Vastu Tips: ಚಾವಣಿ ಮೇಲಿನ ನೆಲಕ್ಕೆ ಬಳಸಬಹುದಾದ ಬಣ್ಣ ಯಾವುದು ಗೊತ್ತೇ?
ಮನೆ ನಿರ್ಮಾಣ, ದುರಸ್ತಿ ಕಾರ್ಯಗಳನ್ನು ಮಾಡುವಾಗ ಕೆಲವೊಂದು ವಾಸ್ತು ಅಂಶಗಳನ್ನು ಗಮನದಲ್ಲಿ ಇರಿಸಲೇಬೇಕು. ಅದರಲ್ಲೂ ಮುಖ್ಯವಾಗಿ ಬಣ್ಣಗಳ ಬಗ್ಗೆ ತಿಳಿದಿರಬೇಕು. ಯಾಕೆಂದರೆ ಬಣ್ಣಗಳು ಕೇವಲ ಮನೆಗೆ ಸೌಂದರ್ಯವನ್ನು ಮಾತ್ರ ಕೊಡುವುದಿಲ್ಲ ಮನೆ ಮಂದಿಯ ಮನಸ್ಸನ್ನು ಕೂಡ ನಿಯಂತ್ರಿಸುತ್ತದೆ. ಹೀಗಾಗಿ ಯಾವ ಬಣ್ಣ ಎಲ್ಲಿ ಬಳಸಬಹುದು ಎಂಬುದನ್ನು ಮೊದಲೇ ತಿಳಿದುಕೊಂಡಿರುವುದು ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಚಾವಣಿಯ ಮೇಲೆ ಬಳಸಬಹುದಾದ ಬಣ್ಣಗಳು ಯಾವುದು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.


ಮನೆ ನಿರ್ಮಾಣ, ದುರಸ್ತಿ ವೇಳೆ ಕೆಲವೊಂದು ಅಂಶಗಳನ್ನು (Vastu Tips) ಗಮನದಲ್ಲಿ ಇರಿಸಬೇಕು. ಮುಖ್ಯವಾಗಿ ಮನೆಯ ಚಾವಣಿಗೆ ಅಳವಡಿಸುವ ಕಲ್ಲುಗಳ ಬಣ್ಣದ ಬಗ್ಗೆ ಹೆಚ್ಚು ಗಮನ ಹರಿಸಲೇಬೇಕು. ಸೌಂದರ್ಯ ಹೆಚ್ಚಿಸಲೆಂದು ಯಾವುದೋ ಬಣ್ಣದ ಕಲ್ಲುಗಳನ್ನು ಹಾಸಿದರೆ ಮುಂದೆ ಒಂದೊಂದಾಗಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಮನೆಯ ಚಾವಣಿಯ (vastu for roof) ಮೇಲೆ ಕಲ್ಲುಗಳನ್ನುಹಾಸುವಾಗ ಅಥವಾ ಹೆಂಚುಗಳನ್ನು ಅಳವಡಿಸುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ ಎನ್ನುತ್ತದೆ ವಾಸ್ತು ತತ್ತ್ವ (vastu for home). ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಅದು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡಬಹುದು.
ಮನೆಯ ಚಾವಣಿಯು ರಾಹುವಿಗೆ ಸಂಬಂಧಿಸಿದೆ. ಹೀಗಾಗಿ ಮನೆಯ ಚಾವಣಿಯನ್ನು ವಾಸ್ತು ಶಾಸ್ತ್ರದಲ್ಲಿರುವಂತೆಯೇ ನಿರ್ಮಿಸುವುದು ಬಹುಮುಖ್ಯವಾಗಿದೆ. ಮನೆಯ ಚಾವಣಿಗೆ ಕಲ್ಲುಗಳನ್ನು ಹಸುವಾಗ ಅಥವಾ ಮನೆಯ ಚಾವಣಿಯ ಮೇಲೆ ಹೆಂಚುಗಳನ್ನು ಅಳವಡಿಸುವಾಗ, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ ಎನ್ನುತ್ತದೆ ವಾಸ್ತು.
ಮನೆಯ ಚಾವಣಿ ನಿರ್ಮಾಣದ ವೇಳೆ ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಅದು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡಬಹುದು ಮತ್ತು ಮನೆ ಮಂದಿಯ ಪ್ರಗತಿಯಲ್ಲಿ ಹಲವು ಅಡೆತಡೆಗಳನ್ನು ಉಂಟು ಮಾಡಬಹುದು. ಮನೆಯ ಚಾವಣಿಗೆ ಕೆಲವೊಂದು ಬಣ್ಣದ ಕಲ್ಲನ್ನು ಅಳವಡಿಸುವುದು ಶುಭ ಪರಿಣಾಮಗಳು ಹಾಗು ಕೆಲವು ಕಲ್ಲುಗಳಿಂದ ಅಶುಭ ಪರಿಣಾಮಗಳು ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್.

