Astro Tips: ಶನಿವಾರ ಆಂಜನೇಯ ಸ್ವಾಮಿಗೆ ಈ ನೈವೇದ್ಯಗಳನ್ನು ಅರ್ಪಿಸಿದರೆ ಸಂಕಷ್ಟ ನಿವಾರಣೆ ಗ್ಯಾರಂಟಿ
ಶನಿವಾರ ಆಂಜನೇಯ ಸ್ವಾಮಿಯ ಪೂಜೆಗೆ ಅತ್ಯಂತ ಶುಭ ದಿನ ಆಗಿದೆ. ಈ ದಿನಗಳಲ್ಲಿ ಲಡ್ಡು, ಹಣ್ಣುಗಳು, ಪಾಯಸ, ವೀಳ್ಯದೆಲೆ, ಬೆಲ್ಲ–ಹುರಿಗಡಲೆ, ತೆಂಗಿನಕಾಯಿ ಹಾಗೂ ಕೇಸರಿ ಬಾತ್‌ನಂತಹ ನೈವೇದ್ಯಗಳನ್ನು ಭಕ್ತಿಯಿಂದ ಅರ್ಪಿಸಿದರೆ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಆಂಜನೇಯ ಸ್ವಾಮಿಯ ಅನುಗ್ರಹದಿಂದ ಜೀವನದಲ್ಲಿ ಶಾಂತಿ, ಸಂತೋಷ, ಸುಖ–ಸಮೃದ್ಧಿ ಮತ್ತು ರಕ್ಷಣೆಯು ಲಭಿಸುತ್ತದೆ ಎನ್ನಲಾಗುತ್ತದೆ.
ಹನುಮಾನ್ -
ಬೆಂಗಳೂರು: ಕೆಲವರು ಆಂಜನೇಯ ಸ್ವಾಮಿಯನ್ನು (Anjaneya) ಪ್ರತಿದಿನವೂ ಭಕ್ತಿಯಿಂದ ಸ್ಮರಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಶನಿವಾರದ ದಿನ ಆಂಜನೇಯ ಸ್ವಾಮಿಗೆ ವಿಶೇಷವಾಗಿ ಸಮರ್ಪಿತವಾಗಿವೆ. ಈ ದಿನದಲ್ಲಿ ಭಕ್ತಿಯಿಂದ ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಭಯ, ದುಃಖ, ಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ವಿಶೇಷವಾಗಿ ಕಷ್ಟದ ಸಮಯದಲ್ಲಿ ಆಂಜನೇಯ ಸ್ವಾಮಿಯನ್ನು ಆರಾಧಿಸಿದರೆ ಆತ ಶೀಘ್ರ ಫಲವನ್ನು ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ.
ಹಾಗೇ ಶನಿವಾರದ ದಿನ ಆಂಜನೇಯ ಸ್ವಾಮಿಗೆ ನೈವೇದ್ಯ ಅರ್ಪಿಸುವುದಕ್ಕೂ ವಿಶೇಷ ಮಹತ್ವವಿದ್ದು, ಆತನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರಲಿದೆ. ಜೊತೆಗೆ ಜೀವನದಲ್ಲಿ ಯಶಸ್ಸು ಲಭಿಸಲಿದೆ. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರ ಸಲಹೆಯಂತೆ(Astro Tips) ಹನುಮಂತನ ಅನುಗ್ರಹ ಪಡೆಯಲು ಯಾವ ನೈವೇದ್ಯ ಅರ್ಪಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಬೇಳೆ ಹಿಟ್ಟಿನಿಂದ ಮಾಡಿದ ಲಡ್ಡು
ಆಂಜನೇಯ ಸ್ವಾಮಿಗೆ ಉದ್ದಿನ ಬೇಳೆಯಿಂದ ಅಥವಾ ಕಡಲೆ ಬೇಳೆಯಿಂದ ತಯಾರಿಸಿದ ಸಿಹಿ ಪದಾರ್ಥಗಳು ತುಂಬಾ ಪ್ರಿಯ. ಈ ದಿನಗಳಲ್ಲಿ ಬೇಳೆ ಹಿಟ್ಟಿನಿಂದ ಮಾಡಿದ ಲಡ್ಡು ಅಥವಾ ಉಂಡೆಯನ್ನು ಅರ್ಪಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಹಾಗೂ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ಕೆಂಪು ಬಣ್ಣದ ಹಣ್ಣುಗಳು
ಆಂಜನೇಯ ಸ್ವಾಮಿಗೆ ಹಣ್ಣುಗಳನ್ನು ಅರ್ಪಿಸುವುದೂ ಕೂಡ ಅತ್ಯಂತ ಶುಭಕರ. ವಿಶೇಷವಾಗಿ ಕೆಂಪು ಬಣ್ಣದ ಹಣ್ಣುಗಳು ಆಂಜನೇಯನಿಗೆ ಅತೀ ಪ್ರಿಯವೆಂದು ನಂಬಲಾಗಿದೆ. ಶನಿವಾರದಂದು ಬಾಳೆಹಣ್ಣು, ದಾಳಿಂಬೆ ಅಥವಾ ಸೇಬು ಹಣ್ಣುಗಳನ್ನು ಅರ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇದೆ.
