂಬರ್‌ 2, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ದ್ವಾದಶಿ ತಿಥಿ, ಅಶ್ವಿನಿ ನಕ್ಷತ್ರದ ಡಿಸೆಂಬರ್ 2ನೇ ತಾರೀಖಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮಂಗಳವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಸಾಂದರ್ಭಿಕ ಚಿತ್ರ. -

Profile
Pushpa Kumari Dec 2, 2025 6:00 AM

ಬೆಂಗಳೂರು, ಡಿ. 2: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ದ್ವಾದಶಿ ತಿಥಿ, ಅಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಮಾಹಿತಿ ನೀಡಿದ್ದಾರೆ.

ಮೇಷ ರಾಶಿ: ಅಶ್ವಿನಿ ನಕ್ಷತ್ರದ ಅಧಿಪತಿ ಕೇತು. ಆದ್ದರಿಂದ ಎಲ್ಲ ರಾಶಿಯ ಮೇಲೂ ಇಂದು ಪರಿಣಾಮ ಬೀರುವ ಸಾಧ್ಯತೆ ಇದೆ‌. ಇಂದು ಮೇಷ ರಾಶಿಯವರಿಗೆ ಉತ್ತಮ ದಿನ. ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಹಿಂದಿನ ಎರಡೂ ಮೂರು ದಿನಗಳ ಮನಸ್ಸಿನ ನೋವು, ವೇದನೆಗಳೆಲ್ಲವೂ ಬಗೆಹರಿಯಲಿದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನ. ವ್ಯಯ ಭಾವದಲ್ಲಿ ಚಂದ್ರ ಬಂದಿರುವುದರಿಂದ ಮನಸ್ಸಿಗೆ ಸ್ವಲ್ಪ ಕ್ಷೇಷ ಉಂಟಾಗುತ್ತದೆ‌. ಇಂದು ಮುಖ್ಯವಾದ ಸಂಬಂಧದಲ್ಲಿ ಹಾಗೂ ಮಿತೃತ್ವದಲ್ಲಿ ಒಡಕು ಉಂಟಾಗಬಹುದು.‌

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಉತ್ತಮ ದಿನ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮಿತ್ರರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಧನಲಾಭ ಆಗುತ್ತದೆ.

ಕಟಕ ರಾಶಿ: ಕಟಕ ರಾಶಿಗೆ ಉತ್ತಮ ದಿನ. ಕಾರ್ಯಕ್ಷೇತ್ರದ ಜವಾಬ್ದಾರಿಗಳು ಇಂದು ಹೆಚ್ಚಾಗಬಹುದು. ಆದರೂ ಕೂಡ ಇಂದು ಯಶಸ್ಸನ್ನು ಕಾಣುತ್ತೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ನೋವು, ವೇದನೆ ಕಡಿಮೆಯಾಗುತ್ತದೆ. ಇಂದು ಉತ್ತಮ ದಿನವಾಗಿದ್ದು ಎಲ್ಲರ ಜತೆಗೂ ಸೌಹಾರ್ದ ಸಂಬಂಧ ಮೂಡುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ‌. ಆತಂಕ, ನೋವು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಧ್ಯಾನಾದಿಗಳನ್ನು ಮಾಡುವ ಮೂಲಕ ನೀವು ಇಂದು ಸಮಯ ಕಳೆಯಬೇಕಾಗುತ್ತದೆ.

ಮನೆಯಲ್ಲಿ ಬುದ್ಧನ ಪ್ರತಿಮೆ ಇಡುತ್ತಿದ್ದಿರಾ? ಹಾಗಾದ್ರೆ ಯಾವ ಜಾಗದಲ್ಲಿ ಇಡಬೇಕು?

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲರಿಂದಲೂ ಸಹಕಾರ ಪ್ರಾಪ್ತಿಯಾಗುತ್ತದೆ.‌ ಕಾರ್ಯಕ್ಷೇತ್ರದಲ್ಲೂ ಇಂದು ಯಶಸ್ಸು ಸಿಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೂ ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಜಯ. ಅದಾಗ್ಯೂ ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು. ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನ. ವ್ಯವಹಾರದಲ್ಲಿ ನಿಮಗೆ ತಲೆ ಕೆಡಬಹುದು.‌ ಮಕ್ಕಳ ವಿಚಾರದಲ್ಲೂ ಪೋಷಕರಿಗೆ ಹೆಚ್ಚಿನ ಆತಂಕ ಇರುತ್ತದೆ. ನಿಮ್ಮ ಬುದ್ದಿ ಶಕ್ತಿಯಿಂದ ಯಾವುದೇ ಕೆಲಸ ಕಾರ್ಯಗಳನ್ನು ಮುಗಿಸಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಮನೆಯ ಜವಾಬ್ದಾರಿಗಳು ಹೆಚ್ಚಿರುತ್ತವೆ. ಆಸ್ತಿ-ಪಾಸ್ತಿ ವಿಚಾರ, ತಾಯಿಯ ಆರೋಗ್ಯ ಬಗ್ಗೆ ಹೆಚ್ಚಿನ ಆತಂಕ ಇರುತ್ತದೆ. ಮನೆಯ ಬದಲಾವಣೆ ಬಗ್ಗೆಯೂ ಹೆಚ್ಚಿನ ಯೋಚನೆ ಮಾಡಲಿದ್ದೀರಿ.

ಕುಂಭರಾಶಿ: ಕುಂಭರಾಶಿಯವರಿಗೂ ಉತ್ತಮ ದಿನ. ಸಹೋದರ- ಸಹೋದರಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆತ್ಮವಿಶ್ವಾಸ ಕೂಡ ಚೆನ್ನಾಗಿರುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಸಂಸಾರದ ಬಗ್ಗೆ ಹೆಚ್ಚಿನ ಗಮನವನ್ನು ನೀಡುವಂತಾಗಲಿದೆ. ಆದರೂ ಮನಸ್ಸಿಗೆ ನೆಮ್ಮದಿ ಇದ್ದು ಖುಷಿಯನ್ನು ನೀವು ಕಾಣಲಿದ್ದೀರಿ.