ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಈ ಭಾಗದಲ್ಲಿ ಎಂದಿಗೂ ಚಪ್ಪಲಿ ಇಡಬೇಡಿ

ಮನೆಯ ಪ್ರತಿಯೊಂದು ದಿಕ್ಕು ಕೂಡ ಪವಿತ್ರವಾಗಿರುತ್ತದೆ. ಒಂದೊಂದು ದಿಕ್ಕಿನಲ್ಲಿ ಒಂದೊಂದು ದೇವರು ಇರುತ್ತಾರೆ ಎನ್ನುವ ನಂಬಿಕೆ ಹಿಂದೂಗಳದ್ದು. ಹೀಗಿರುವಾಗ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕೆಲವೊಂದು ಭಾಗದಲ್ಲಿ ಶೂ, ಚಪ್ಪಲಿಗಳನ್ನು ಇಡಲೇಬಾರದು. ಇದರಿಂದ ಮನೆ ಮಂದಿಗೆ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಅಪ್ಪಿತಪ್ಪಿಯೂ ಮನೆಯ ಈ ಭಾಗದಲ್ಲಿ ಚಪ್ಪಲಿ ಇಡಬೇಡಿ

ಬೆಂಗಳೂರು: ಸಾಮಾನ್ಯವಾಗಿ ಮನೆಯನ್ನು (Vastu for home) ನಿರ್ಮಿಸುವಾಗ ನಾವು ಪ್ರತಿಯೊಂದು ವಿಚಾರದ ಬಗ್ಗೆಯೂ ಯೋಚಿಸುತ್ತೇವೆ. ಯಾಕೆಂದರೆ ಇದು ನಮ್ಮ ಅದೃಷ್ಟ, ಶಾಂತಿ ಮತ್ತು ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿಯೇ ವಾಸ್ತು (Vastu Tips) ಅಂಶಗಳಿಗೆ ನಾವು ಆದ್ಯತೆಯನ್ನು ನೀಡುತ್ತೇವೆ. ಆದರೆ ಇದರಲ್ಲಿ ಕೆಲವೊಮ್ಮೆ ನಾವು ಸಣ್ಣಪುಟ್ಟ ವಿಚಾರಗಳನ್ನು ಕಡೆಗಣಿಸುತ್ತೇವೆ. ಇದು ಭಾರಿ ದೊಡ್ಡ ತೊಂದರೆಗೆ ನಾವು ಅಹ್ವಾನ ನೀಡಿದಂತಾಗುತ್ತದೆ. ಹೀಗಾಗಿ ಮನೆಯಲ್ಲಿ (Vastu for Shoes) ನಾವು ಯಾವುದನ್ನೂ ಸಣ್ಣಪುಟ್ಟ ವಿಚಾರ ಎಂದು ಕಡೆಗಣಿಸುವಂತಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

ಮನೆ ನಿರ್ಮಾಣದ ವೇಳೆಯೇ ಶೂ, ಚಪ್ಪಲಿಗಳನ್ನು ಇಡುವ ದಿಕ್ಕನ್ನು ನಾವು ನಿರ್ಧರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಯಾಕೆಂದರೆ ಇದು ದೇವಾಲಯ ಸೇರಿದಂತೆ ಇತರ ವಸ್ತುಗಳಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿರಬೇಕು. ಒಂದು ವೇಳೆ ಇದರಲ್ಲಿ ಯಾವುದೇ ತಪ್ಪುಗಳಾದರೆ ಅದು ನಕಾರಾತ್ಮಕ ಶಕ್ತಿಗೆ ಅಹ್ವಾನ ನೀಡಿದಂತಾಗುತ್ತದೆ. ಇದರಲ್ಲಿ ಶೂ ಮತ್ತು ಚಪ್ಪಲಿಗಳು ಕೂಡ ಹೊರತಲ್ಲ. ಇವುಗಳನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಬಡತನ, ಅನಾರೋಗ್ಯ ಮತ್ತು ಆರ್ಥಿಕ ತೊಂದರೆಗಳು ಕಾಣಿಸಿಕೊಳ್ಳಬಹುದು.

ಮನೆಯಲ್ಲಿ ಶೂ ಮತ್ತು ಚಪ್ಪಲಿಗಳನ್ನು ಈಶಾನ್ಯ ದಿಕ್ಕಿನಲ್ಲಿ ಎಂದಿಗೂ ಇಡಬಾರದು. ಈಶಾನ್ಯ ದಿಕ್ಕು ದೇವತೆಗಳು ವಾಸಿಸುವ ಜಾಗ. ಹೀಗಾಗಿ ಇದನ್ನು ಅತ್ಯಂತ ಪವಿತ್ರ ದಿಕ್ಕು ಎಂದು ಪರಿಗಣಿಸಲಾಗುತ್ತದೆ.

ನಿತ್ಯ ಬಳಸುವ ಪಾದರಕ್ಷೆಗಳನ್ನು ಇಲ್ಲಿ ಇಡುವುದರಿಂದ ಸ್ಥಳದ ಪಾವಿತ್ರ್ಯತೆ ಕಲುಷಿತಗೊಳ್ಳುತ್ತದೆ. ಇದರಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ.

ಮನೆಯ ಈಶಾನ್ಯ ದಿಕ್ಕು ಸಕಾರಾತ್ಮಕ ಶಕ್ತಿಯ ಕೇಂದ್ರವಾಗಿದೆ. ಅದು ಕಲುಷಿತವಾದರೆ ವಾಸ್ತು ದೋಷಗಳು ಉಂಟಾಗಬಹುದು. ಮನೆಯ ನೈಋತ್ಯ ದಿಕ್ಕನ್ನು ಶೂ ಮತ್ತು ಚಪ್ಪಲಿಗಳನ್ನು ಸಂಗ್ರಹಿಸಿಡಲು ಸೂಕ್ತ ಸ್ಥಳವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Vastu Tips: ಬೆಳಗ್ಗೆ ಕಸ ಗುಡಿಸುವಾಗ ಈ ನಿಯಮ ಪಾಲಿಸಿ; ಮನೆಗೆ ಸಂಪತ್ತು ಆಕರ್ಷಿಸಿ

ಮನೆಯ ಪ್ರವೇಶದ್ವಾರದ ಬಳಿ ಶೂ ಸ್ಟ್ಯಾಂಡ್ ಇಡುವುದಾದರೆ ಅದನ್ನು ಮುಖ್ಯ ಬಾಗಿಲಿನ ಎಡಭಾಗ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಸೂಕ್ತ. ಇದು ಸಕಾರಾತ್ಮಕ ಶಕ್ತಿಯ ಹರಿವಿನ ಮೇಲೆ ಪರಿಣಾಮ ಬೀರದಂತೆ ತಡೆಯುತ್ತದೆ.

ಶೂ ಮತ್ತು ಚಪ್ಪಲಿಗಳನ್ನು ಇಡುವಾಗ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಮತ್ತು ಅಚ್ಚುಕಟ್ಟಾಗಿ ಸಂಗ್ರಹಿಸಿಡುವುದು ಬಹುಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು.