ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!.

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ಜುಲೈ 17ನೇ ತಾರೀಖಿನ ಗುರುವಾರದಂದು, ಸಪ್ತಮಿ ತಿಥಿ, ರೇವತಿ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದಿನ ರಾಶಿ ಭವಿಷ್ಯ ಹೀಗಿದೆ..

ಈ ರಾಶಿಯವರಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!.

Horoscope

Profile Pushpa Kumari Jul 17, 2025 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ಸಪ್ತಮಿ ತಿಥಿ, ರೇವತಿ ನಕ್ಷತ್ರದ್ದಲ್ಲಿದ್ದು, ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದು ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಕ್ಲೇಶಕರವಾದ ದಿನವಾಗಿದ್ದು ಸಾಕಷ್ಟು ಮಾನಸಿಕ ಒತ್ತಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇಂದಿನ ದಿನದಲ್ಲಿ ಯಾರ ಸಹಕಾರವೂ ನಿಮಗೆ ದೊರೆಯದ ಕಾರಣ ಮುಖ್ಯವಾದ ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳುವುದು ಒಳ್ಳೆಯದಲ್ಲ. ಹಾಗೆಯೇ ಆರೋಗ್ಯದ ಬಗ್ಗೆ ಗಮನ ಹರಿಸಿವುದು ಮುಖ್ಯ..

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಿತ್ರರಿಂದ ಸಂತೋಷ ಹೊತ್ತು ತರುವ ದಿನವಾಗಿದ್ದು ನಿಮ್ಮ ಕನಸಿನಂತೆ ಇಷ್ಟಾರ್ಥ ಸಿದ್ಧಿಯಾಗಲಿದೆ. ಧನಾ ಆಗಮನವಾಗುವ ಸೂಚನೆ ಇದ್ದು ಆರ್ಥಿಕ ಸಹಕಾರ ಪ್ರಾಪ್ತಿಯಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಅತ್ಯುತ್ತಮವಾದ ದಿನ ಇಂದು ಆಗಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ತುಂಬಾ ಯಶಸ್ಸು ಕಾಣುವ ದಿನವಾಗಲಿದೆ. ಅದರ ಜೊತೆ ಮನೆಯ ಜವಾಬ್ದಾರಿ ಕೂಡ ನಿಭಾಯಿಸಿದರೆ ಗೌರವ ಪ್ರಾಪ್ತಿಯಾಗಲಿದೆ.

ಕಟಕ ರಾಶಿ: ಕಟಕರಾಶಿ ಅವರಿಗೆ ಇಂದು ಮಿಶ್ರ ಫಲ ದಿನವಾಗಿದೆ. ಹಿರಿಯರಿಂದ ಕೆಲವು ವಿಚಾರಕ್ಕೆ ಟೀಕೆಗಳು ಕೇಳಿ ಬರ ಬೇಕಾಗುತ್ತದೆ. ಹೀಗಾಗಿ ದೊಡ್ಡವರ ಸಲಹೆ ಸೂಚನೆಯನ್ನು ವಿನಯವಾಗಿ ಒಪ್ಪಿದರೆ ಯಾವುದೇ ಸಮಸ್ಯೆ ಕಂಡುಬರಲಾರದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನವಾಗಲಿದೆ. ನಿಮಗೆ ಹೃದಯಕ್ಕೆ ಸಂಬಂಧಿಸಿದಂತಹ ಸಮಸ್ಯೆ ಉಂಟಾಗಲಿದೆ. ಅತೀ ವೈಯಕ್ತಿಕ ವಿಚಾರಗಳಿಂದ ನೋವು ಅನುಭವಿಸುವಿರಿ. ಈ ದಿನ ಧ್ಯಾನ ಮಾಡಿದರೆ ತುಂಬಾ ಒಳ್ಳೆಯದು. ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಜಾಗೃತರಾಗಿರಿ.

ಇದನ್ನು ಓದಿ:Vastu Tips: ಆರ್ಥಿಕ ತೊಂದರೆ ಉಂಟಾಗದಿರಲು ಈ ವಸ್ತುಗಳನ್ನು ಎಂದಿಗೂ ದಾನ ನೀಡಬೇಡಿ!