ಅಕ್ಕಿ ಪಾಯಸ
ಪಾಯಸವು ಆಂಜನೇಯ ಸ್ವಾಮಿಗೆ ಇಷ್ಟವಾದ ಮತ್ತೊಂದು ನೈವೇದ್ಯ. ಅಕ್ಕಿ ಮತ್ತು ಹಾಲಿನಿಂದ ತಯಾರಿಸಿದ ಪಾಯಸವನ್ನು ಈ ದಿನಗಳಲ್ಲಿ ಅರ್ಪಿಸಿದರೆ ಮನೆಯಲ್ಲಿ ಐಶ್ವರ್ಯ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಪೂಜೆಯ ನಂತರ ಪಾಯಸವನ್ನು ಪ್ರಸಾದವಾಗಿ ಹಂಚುವುದರಿಂದ ಪುಣ್ಯಫಲ ದೊರೆಯುತ್ತದೆ ಎನ್ನುವ ನಂಬಿಕೆ ಇದೆ.
Astro Tips: ಮನೆಯಲ್ಲಿ ಸಾಕುವ ಈ ಪ್ರಾಣಿಗಳು ನಿಮ್ಮ ಬದುಕನ್ನು ಬಂಗಾರ ಮಾಡುತ್ತದೆ ಅನ್ನುತ್ತದೆ ಶಾಸ್ತ್ರ..!
ವೀಳ್ಯದೆಲೆ
ಆಂಜನೇಯ ಸ್ವಾಮಿಗೆ ಅರ್ಪಿಸುವ ವಸ್ತುಗಳಲ್ಲಿ ವೀಳ್ಯದೆಲೆಗೆ ವಿಶಿಷ್ಟ ಸ್ಥಾನವಿದೆ. ಶತ್ರುಭಾಧೆ, ದೃಷ್ಟಿದೋಷ ಅಥವಾ ದುಷ್ಟ ಶಕ್ತಿಗಳ ಕಾಟ ಇರುವವರು ಶನಿವಾರದಂದು ಆಂಜನೇಯ ಸ್ವಾಮಿಗೆ ವೀಳ್ಯದೆಲೆಯನ್ನು ಅರ್ಪಿಸಬೇಕು. .
ಬೆಲ್ಲ ಮತ್ತು ಹುರಿಗಡಲೆ
ಬೆಲ್ಲ ಮತ್ತು ಹುರಿಗಡಲೆ ಕೂಡ ಆಂಜನೇಯ ಸ್ವಾಮಿಗೆ ಪ್ರಿಯವಾದ ನೈವೇದ್ಯಗಳಾಗಿವೆ. ಸರಳವಾಗಿ ಪೂಜೆ ಮಾಡಲು ಬಯಸುವವರು ಈ ವಸ್ತುಗಳನ್ನು ಅರ್ಪಿಸಬಹುದು. ಈ ರೀತಿ ಮಾಡುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಹಾಗೂ ಮಾನಸಿಕ ನೆಮ್ಮದಿ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.
ತೆಂಗಿನಕಾಯಿ
ಶನಿವಾರದಂದು ಆಂಜನೇಯ ಸ್ವಾಮಿಗೆ ತೆಂಗಿನಕಾಯಿಯನ್ನು ಅರ್ಪಿಸುವುದೂ ಅತ್ಯಂತ ಶುಭಕರ. ತೆಂಗಿನಕಾಯಿಯನ್ನು ಒಡೆದು ಅರ್ಪಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ಸಂಕಷ್ಟದ ಸಮಯದಲ್ಲಿ ಆಂಜನೇಯ ಸ್ವಾಮಿಯೇ ರಕ್ಷಣೆಗೆ ಬರುತ್ತಾನೆ ಎನ್ನುವ ಭರವಸೆ ಇದರಿಂದ ದೊರೆಯುತ್ತದೆ.
ಕೇಸರಿ ಬಾತ್
ಇನ್ನು ಆಂಜನೇಯ ಸ್ವಾಮಿಗೆ ಸಿಹಿ ಭಕ್ಷ್ಯಗಳೆಂದರೆ ವಿಶೇಷ ಮೆಚ್ಚುಗೆ. ಅದರಲ್ಲೂ ಕೇಸರಿ ಬಾತ್ ಆಂಜನೇಯನಿಗೆ ಅತ್ಯಂತ ಪ್ರಿಯ. ಮಂಗಳವಾರ ಮತ್ತು ಶನಿವಾರದಂದು ಕೇಸರಿ ಬಾತ್ ಅನ್ನು ನೈವೇದ್ಯವಾಗಿ ಅರ್ಪಿಸಿದರೆ ಮಂಗಳ ದೋಷ ನಿವಾರಣೆಯಾಗುತ್ತದೆ ಹಾಗೂ ಜೀವನದಲ್ಲಿ ಶುಭಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತದೆ.