ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hanuman Jayanthi: ಇಂದು ಹನುಮನಿಗೆ ಈ ವಸ್ತುಗಳನ್ನು ಅರ್ಪಿಸಿದರೆ ನಿಮ್ಮಾಸೆಗಳೆಲ್ಲ ಈಡೇರುತ್ತೆ

ರಘುವೀರನ ಪರಮ ಭಕ್ತ ಹನುಮ ಜಯಂತಿಯಂದು ವಾಯುಪುತ್ರನಿಗೆ ಕೆಲವೇ ವಸ್ತುಗಳನ್ನು ಅರ್ಪಿಸುವುದರಿಂದ ಶುಭ ಫಲವನ್ನು ಪಡೆದುಕೊಳ್ಳುವುದರೊಂದಿಗೆ ನಮ್ಮೆಲ್ಲ ಇಷ್ಟಾರ್ಥಗಳು ಈಡೇರುತ್ತದೆ. ಜತೆಗೆ ಆತನ ಅನುಗ್ರಹವೂ ಸಿಗಲಿದ್ದು, ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ. ಹಾಗಾದ್ರೆ ಆ ವಸ್ತುಗಳು ಯಾವುವು? ಇಲ್ಲಿದೆ ನೋಡಿ ಮಾಹಿತಿ.

ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಶುಭ ಫಲ

ಹನುಮಂತ -

Profile
Sushmitha Jain Dec 3, 2025 6:00 AM

ಬೆಂಗಳೂರು: ಚೈತ್ರ ಶುಕ್ಲ ಪೌರ್ಣಿಮೆಯ ಪ್ರಯುಕ್ತ ದೇಶದಾದ್ಯಂತ ಭಕ್ತರು ಮಂಗಳವಾರ (ಡಿಸೆಂಬರ್‌ 3) ಹನುಮ ಜಯಂತಿಯನ್ನು (Hanuma Jayanthi) ಭಕ್ತಿಭಾವದಿಂದ ಆಚರಿಸುತ್ತಾರೆ. ಹನುಮಂತನ ಜನ್ಮದಿನವಾದ ಈ ಪವಿತ್ರ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪಾರಾಯಣ ಮತ್ತು ಭಜನೆ ನಡೆಯುತ್ತಿದ್ದು, ಧೈರ್ಯ, ಬುದ್ಧಿ ಮತ್ತು ಶಕ್ತಿಯ ಸಂಕೇತವಾದ ಹನುಮಂತನ ಆರಾಧನೆ ಮಾಡುವುದರಿಂದ ಅಡೆತಡೆ ನಿವಾರಣೆ, ಮಾನಸಿಕ ಶಾಂತಿ ಮತ್ತು ಕುಟುಂಬದಲ್ಲಿ ಶುಭ ಫಲ(Good Results) ಸಿಗುತ್ತದೆ ಎನ್ನುವ ನಂಬಿಕೆ ಇದೆ.

ರಘುವೀರನ ಪರಮಭಕ್ತನಾದ ಹನುಮಂತನ ಪರಿಶುದ್ಧ ಜೀವನ ಮತ್ತು ಭಕ್ತಿಭಾವವನ್ನು ಸ್ಮರಿಸಿಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತಿದೆ. ಹನುಮಂತನ ಜನ್ಮ ತಾಳಿದ ದಿನವಾದ ಇಂದು
ಆಂಜನೇಯನನ್ನು ಮೆಚ್ಚಿಸಲು ಅವನಿಗಿಷ್ಟವಾದ ಕೆಲವೊಂದು ವಸ್ತುಗಳನ್ನು ಅರ್ಪಿಸುವುದರಿಂದ ಅವನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.

ಜ್ಯೋತಿಷ್ಯ ಶಾಸ್ತ್ರ (Astro Tips) ಪ್ರಕಾರ ಹನುಮ ಜಯಂತಿಯಂದು ಹನುಮಂತನನ್ನು ಪೂಜಿಸುವಾಗ ಯಾವೆಲ್ಲಾ ವಸ್ತುಗಳನ್ನು ಅರ್ಪಿಸಬೇಕು ಎನ್ನುವ ವಿವರ ಇಲ್ಲಿದೆ.

