Vastu Tips: ಟೇಬಲ್ ಮೇಲೆ ಈ ವಸ್ತುಗಳನ್ನು ಇಟ್ಟರೆ ವೃತ್ತಿ ಜೀವನದಲ್ಲಿ ಪ್ರಗತಿ
ಕೆಲವೊಮ್ಮೆ ನಾವು ಎಷ್ಟೇ ಶ್ರಮ ವಹಿಸಿದರೂ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವುದು ಸಾಧ್ಯವಾಗುವುದಿಲ್ಲ. ಒಂದಲ್ಲ ಒಂದು ರೀತಿಯ ಅಡೆತಡೆಗಳು ಎದುರಾಗುತ್ತಲೇ ಇರುತ್ತವೆ. ಇದಕ್ಕಾಗಿ ಕೆಲವೊಂದು ವಾಸ್ತು ಪರಿಹಾರಗಳನ್ನು ಹುಡುಕಬಹುದು ಎನ್ನುತ್ತಾರೆ ವಾಸ್ತು ತಜ್ಞರು. ಅವು ಯಾವುದು ? ಇಲ್ಲಿದೆ ಮಾಹಿತಿ.

-

ಬೆಂಗಳೂರು: ವೃತ್ತಿ ಬದುಕಿನಲ್ಲಿ ಅಡೆ ತಡೆಗಳು ಎದುರಾಗುವುದು ಸಹಜ. ಆದರೆ ಕೆಲವೊಮ್ಮೆ ನಾವು ಎಷ್ಟೇ ಶ್ರಮ ಹಾಕಿದರೂ ಯಶಸ್ಸು ದೊರೆಯುವುದಿಲ್ಲ. ಇದಕ್ಕಾಗಿ ಕೆಲವೊಂದು ಸರಳ ವಾಸ್ತು ( vastu for office table) ಪರಿಹಾರಗಳನ್ನು (Vastu tips for office) ಪ್ರಯತ್ನಿಸಿ ನೋಡಬಹುದು ಎನ್ನುತ್ತಾರೆ ವಾಸ್ತು (Vastu shastra) ತಜ್ಞರು. ವೃತ್ತಿಜೀವನದಲ್ಲಿ ಬೆಳವಣಿಗೆ ಬೇಕಾದರೆ ಈ ಕೆಲವು ವಿಶೇಷ ವಸ್ತುಗಳನ್ನು ಕಚೇರಿಯ ಮೇಜಿನ ಮೇಲೆ ಇಟ್ಟುಕೊಳ್ಳಿ. ಇದರಿಂದ ಬಹುಬೇಗನೆ ಪ್ರಗತಿ ಕಾಣುವುದು ಸಾಧ್ಯವಿದೆ ಎನ್ನುವುದು ವಾಸ್ತು ತಜ್ಞರಾದ ರಿದ್ಧಿ ಬಹ್ಲ್.
ವೃತ್ತಿ ಬದುಕಿನಲ್ಲಿ ಬೆಳವಣಿಗೆಯಾಗಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕಾಗಿಯೇ ವಿವಿಧ ವಾಸ್ತು ಸಲಹೆಗಳನ್ನು ಅನುಸರಿಸುತ್ತಾರೆ. ಇದರಿಂದ ಬಾಕಿ ಇರುವ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ ಎನ್ನುವ ನಂಬಿಕೆ ಬಹುತೇಕ ಹೆಚ್ಚಿನವರಿಗೆ ಇರುತ್ತದೆ.
ಕಚೇರಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಬಯಸುವುದು ಪ್ರಶಂಸೆ. ಇದರಿಂದ ಸುತ್ತಲಿನ ಪ್ರಭಾವಲಯವು ಉತ್ತಮವಾಗಿ ಉಳಿಯುತ್ತದೆ. ಹೀಗಾಗಿ ಕಚೇರಿಯ ಮೇಜಿನ ಮೇಲೆ ಕೆಲವೊಂದು ವಸ್ತುಗಳನ್ನು ಇರಿಸಬೇಕು. ಇವುಗಳು ಕೆಲಸದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಿಂದ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರುವುದು ಎನ್ನುತ್ತಾರೆ ವಾಸ್ತು ತಜ್ಞರು.
