ದಿನ ಭವಿಷ್ಯ, ಜುಲೈ 4, 2026: ಈ ರಾಶಿಗೆ ಇಂದು ಹಣಕಾಸಿನ ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ!
Horoscope Today July 4th ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಚತುರ್ಥಿ ತಿಥಿ, ದನಿಷ್ಠ ನಕ್ಷತ್ರದ, ಜುಲೈ 4ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ದನಿಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಇಂದು ಗುರು ಪುಷ್ಯ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ. ಪ್ರೇಮ ಪ್ರೀತಿ ವಿಚಾರದಲ್ಲಿ ಕೂಡ ನಿಮಗೆ ಯಶಸ್ಸು ಸಿಗುತ್ತದೆ
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಆಸ್ತಿ ಪಾಸ್ತಿ ವಿಚಾರವಾಗಿ ಹಾಗೂ ಕೋರ್ಟ್ ಕಛೇರಿ ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದೇ ರೀತಿ ಮನೆಯಲ್ಲಿ ಶುಭ ಸಮಾರಂಭದ ವಾತಾವರಣ ಇರುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಿದೆ. ಮಾತಿನ ಮೂಲಕ ಇಂದು ಎಲ್ಲ ಕೆಲಸ ಕಾರ್ಯದಲ್ಲಿ ಜಯ ಕಾಣುತ್ತೀರಿ
ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ.. ವ್ಯಯ ಸ್ಥಾನಕ್ಕೆ ಶುಕ್ರ ಬರುತ್ತಿದ್ದಾನೆ. ಹೀಗಾಗಿ ಮನೆಯಲ್ಲಿ ಶುಭ ಸಮಾರಂಭ ಹಾಗೂ ಖುಷಿಯ ವಾತಾವರಣ ಇರುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ನಿಮ್ಮ ರಾಶಿಗೆ ಶುಕ್ರ ಬರುತ್ತಿದ್ದಾನೆ. ಹೀಗಾಗಿ ಹಿಂದಿನ ದಿನದಲ್ಲಿ ಇದ್ದ ಮನಸ್ಸಿನ ನೋವು ಮಾಯವಾಗುತ್ತದೆ. ಮಿತ್ರತ್ವದಲ್ಲಿ ಇದ್ದ ಅಡಚಣೆಗಳು ನಿವಾರಣೆಯಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ವ್ಯಯ ಭಾವಕ್ಕೆ ಶುಕ್ರ ಬರುತ್ತಿದ್ದಾನೆ.ಹೀಗಾಗಿ ಹೆಂಗಸರ ಮೂಲದಿಂದ ತೊಂದರೆ ಉಂಟಾಗಬಹುದು.ಹಾಗಾಗಿ ಹೆಂಗಸರ ಜೊತೆ ಗೌರವದಿಂದ ಕೆಲಸ ಮಾಡಬೇಕಾಗುತ್ತದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಲಾಭ ಸ್ಥಾನಕ್ಕೆ ಶುಕ್ರ ಬರುತ್ತಿದ್ದಾನೆ. ಹೀಗಾಗಿ ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಆದರೆ ಪ್ರೇಮ,ಪ್ರೀತಿ ವಿಚಾರದಲ್ಲಿ ಅಷ್ಟೊಂದು ಒಳ್ಳೆಯ ದಿನ ಅಲ್ಲ.
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಹೆಂಗಸರ ಮೂಲದಿಂದ ತೊಂದರೆ ಉಂಟಾಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಅಷ್ಠಮಕ್ಕೆ ಶುಕ್ರ ಬರುತ್ತಿದ್ದಾನೆ. ಹಾಗಾಗಿ ಹಿಂದೆ ಇದ್ದ ನೋವೆಲ್ಲ ಇಂದು ಪರಿಹಾರವಾಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಕೆಲವೊಂದು ವಿಚಾರದಲ್ಲಿ ತೊಂದರೆ ಉಂಟಾಗಬಹುದು. ಬಿಸೆನೆಸ್ ವ್ಯವಹಾರದಲ್ಲಿ ಕೂಡ ತೊಂದರೆ ಎದುರಾಗಬಹುದು
ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಅಡೆತಡೆ ಎದುರಾಗಬಹುದು. ಹೆಚ್ಚಿನ ಆತ್ಮವಿಶ್ವಾಸದಿಂದ ಜಯವನ್ನು ಕಾಣಬಹುದು.