Vastu Tips: ಆರ್ಥಿಕ ತೊಂದರೆ ಉಂಟಾಗದಿರಲು ಈ ವಸ್ತುಗಳನ್ನು ಎಂದಿಗೂ ದಾನ ನೀಡಬೇಡಿ!
ಪ್ರತಿಯೊಂದು ಧರ್ಮದಲ್ಲೂ ದಾನಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ನಮ್ಮ ಪಾಪ ಕರ್ಮಗಳನ್ನು ಕಳೆಯಲು ಇದೊಂದು ಉತ್ತಮ ಮಾರ್ಗ ಎನ್ನುವುದನ್ನು ಬಹುತೇಕ ಎಲ್ಲ ಧರ್ಮ ಗ್ರಂಥಗಳೂ ಹೇಳುತ್ತವೆ. ಆದರೂ ಕೆಲವೊಂದು ವಸ್ತುಗಳನ್ನು ದಾನ ಎಂದಿಗೂ ಮಾಡಬಾರದು ಎನ್ನುತ್ತದೆ ಹಿಂದೂ ಧರ್ಮ ಶಾಸ್ತ್ರ. ಯಾಕೆ, ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.


ಆರ್ಥಿಕ ತೊಂದರೆಗಳು ಕೆಲವೊಮ್ಮೆ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ಎಷ್ಟೋ ಶ್ರೀಮಂತರಾಗಿದ್ದರೂ ಕೂಡ ಬೀದಿಗೆ ಬರಲು ಹೆಚ್ಚಿನ ಸಮಯವೇನೂ ಬೇಕಾಗಿರುವುದಿಲ್ಲ. ಅದಕ್ಕಾಗಿಯೇ ಹಿರಿಯರು ಕೆಲವೊಂದು ನಿಯಮಗಳನ್ನು (Vastu Tips) ಮಾಡಿರುತ್ತಾರೆ. ಆದರೆ ನಾವು ಅದೆಲ್ಲ ಸುಳ್ಳು ಎಂದುಕೊಂಡು ಅಥವಾ ಹಿರಿಯ ನಂಬಿಕೆಯ ಮೇಲಿನ ತಾತ್ಸಾರ ಭಾವದಿಂದಲೋ ಅದನ್ನು ಕಡೆಗಣಿಸಿ ಬಿಡುತ್ತೇವೆ. ಆದರೆ ಸಂಕಟ ಬಂದಾಗಲೇ ಅದರ ನೆನಪಾಗುವುದು. ಹಿರಿಯ ಬಹುತೇಕ ನಂಬಿಕೆಗಳು ವಾಸ್ತು ಶಾಸ್ತ್ರ (Vastu Shastra)ವನ್ನು ಆಧರಿಸಿದೆ. ಅಂತಹ ಒಂದು ನಂಬಿಕೆಗಳಲ್ಲಿ ದಾನಗಳ (vastu for donate) ಕುರಿತಾಗಿ ಹೇಳುವ ಕೆಲವು ನಿಯಮಗಳು ಇವೆ.
ಆರ್ಥಿಕ ಸಂಕಷ್ಟಗಳನ್ನು ತಪ್ಪಿಸಲು ಕೆಲವೊಂದು ವಸ್ತುಗಳನ್ನು ದಾನ ನೀಡಬಾರದು ಎನ್ನುತ್ತಾರೆ ಹಿರಿಯರು. ಅಂತಹ ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಹಿಂದೂ ಧರ್ಮದಲ್ಲಿ ದಾನ ನೀಡುವುದನ್ನು ಬಹಳ ಶುಭವೆಂದು ಪರಿಗಣಿಸಲಾಗಿದ್ದರೂ ಈ ವಸ್ತುಗಳನ್ನು ದಾನ ನೀಡಲೇಬಾರದು ಎನ್ನಲಾಗುತ್ತದೆ. ದಾನದಿಂದ ನಮ್ಮ ಪಾಪ ಕರ್ಮಗಳು ದೂರವಾಗುತ್ತವೆಯಾದರೂ ಇಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ವಸ್ತುಗಳನ್ನು ದಾನ ಮಾಡಬೇಕು ಎನ್ನುತ್ತದೆ ಶಾಸ್ತ್ರ. ಅವುಗಳು ಯಾವುದು ಎನ್ನುವ ಕುರಿತು ಪಂಡಿತ್ ಜನ್ಮೇಶ್ ದ್ವಿವೇದಿ ಹೇಳುವುದು ಹೀಗೆ...