ಕನ್ಯಾ ರಾಶಿ: ಈ ದಿನ ಕನ್ಯಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ‌. ನಿಮ್ಮ ಕೆಲಸ ಕಾರ್ಯ ಗಳಿಗೆ ಎಲ್ಲರಿಂದ ಸಹಕಾರ ಪ್ರಾಪ್ತಿಯಾಗಲಿದೆ. ಇತರರಿಂದ ದೊರೆತ ಸಹಕಾರವನ್ನು ಧನಾತ್ಮಕವಾಗಿ ಪರಿಗಣಿಸಿ ಸ್ವೀಕರಿಸಿದರೆ ಆಗ ಸಾಮರಸ್ಯ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ ಇರಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಹಿತಶತ್ರುಗಳ ಕಾಟ ಇರಲಾರದು. ನಿಮ್ಮ ಯಾವುದೇ ಮಾತು ಅಥವಾ ಕಾರ್ಯಗಳಿಗೆ ವಿರೋಧ ಇದ್ದರೂ ಅವೆಲ್ಲವೂ ನಿವಾರಣೆ ಆಗಲಿದೆ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಹಣಕಾಸಿನ ವಿಚಾರದಲ್ಲಿ ಇಂದು ತುಂಬಾ ಎಚ್ಚರಿಕೆ ಯಿಂದಿರುವುದು ಅವಶ್ಯಕವಾಗಿದೆ. ವ್ಯಾಪಾರ ವ್ಯವಹಾರ ಮಾಡುವವರು ಇಂದು ಯಾವುದೇ ಹೊಸ ನಿರ್ಧಾರ ಕೈಗೊಳ್ಳುವುದು ಉತ್ತಮವಲ್ಲ. ಧನವ್ಯಯವಾಗುವ ಸಾಧ್ಯತೆ ಇದೆ. ಪ್ರೀತಿ , ಪ್ರೇಮ ದಾಂಪತ್ಯ ವಿಚಾರದಲ್ಲಿ ವೈಮನಸ್ಸು ಮೂಡಲಿದ್ದು ಈ ಬಗ್ಗೆ ಜಾಗೃತೆ ವಹಿಸಿ.

ಧನಸ್ಸು: ಈ ರಾಶಿ ಅವರಿಗೆ ತಾಯಿಯ ಆರೋಗ್ಯದಲ್ಲಿ ಏರು ಪೇರು ಕಂಡು ಬರುವ ಸಾಧ್ಯತೆ ಇದ್ದು ಈ ಬಗ್ಗೆ ಗಮನ ಹರಿಸ ಬೇಕು. ಇದರಿಂದಾಗಿ ಕಾರ್ಯಕ್ಷೇತ್ರ ಜವಾಬ್ದಾರಿಯಲ್ಲಿ ಸಮಸ್ಯೆ ಉಂಟಾಗ ಲಿದ್ದು ಕೆಲಸ ಮಾಡಲು ಕಿರಿ ಕಿರಿ ಉಂಟಾಗಲಿದೆ. ಹೀಗಾಗಿ ಎಲ್ಲವನ್ನು ನಿಭಾಯಿಸಿ ಕೆಲಸ ಕಾರ್ಯ ದಲ್ಲಿ ತೊಡಗಿಕೊಂಡರೆ ಉತ್ತಮ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಿದೆ. ಸಾಮಾಜಿಕ ಜಾಲ ತಾಣ ದಲ್ಲಿ ಪ್ರಭಾವಿಗಳು, ರಾಜಕೀಯ ರಂಗದಲ್ಲಿರುವವರಿಗೆ ಈ ದಿನ ಬಹಳ ಪ್ರಶಸ್ತ ವಾಗಿದೆ. ಹೊಸ ಯೋಜನೆಯನ್ನು ಕೈಗೊಳ್ಳಲು ಕೂಡ ಈ ದಿನ ಸಕಾಲವಾಗಿದೆ.

ಕುಂಭ ರಾಶಿ: ಕುಂಭರಾಶಿ ಅವರಿಗೆ ಈ ದಿನ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಅವಶ್ಯಕ ಇರಲಿದೆ. ಮನೆಯಲ್ಲಿ ಸ್ವಲ್ಪ ಕಿರಿಕಿರ ಉಂಟಾಗುವ ಸಂದರ್ಭ ಎದುರಾಗಲಿದೆ. ಹಾಗಾಗಿ ತಾಳ್ಮೆಗೆಡದೆ ಎಲ್ಲವನ್ನು ಶಾಂತಯುತವಾಗಿ ಸೌಹಾರ್ದ ಪೂರ್ಣವಾಗಿ ನಿಭಾಯಿಸಬೇಕು.

ಮೀನ ರಾಶಿ: ಮೀನ ರಾಶಿ ಅವರಿಗೆ ಇಂದಿನ ದಿನ ಅತ್ಯುತ್ತಮವಾಗಿ ಇರಲಿದೆ. ನಿಮ್ಮ ರಾಶಿಯಲ್ಲಿ ಚಂದ್ರನಿದ್ದು ಈ ದಿನ ನೆಮ್ಮದಿ ಶಾಂತಿ ಎಲ್ಲವೂ ಸಿದ್ಧಿಯಾಗಲಿದೆ‌. ನಿಮ್ಮ ಸಂತೋಷ ಇತರರಿಗೂ ಹಂಚುವ ದಿನವಾಗಲಿದೆ. ಹಾಗೆಯೇ ಮಾನಸಿಕ ನೆಮ್ಮದಿಯೂ ಸಿಗಲಿದೆ.