ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಮನೆಯ ಮುಖ್ಯ ದ್ವಾರದಲ್ಲಿ ಅರಿಶಿನ ನೀರು ಚಿಮುಕಿಸಿದರೆ ಸಿಗುತ್ತವೆ ಈ ಫಲಗಳು..!

ಮನೆಯ ಮುಖ್ಯ ದ್ವಾರದಲ್ಲಿ ನೀರು, ಉಪ್ಪು ನೀರು ಅಥವಾ ಅರಿಶಿನ ನೀರನ್ನು ಚಿಮುಕಿಸುವುದು ಹಿಂದೂ ಸಂಪ್ರದಾಯದಲ್ಲಿ ಮಂಗಳಕರ ಆಚರಣೆಯಾಗಿ ಪರಿಗಣಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ, ಸುಖ-ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.

ಮನೆಯ ಬಾಗಿಲಿಗೆ ನೀರು ಹಾಕುವ ಹಿಂದಿದೆ ಈ ಶುಭ ರಹಸ್ಯ

ಜ್ಯೋತಿಷ್ಯ ಶಾಸ್ತ್ರ (ಎಐ ರಚಿತ ಚಿತ್ರ) -

Profile
Sushmitha Jain May 27, 2026 10:07 AM

ಬೆಂಗಳೂರು: ಮೇ 27: ಹಿಂದೂ ಧರ್ಮದಲ್ಲಿ ಶಾಸ್ತ್ರ ಮತ್ತು ಸಂಪ್ರದಾಯಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಮನೆ ನಿರ್ಮಾಣದಿಂದ ಹಿಡಿದು ದೈನಂದಿನ ಜೀವನದಲ್ಲಿ ಅನುಸರಿಸುವ ಅನೇಕ ಆಚರಣೆಗಳವರೆಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ(Astrology) ಉಲ್ಲೇಖಿಸಲಾಗಿದೆ. ಇಂತಹ ಕೆಲವು ಸಂಪ್ರದಾಯಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.

ಹಿಂದೂ ಸಂಸ್ಕೃತಿಯಲ್ಲಿ ಬೆಳಗಿನ ಜಾವ ಮನೆ ಮುಂಭಾಗವನ್ನು ಸ್ವಚ್ಛಗೊಳಿಸಿ ನೀರನ್ನು ಚಿಮುಕಿಸಿ ರಂಗೋಲಿ ಹಾಕುವ ಪದ್ಧತಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮನೆಯ ಮುಖ್ಯ ದ್ವಾರದ ಬಳಿ ನೀರನ್ನು ಚಿಮುಕಿಸುವುದು ಶುಭದ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ(Astro Tips) ಪ್ರತಿದಿನ ಈ ಆಚರಣೆಯನ್ನು ಅನುಸರಿಸಿದ್ದರೆ ಎಷ್ಟೆಲ್ಲಾ ಪ್ರಯೋಜನಗಳು ಇವೆ..? ಅದರ ಹಿಂದಿರುವ ಕಾರಣವೇನು ಮತ್ತು ಇದರ ಮಹತ್ವ ಏನು ಎಂಬುದನ್ನು ತಿಳಿಯೋಣ.

ಮುಖ್ಯ ದ್ವಾರದ ಬಳಿ ನೀರು ಚಿಮುಕಿಸುವುದರ ಮಹತ್ವ

ಶಾಸ್ತ್ರಗಳ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಬೆಳಗ್ಗೆ ನೀರನ್ನು ಚಿಮುಕಿಸುವುದು ಅತ್ಯಂತ ಮಂಗಳಕರ ಆಚರಣೆ. ಬೆಳಿಗ್ಗೆ ಸ್ನಾನಾದಿ ಕಾರ್ಯಗಳನ್ನು ಮುಗಿಸಿದ ನಂತರ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಮನೆಯ ಬಾಗಿಲಿನ ಬಳಿ ಚಿಮುಕಿಸಿದರೆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎನ್ನಲಾಗುತ್ತದೆ. ಜೊತೆಗೆ ಕುಟುಂಬದಲ್ಲಿನ ಕಲಹಗಳು ಕಡಿಮೆಯಾಗುತ್ತವೆ ಮತ್ತು ಧನಾತ್ಮಕ ಶಕ್ತಿಗಳ ಪ್ರವೇಶ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.

Astro Tips: ಮಂಗಳ ದೋಷ ನಿವಾರಣೆಗೆ ಮಂಗಳವಾರ ಈ ಕೆಲಸ ಮಾಡಿ; ಬದುಕು ಬಂಗಾರವಾಗುತ್ತದೆ

ಉಪ್ಪು ನೀರನ್ನು ಚಿಮುಕಿಸುವುದರಿಂದ ದೊರೆಯುವ ಲಾಭ

ವಾರಕ್ಕೊಮ್ಮೆ, ವಿಶೇಷವಾಗಿ ಶುಕ್ರವಾರದಂದು, ಮನೆಯ ಮುಖ್ಯ ದ್ವಾರದ ಬಳಿ ಉಪ್ಪು ಬೆರೆಸಿದ ನೀರನ್ನು ಚಿಮುಕಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಉಪ್ಪು ನೀರು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುವುದಲ್ಲದೆ, ಮನೆಯ ವಾತಾವರಣವನ್ನು ಶುದ್ಧವಾಗಿರಿಸಲು ಸಹ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕೆಲವರು ಇದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹಾಗೂ ದೋಷಗಳ ಪ್ರಭಾವವೂ ಕಡಿಮೆಯಾಗುತ್ತದೆ ಎಂದು ನಂಬುತ್ತಾರೆ.

ಅರಿಶಿನ ನೀರಿನ ಮಂಗಳಕರ ಪರಿಣಾಮ

ಅರಿಶಿನವನ್ನು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿ ನೀರಿಗೆ ಸ್ವಲ್ಪ ಅರಿಶಿನ ಬೆರೆಸಿ ಮನೆಯ ಮುಖ್ಯ ದ್ವಾರದಲ್ಲಿ ಚಿಮುಕಿಸಿದರೆ ಲಕ್ಷ್ಮೀ ಕಟಾಕ್ಷ ಲಭಿಸುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಮನೆಯಲ್ಲಿ ಧನ, ಧಾನ್ಯ ಮತ್ತು ಐಶ್ವರ್ಯ ಹೆಚ್ಚಾಗಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಪ್ರತಿದಿನ ಈ ರೀತಿಯ ಸರಳ ಆಚರಣೆಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಶುಭ ವಾತಾವರಣ ನಿರ್ಮಾಣವಾಗಿ ಕುಟುಂಬದ ಸಂತೋಷ ಮತ್ತು ನೆಮ್ಮದಿ ಹೆಚ್ಚುತ್ತದೆ ಎಂಬುದು ಶಾಸ್ತ್ರಗಳ ನಂಬಿಕೆ.