ತುಳಸಿ
ತುಳಸಿಯನ್ನು ತಾಯಿ ಎಂದು ಪೂಜಿಸಲಾಗುತ್ತದೆ. ಇದನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ತುಳಸಿಯನ್ನು ಎಂದಿಗೂ ದಾನ ನೀಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ. ತುಳಸಿಯನ್ನು ಇನ್ನೊಬ್ಬರಿಗೆ ನೀಡುವುದು ಎಂದರೆ ಮನೆಯಲ್ಲಿರುವ ಸಂಪತ್ತನ್ನು ದಾನ ಮಾಡುವುದು ಎಂದರ್ಥ. ಹೀಗಾಗಿ ಸಂಜೆ ವೇಳೆ ಯಾರಿಗೂ ತುಳಸಿ ಗಿಡವನ್ನು ದಾನ ಮಾಡಕೂಡದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ತರಬಹುದು.

ಮೊಸರು
ಸಂಜೆ ಮನೆಯಿಂದ ಮೊಸರನ್ನು ಎಂದಿಗೂ ದಾನ ಮಾಡಬಾರದು. ಮೊಸರನ್ನು ಚಂದ್ರನ ಅಂಶವೆಂದು ಪರಿಗಣಿಸಲಾಗುತ್ತದೆ. ಈ ವಸ್ತುವು ಜೀವನದಲ್ಲಿ ಹಣದ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ಜೀವನದಲ್ಲಿ ಸ್ಥಿರತೆಯನ್ನು ತರಲು ಬಯಸಿದರೆ ಅದನ್ನು ಸಂಜೆ ದಾನ ಮಾಡಬಾರದು. ಮೊಸರು ಮನೆಮಂದಿಯ ಶಕ್ತಿಯನ್ನು ಸಕಾರಾತ್ಮಕವಾಗಿರಿಸುತ್ತದೆ.

ಉಪ್ಪು
ಉಪ್ಪನ್ನು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕಲು ಬಳಸಲಾಗುತ್ತದೆ. ಇದು ಶಕ್ತಿ ಮತ್ತು ಸಮತೋಲನಕ್ಕೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಅದನ್ನು ಸಂಜೆ ದಾನ ಮಾಡಿದರೆ ಅದು ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: Vastu Tips: ಮನೆಯಲ್ಲಿ ಸ್ಫಟಿಕದ ಮರವನ್ನು ಇಡಬಹುದೆ?
ದಾನ ಮಾಡುವಾಗ ನೆನಪಿರಲಿ
ಮನೆಯಿಂದ ಏನೇ ದಾನ ನೀಡುವುದಿದ್ದರೂ ಅದನ್ನು ಬೆಳಗ್ಗೆ ಅಥವಾ ಮಧ್ಯಾಹ್ನ ನೀಡಿ. ಸಂಜೆ ಸಮಯವನ್ನು ಎಂದಿಗೂ ದಾನ ಕಾರ್ಯಗಳಿಗೆ ಆಯ್ಕೆ ಮಾಡಬೇಡಿ.
ಅನಿವಾರ್ಯ ಪರಿಸ್ಥಿತಿಯಲ್ಲಿ ನಿರ್ಗತಿಕ ವ್ಯಕ್ತಿಗೆ ದಾನ ಮಾಡುವುದಾದರೆ ನೀಡುವ ವಸ್ತುವನ್ನು ಕೆಳಗೆ ಇರಿಸಿ ಅವನಿಗೆ ತೆಗೆದುಕೊಳ್ಳಲುಬಿಡಿ. ಸ್ವತಃ ಕೈಗಳಿಂದ ಯಾವುದೇ ವಸ್ತುವನ್ನು ದಾನ ನೀಡಬೇಡಿ.