ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri 2025: ನವರಾತ್ರಿಯ ಐದನೇ ದಿನ: ಸ್ಕಂದ ಮಾತ ದೇವಿಯ ಆರಾಧನೆ ಏಕೆ?

ನವರಾತ್ರಿಯ ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ ದೇವಿ, ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಿದರೆ ಐದನೇ ದಿನ ಸ್ಕಂದ ಮಾತೆ ದೇವಿಯನ್ನು ಆರಾಧಿಸಲಾಗುತ್ತದೆ. ಈಕೆಯನ್ನು ಯುದ್ಧದ ದೇವರು ಸ್ಕಂದ ಅಥವಾ ಕಾರ್ತಿಕೇಯನ ತಾಯಿ ಎಂದು ಕರೆಯಲಾಗುತ್ತದೆ. ನವರಾತ್ರಿಯಲ್ಲಿ ಈಕೆಯನ್ನು ಯಾಕೆ ಪೂಜಿಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರು: ನವರಾತ್ರಿಯ (Navaratri 2025) ಐದನೇ ದಿನ ದುರ್ಗಾ ದೇವಿಯ (Durga devi) ಒಂಬತ್ತು ಅವತಾರಗಳಲ್ಲಿ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ದುರ್ಗಾದೇವಿಯ ಐದನೇ ರೂಪವಾಗಿರುವ ಸ್ಕಂದಮಾತಾ (Skanda mata) ದೇವಿಯು ಯುದ್ಧದ ದೇವರು ಸ್ಕಂದ ಅಥವಾ ಕಾರ್ತಿಕೇಯನ ತಾಯಿ ಎಂದು ಕರೆಯಲಾಗುತ್ತದೆ. ಈಕೆಯನ್ನು ಪದ್ಮಾಸನ ದೇವಿ ಎಂದು ಕೂಡ ಕರೆಯುತ್ತಾರೆ. ನಾಲ್ಕು ತೋಳುಗಳಿರುವ ದೇವಿಯ ಎಡಕೈಗಳಲ್ಲಿ ಕಮಲದ ಹೂವು, ಆಯುಧ, ಬಲಗೈಗಳಲ್ಲಿ ಮಗ ಸ್ಕಂದ ಹಾಗೂ ವರ ನೀಡುವ ಭಂಗಿಯಲ್ಲಿದೆ. ಸಿಂಹದ ಮೇಲೆ ಕುಳಿತಿರುವ ಇವಳಿಗೆ ಸಿಂಹಾಸನೇಶ್ವರಿ ಎನ್ನುವ ಹೆಸರು ಕೂಡ ಇದೆ.

ಹಿನ್ನೆಲೆ

ಸ್ಕಂದಮಾತಾ ಎಂಬ ಪದವು ಎರಡು ಪದಗಳಿಂದ ಬಂದಿದೆ. ಸ್ಕಂದ ಎಂದರೆ ಕಾರ್ತಿಕೇಯ ಮತ್ತು ಮಾತಾ ಎಂದರೆ ತಾಯಿ. ಈಕೆಯ ಕುರಿತಾದ ಕಥೆಯು ಆಕೆಯ ಮಗ ಸ್ಕಂದ ಅಥವಾ ಕಾರ್ತಿಕೇಯನ ಜನನಕ್ಕೆ ಸಂಬಂಧಿಸಿದೆ. ತಾರಕಾಸುರ ಎಂಬ ರಾಕ್ಷಸನ ಸಾವು ಶಿವ ಮತ್ತು ಪಾರ್ವತಿಯರ ಸಂಗಮದಿಂದ ಹುಟ್ಟುವ ಪುತ್ರನಿಂದ ಮಾತ್ರ ಸಾಧ್ಯ ಎನ್ನುವ ವರವಿತ್ತು. ಶಿವ ತಪಸ್ಸಿನಲ್ಲಿ ನಿರತನಾಗಿದ್ದು, ಆತನನ್ನು ಕಾಮದೇವ ಎಬ್ಬಿಸಿದ ಬಳಿಕ ಶಿವ ಮತ್ತು ಪಾರ್ವತಿಯ ಸಂಗಮದಿಂದ ಸ್ಕಂದ ಅಥವಾ ಕಾರ್ತಿಕೇಯನ ಜನನವಾಗುತ್ತದೆ. ಇದರಿಂದ ಪಾರ್ವತಿಗೆ ಸ್ಕಂದಮಾತಾ ಎನ್ನುವ ಹೆಸರು ಬಂತು.

ಆರಾಧನೆಯಿಂದ ಎಂದು ಫಲ?

ನವರಾತ್ರಿಯ ಐದನೇ ದಿನ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಆಕೆಯ ಅನುಗ್ರಹದಿಂದ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಪಡೆಯಬಹುದು. ಸ್ಕಂದ ಮಾತೆಯು ಮಣಿಪುರ ಚಕ್ರದೊಂದಿಗೆ ಸಂಬಂಧ ಹೊಂದಿದ್ದು, ಅವಳನ್ನು ಪೂಜಿಸುವುದರಿಂದ ನಾವು ಇಚ್ಛಾಶಕ್ತಿ, ಧೈರ್ಯ ಮತ್ತು ಚೈತನ್ಯವನ್ನು ಪಡೆಯಬಹುದು. ಆಕೆ ತನ್ನ ಭಕ್ತರಿಗೆ ಶಕ್ತಿ, ಧೈರ್ಯ ಮತ್ತು ಅವರ ಶತ್ರುಗಳ ಮೇಲೆ ವಿಜಯವನ್ನು ನೀಡುತ್ತಾಳೆ ಎನ್ನುವ ನಂಬಿಕೆ ಇದೆ. ಅಲ್ಲದೆ ಸ್ಕಂದಮಾತೆಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯವೃದ್ಧಿಯಾಗುವುದು ಎನ್ನಲಾಗುತ್ತದೆ.

ಕಮಲದ ಹೂವಿನೊಂದಿಗೆ ಸಂಬಂಧ ಹೊಂದಿರುವ ಸ್ಕಂದಮಾತೆ ಶುದ್ಧತೆ, ಜ್ಞಾನೋದಯ ಮತ್ತು ಆಧ್ಯಾತ್ಮಿಕ ಜಾಗೃತಿಯ ಸಂಕೇತವಾಗಿದೆ.

ಇದನ್ನೂ ಓದಿ: Vastu Tips: ಟೇಬಲ್ ಮೇಲೆ ಈ ವಸ್ತುಗಳನ್ನು ಇಟ್ಟರೆ ವೃತ್ತಿ ಜೀವನದಲ್ಲಿ ಪ್ರಗತಿ

ಭಾರತದಲ್ಲಿರುವ ಸ್ಕಂದ ಮಾತ ದೇವಾಲಯ

ವಾರಣಾಸಿಯ ಜೈತ್‌ಪುರದಲ್ಲಿರುವ ದೇಶದ ಪ್ರಸಿದ್ಧ ಬಾಗೇಶ್ವರಿ ದೇವಿ ಅಥವಾ ಸ್ಕಂದಮಾತಾ ದೇವಾಲಯವಿದೇ. ಈ ದೇವಾಲಯಕ್ಕೆ ನವರಾತ್ರಿಯ ಐದನೇ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ವಿದ್ಯಾ ಇರ್ವತ್ತೂರು

View all posts by this author