Astro Tips: ಇಂದು ಕಾರ್ತಿಕ ಸೋಮವಾರ: ಈ ರೀತಿ ಶಿವನ ಆರಾಧನೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ
ಕಾರ್ತಿಕ ಮಾಸದ ಪ್ರತಿ ದಿನವೂ ವಿಶೇಷವಾದ ಮಹತ್ವವನ್ನು ಹೊಂದಿದ್ದು, ಅದರಲ್ಲೂ ಸೋಮವಾರ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ದಿನ ಶ್ರದ್ಧೆ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಹಾಗಾದರೆ ಕಾರ್ತಿಕ ಸೋಮವಾರ ಶಿವನ ಪೂಜಿಸೋದು ಹೇಗೆ? ಮಾಹಿತಿ ಇಲ್ಲಿದೆ.
ಶಿವ. -
ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Dharma) ಸೋಮವಾರ (Monday) ಶುಭ ದಿನ ಎಂಬ ನಂಬಿಕೆ ಇದೆ. ಜೋತಿಷ್ಯ ಶಾಸ್ತ್ರಗಳ(Astrology) ಪ್ರಕಾರ, ಇದು ಶಿವನಿಗೆ(Lord shiva) ಬಹಳ ಪ್ರಿಯವಾದ ದಿನವಾಗಿದ್ದು, ಸೋಮವಾರದಂದು ಶಿವನನ್ನು ಪೂಜಿಸುವುದರಿಂದ ಮತ್ತು ಪ್ರಾಮಾಣಿಕ ಹೃದಯದಿಂದ ಆತನನ್ನು ಸ್ಮರಿಸುವುದರಿಂದ ಭಕ್ತರ ಎಲ್ಲ ಸಮಸ್ಯೆಗಳು ಶೀಘ್ರದಲ್ಲೇ ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ.
ಅದರಲ್ಲೂ ಕಾರ್ತಿಕ ಮಾಸದಲ್ಲಿ ಮಾಡುವ ಶಿವನ ಪೂಜೆಗೆ ವಿಶೇಷ ಮಹತ್ವವನ್ನು ನೀಡಲಾಗಿದ್ದು, ಕಾರ್ತಿಕ ಮಾಸದಲ್ಲಿ ಸಂಪತ್ತು ಮತ್ತು ಧರ್ಮ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಮಾಸವು ಶಿವನಿಗೆ ಬಹಳ ಪ್ರಿಯವಾದುದು. ಈ ತಿಂಗಳ ಸೋಮವಾರ ಕೆಲವು ವಿಶೇಷ ಕ್ರಮಗಳನ್ನು ಮಾಡುವ ಮೂಲಕ ಶಿವ ಅನುಗ್ರಹ ಪಡೆಯಬಹುದಾಗಿದ್ದು, ಕಾರ್ತಿಕ ಸೋಮವಾರದಿಂದು ಶಿವ ಪೂಜೆ ಮಾಡುವುದು ಹೇಗೆ? ಯಾವ ಮಂತ್ರ ಪಠಿಸಬೇಕು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಪುರಾಣಗಳ ಪ್ರಕಾರ ಕಾರ್ತಿಕ ಮಾಸದ ವ್ರತಾಚರಣೆಗೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸ ವ್ರತಾಚರಣೆಯಿಂದ ಹಿಂದಿನ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗಿದೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಮನೆ ಅಭಿವೃದ್ಧಿ ಆಗುವುದರ ಜತೆಗೆ, ಸಂಪತ್ತು, ಆರೋಗ್ಯವೂ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಲೌಕಿಕ ಬಯಕೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಎಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಕಾರ್ತಿಕ ಮಾಸದ ಸೋಮವಾರದ ಪೂಜೆಯನ್ನು ಉಪವಾಸವಿದ್ದು ಮಾಡಿದರೆ ಶಿವನ ಪುಣ್ಯ ಬೇಗನೆ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಉಪವಾಸಕ್ಕೆ ಕಾರ್ತಿಕ ಸೋಮವಾರ ಶ್ರೇಷ್ಠವೆಂದು ಹೇಳಲಾಗುತ್ತದೆ.
ಪೂಜೆ ಹೀಗೆ ಮಾಡಿ
ಸೋಮವಾರ ಶಿವನನ್ನು ಪೂಜಿಸಲು ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ, ಶಿವಲಿಂಗ ಅಥವಾ ಶಿವ ಪಾರ್ವತಿ ಫೋಟೊಕ್ಕೆ ಹೂಗಳಿಂದ ಅಲಂಕಾರ ಮಾಡಿ, ಸೂರ್ಯ ಹುಟ್ಟುವ ಮುಂಚೆ ದೇವರಿಗೆ ದೀಪ ಹಚ್ಚಬೇಕು. ನಂತರ 'ಓಂ ನಮಃ ಶಿವಾಯ' ಅಂತ ಮಂತ್ರ ಪಠಣೆ ಮಾಡಿ. ಹಾಗೇ ಶಿವನ ಫೋಟೊ ಎದುರು ದೇವರಿಗೆ ಎರಡು ದೀಪವನ್ನು ಹಚ್ಚಿ ವಿಶೇಷ ಪೂಜೆ ಮಾಡಬಹುದು.
ಈ ಸುದ್ದಿಯನ್ನು ಓದಿ: Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್ ಇಂಡಿಯಾ ಎಂದ ನೆಟ್ಟಿಗರು
ಉಪವಾಸ ಮಾಡುವ ವಿಧಾನ ಹೇಗೆ?
ಸೋಮವಾರ ಉಪವಾಸವನ್ನು ಮಾಡಲು ಇಚ್ಚಿಸುವವರು ಇಡೀ ದಿನ ಆಹಾರ ತ್ಯಜಿಸಿ, ರಾತ್ರಿ ಶಿವನಿಗೆ ಪೂಜೆ ಸಲ್ಲಿಸಬೇಕು. ಸಾತ್ವಿಕ ಆಹಾರವನ್ನು ಸೇವಿಸಬಹುದು. ಈ ರೀತಿ ಉಪವಾಸ ಮಾಡುವವರು ದಿನದಲ್ಲಿ ನೀರು, ಹಣ್ಣಿನ ಜ್ಯೂಸ್ ಹಾಗೂ ಹಣ್ಣುಗಳನ್ನು ಸೇವಿಸಬಹುದು ಅಥವಾ ಏನೂ ತಿನ್ನದೇ ಇದ್ದರೆ ಇನ್ನೂ ಒಳ್ಳೆಯದು. ಹೀಗೆ ಉಪವಾಸ ವ್ರತಾಚರಣೆ ಮಾಡುವುದರಿಂದ ಶುಭ ಫಲಗಳು ನಿಮ್ಮದಾಗಲಿದೆ.
ಇನ್ನು ಕಾರ್ತಿಕ ಮಾಸ ವ್ರತಾಚರಣೆ ಮಾಡುವುದರಿಂದ ಪೂರ್ವ ಜನ್ಮದ ಕರ್ಮಗಳಿಂದ ಮುಕ್ತಿ ಹೊಂದಬಹುದಾಗಿದೆ. ಅದರಲ್ಲೂ ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುವುದರ ಜತೆಗೆ ಇಷ್ಟಾರ್ಥಗಳು ನೆರವೇರುತ್ತವೆ.