ಯಾವ ಬಣ್ಣ ಉತ್ತಮ ?
ಮನೆಯ ಚಾವಣಿ ಮೇಲೆ ಬಿಳಿ ಬಣ್ಣವನ್ನು ಬಳಸುವುದು ಒಳ್ಳೆಯದು. ಈ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಬಿಳಿ ಬಣ್ಣವು ಪ್ರಗತಿಯನ್ನು ಸೂಚಿಸುತ್ತದೆ. ಹೀಗಾಗಿ ಮನೆಯ ಚಾವಣಿಯ ಮೇಲೆ ಬಿಳಿ ಕಲ್ಲುಗಳು ಅಥವಾ ಬಿಳಿ ಅಮೃತಶಿಲೆಯನ್ನು ಹಾಸುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಶಾಂತಿ ಸ್ಥಾಪನೆಯಾಗುವುದು ಮಾತ್ರವಲ್ಲದೆ ಮನೆಯ ಪ್ರಗತಿಗೂ ಕಾರಣವಾಗುತ್ತದೆ. ಮನೆ ಮಂದಿಯ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಅವಕಾಶಗಳು ಲಭ್ಯವಾಗುವುದು.
ನೀಲಿ ಬಣ್ಣವು ಯಶಸ್ಸನ್ನು ಸೂಚಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹೀಗಾಗಿ ಮನೆಯ ಚಾವಣಿಗೆ ಯಶಸ್ಸಿನ ಸಾಂಕೇತಿಕ ಬಣ್ಣವನ್ನು ಬಳಸಿದರೆ ಅದು ಕುಟುಂಬ ಸದಸ್ಯರ ಜೀವನದಲ್ಲಿ ಯಶಸ್ಸನ್ನು ತರುತ್ತದೆ. ಎದುರಾಗಬಹುದಾದ ತೊಂದರೆಗಳನ್ನು ದೂರ ಮಾಡುತ್ತದೆ.

ಇದನ್ನೂ ಓದಿ: Viral News: ಪ್ರಪಂಚದಾದ್ಯಂತ ಎಷ್ಟು ʼಭಾರತೀಯʼ ಹೊಟೇಲ್‌ಗಳನ್ನು ಪಾಕಿಸ್ತಾನಿಯವರು ನಿರ್ವಹಿಸುತ್ತಿದ್ದಾರೆ ಗೊತ್ತಾ?
ಕೆನೆ ಬಣ್ಣವು ಸಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಹಳದಿ ಬಣ್ಣವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯ ಚಾವಣಿಯ ಮೇಲೆ ಕೆನೆ ಅಥವಾ ಹಳದಿ ಬಣ್ಣದ ಕಲ್ಲನ್ನು ಹಾಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡುತ್ತದೆ. ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಹಳದಿ ಬಣ್ಣದ ಪರಿಣಾಮವು ಅದೃಷ್ಟವನ್ನು ಮನೆ ಬಾಗಿಲಿಗೆ ತರುತ್ತದೆ.
ಮನೆಯ ಚಾವಣಿಯು ಸಿಮೆಂಟ್‌ನಿಂದ ಮಾಡಲ್ಪಟ್ಟಿದ್ದರೆ ಪ್ರತಿದಿನ ಚಾವಣಿಯ ಮೇಲೆ ಕರ್ಪೂರವನ್ನು ಸುಡುವ ಮೂಲಕ ಚಾವಣಿಗೆ ಸರಳವಾದ ವಾಸ್ತು ಪರಿಹಾರವನ್ನು ಮಾಡಬಹುದು. ಇದು ವಾಸ್ತು ದೋಷವನ್ನು ತೆಗೆದುಹಾಕುತ್ತದೆ . ಟೈಲ್ಸ್ ಅಳವಡಿಸುವುದಾದರೆ ಮೇಲೆ ತಿಳಿಸಿದ ಯಾವುದಾದರೂ ಒಂದು ಬಣ್ಣವನ್ನು ಮಾತ್ರ ಆರಿಸಿಕೊಳ್ಳಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸದಾ ನೆಲೆಸುತ್ತದೆ.