ಹಸಿರು ಸಸ್ಯಗಳು
ಮನಿ ಪ್ಲಾಂಟ್, ಬಿದಿರಿನ ಸಸ್ಯಗಳನ್ನು ಕಚೇರಿಯ ಮೇಜಿನ ಮೇಲೆ ಇಡುವುದು ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಸ್ಯಗಳು ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಎಲ್ಲರೂ ನಿಮ್ಮ ಮಾತುಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಈ ಸಸ್ಯವನ್ನು ಟೇಬಲ್ ನ ಒಂದು ಮೂಲೆಯಲ್ಲಿ ಇರಿಸಿ. ಅದು ವೃತ್ತಿಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬಿರುವುದು.
ಹರಳುಗಳು
ಕಚೇರಿ ಮೇಜಿನ ಮೇಲೆ ಹರಳು, ಸ್ಫಟಿಕಗಳನ್ನು ಇಡಬಹುದು. ಅವುಗಳು ಆದಷ್ಟು ಸಣ್ಣ ವಿನ್ಯಾಸದಲ್ಲಿರಲಿ. ಇದು ವೃತ್ತಿಯಲ್ಲಿ ಪ್ರಗತಿ, ಸ್ಥಿರತೆ ಮತ್ತು ಹೊಸ ಅವಕಾಶಗಳನ್ನು ತರುತ್ತದೆ. ಇವುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕು. ಇದರಿಂದ ಸುತ್ತಲಿನ ಶಕ್ತಿಯು ಸಕಾರಾತ್ಮಕವಾಗುವುದು. ನಿಮ್ಮ ನಿರ್ಧಾರ ತೆಗೆದುಕೊಳ್ಳುವಿಕೆ ಸಾಮರ್ಥ್ಯ ವೃದ್ಧಿಸುವುದು.
ಪೆನ್ ಸ್ಟ್ಯಾಂಡ್
ಪೆನ್ ಸ್ಟ್ಯಾಂಡ್ ಕೇವಲ ಅಲಂಕಾರಿಕ ವಸ್ತುವಲ್ಲ. ಇದು ಕಚೇರಿ ಮೇಜಿನ ಮೇಲೆ ಎಲ್ಲ ವಸ್ತುಗಳನ್ನು ಒಟ್ಟಿಗೆ ಜೋಡಿಸಿ ಇಡಲು ಮತ್ತು ನಿಮ್ಮ ವೃತ್ತಿಪರ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ಸಹಾಯ ಮಾಡುತ್ತದೆ. ಹೀಗಾಗಿ ವಾಸ್ತು ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡಲು ಇದನ್ನು ಮೇಜಿನ ಮೇಲೆ ಇಟ್ಟುಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಮರದ ಪೆನ್ ಸ್ಟ್ಯಾಂಡ್ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: Vastu Tips: ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಚಿತ್ರ ಇಡಬಹುದೇ? ಏನು ಹೇಳುತ್ತದೆ ವಾಸ್ತು?
ವೃತ್ತಿಜೀವನದಲ್ಲಿ ಬೆಳವಣಿಗೆ ಕೇವಲ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕಾಗಿ ಉತ್ತಮ ಪರಿಸರ ಮತ್ತು ಮನಸ್ಥಿತಿಯೂ ಮುಖ್ಯವಾಗುತ್ತದೆ. ಕೆಲಸದ ಮೇಜನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗಿ ಕೆಲಸದಲ್ಲಿ ಬೆಳವಣಿಗೆ ಸಾಧ್ಯವಾಗುತ್ತದೆ. ಇದರಿಂದ ವೃತ್ತಿಜೀವನಕ್ಕೆ ಹೊಸ ದಾರಿ ತೆರೆದುಕೊಳ್ಳುತ್ತದೆ.