ಲಡ್ಡು

ಹನುಮಂತನಿಗೆ ಅತ್ಯಂತ ಪ್ರಿಯವಾದ ನೈವೇದ್ಯಗಳಲ್ಲಿ ಲಡ್ಡು ಕೂಡ ಪ್ರಮುಖ ಸ್ಥಾನವನ್ನು ಹೊಂದಿದೆ. ಹನುಮನು ವಿಶೇಷವಾಗಿ ಮೂರು ಬಗೆಯ ಲಡ್ಡುಗಳನ್ನು ಇಷ್ಟಪಡುತ್ತಾನೆ. ಅವುಗಳಲ್ಲಿ ಕೇಸರಿ ಬೂಂದಿ ಲಡ್ಡು, ಬೇಸನ್ ಲಡ್ಡು ಮತ್ತು ಮಲೈ ಮಿಶ್ರ ಲಡ್ಡು ಮುಖ್ಯ. ಇವರಲ್ಲಿ ಬೇಸನ್ ಲಡ್ಡು ಹನುಮಂತನಿಗೆ ಅತ್ಯಂತ ಪ್ರಿಯ. ಹನುಮ ಜಯಂತಿ ಈ ಲಡ್ಡುಗಳನ್ನು ಅರ್ಪಿಸಿದರೆ, ಭಕ್ತರಿಗೆ ಹನುಮಂತನ ಕೃಪೆ ಮತ್ತು ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಬೆಲ್ಲ ಮತ್ತು ಬೇಳೆ

ಹನುಮಂತನಿಗೆ ನೀಡುವ ನೈವೇದ್ಯಗಳಲ್ಲಿ ಬೆಲ್ಲ ಮತ್ತು ಬೇಳೆ ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಏನನ್ನೂ ಸಿದ್ಧಪಡಿಸಲು ಸಾಧ್ಯವಾಗದ ಸಂದರ್ಭದಲ್ಲಿಯೂ, ಸರಳವಾಗಿ ಬೆಲ್ಲ ಮತ್ತು ಬೇಳೆ ಅರ್ಪಿಸಿದರೂ ಹನುಮನು ಸಂತೋಷಗೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ. ಭಕ್ತಿಭಾವದಿಂದ ನೀಡಿದ ಈ ನೈವೇದ್ಯ ಹನುಮಂತನ ಕೃಪೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಇಂದು ಹನುಮ ಜಯಂತಿ; ಈ ದಿನದ ಮಹತ್ವ, ಪೂಜಾ ವಿಧಾನ, ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

ಮಲ್ಲಿಗೆ ಹೂವು

ಮಲ್ಲಿಗೆ ಹೂವು ಹನುಮಂತನಿಗೆ ಅತ್ಯಂತ ಪ್ರಿಯವಾದ ಹೂವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹನುಮಂತನ ಅನುಗ್ರಹವನ್ನು ಪಡೆಯಲು 5 ಮಲ್ಲಿಗೆ ಹೂಗಳನ್ನು ಭಕ್ತಿಭಾವದಿಂದ ಅರ್ಪಿಸುವುದು ಅತ್ಯಂತ ಶುಭಕರ. ಹನುಮಂತನಿಗೆ ಸಿಂಧೂರದ ಜತೆಗೆ ಮಲ್ಲಿಗೆ ಎಣ್ಣೆ ಸಮರ್ಪಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದ್ದು, ಹೀಗೆ ಮಾಡುವುದರಿಂದ ಜೀವನದಲ್ಲಿರುವ ನಕಾರಾತ್ಮಕತೆಗಳು ದೂರವಾಗಿ ಶಾಂತಿ ಮತ್ತು ಶುಭಫಲಗಳನ್ನು ನೀಡುತ್ತದೆ ಎನ್ನುವ ನಂಬಿಕೆ ಇದೆ.

ಪಂಚಮೇವ ನೈವೇದ್ಯ

ಹನುಮಂತನ ಪೂಜೆಯಲ್ಲಿ ಪಂಚಮೇವ ಎಂದೂ ಕರೆಯುವ ಐದು ಪ್ರಮುಖ ಒಣಹಣ್ಣುಗಳನ್ನು ಅರ್ಪಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಅವುಗಳೆಂದರೆ-ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಒಣ ಖರ್ಜೂರ ಮತ್ತು ಕೊಬ್ಬರಿ. ಹನುಮಂತನಿಗೆ ಈ ಐದು ವಸ್ತುಗಳೂ ಪ್ರಿಯ. ಭಕ್ತಿಭಾವದಿಂದ ಪಂಚಮೇವವನ್ನು ಅರ್ಪಿಸಿದರೆ, ಭಕ್ತರ ಆಸೆಗಳು ನೆರವೇರುತ್ತವೆ ಮತ್ತು ಜೀವನದಲ್ಲಿ ಶುಭಫಲಗಳು ಲಭಿಸುತ್ತವೆ ಎನ್ನುವ ನಂಬಿಕೆ ಇದೆ.