ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ಹೊಸ ವರ್ಷಕ್ಕೆ ಮನೆಯ ಕ್ಯಾಲೆಂಡರ್‌ ಬದಲಾಯಿಸಿದ್ರಾ? ಈ ದಿಕ್ಕಿನಲ್ಲೇ ಅಳವಡಿಸಿ

ವಾಸ್ತು ಶಾಸ್ತ್ರದ ಪ್ರಕಾರ ಆಯಾ ವಸ್ತುಗಳನ್ನು ಸರಿಯಾದ ಸ್ಥಾನದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿ, ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ ಮತ್ತು ಕುಟುಂಬದ ಸದಸ್ಯರು ತಮ್ಮ ಜೀವನದಲ್ಲಿ ಸುಧಾರಣೆ ಕಾಣುತ್ತಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬಹುತೇಕ ಜನರು ತಮ್ಮ ಮನೆಯಲ್ಲಿ ಹಳೆಯ ಕ್ಯಾಲೆಂಡರ್ ತೆಗೆದು, ಹೊಸ ಕ್ಯಾಲೆಂಡರ್‌ನ್ನು ಅಳವಡಿಸುವುದು ವಾಡಿಕೆ. ಕ್ಯಾಲೆಂಡರ್‌ ಅಳವಡಿಸುವಾಗಲೂ ವಾಸ್ತು ಶಾಸ್ತ್ರ ಸೂಚಿಸುವ ದಿಕ್ಕಕ್ಕೇ ಪರಿಗಣಿಸಬೇಕು.

ಸಾಂದರ್ಭಿಕ ಚಿತ್ರ

ಬೆಂಗಳೂರು, ಜ. 11: ಹೊಸ ವರ್ಷದ(New Year) ಆಗಮನ ಆಗಿ ಅದಾಗಲೇ ಹತ್ತು ದಿನ ಕಳೆದಿದೆ. ಎಲ್ಲರೂ ಈ ವರ್ಷವನ್ನು ಹೀಗೆಯೇ ಕಳೆಯಬೇಕು, ಇದನ್ನ ಸಾಧಿಸಬೇಕು ಎಂಬೆಲ್ಲ ಆಸೆ- ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ವಿಶ್ವದಾದ್ಯಂತ ಜನರು ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಹೊಸ ವರ್ಷ ಜೀವನಕ್ಕೆ ಹೊಸತನ, ಮತ್ತು ಹೊಸ ಹುರುಪು ತರಲಿ ಎಂಬುದು ಎಲ್ಲರ ಆಸೆ. ಇದು ನೆರವೇರಬೇಕೆಂದರೆ ಮನೆಯ ವಾಸ್ತು(Vastu) ಕೂಡ ಮುಖ್ಯವಾಗಲಿದ್ದು, ಹೊಸ ವರ್ಷದಂದು ಮನೆಗೆ ತರುವ ಕ್ಯಾಲೆಂಡರ್ ಕೂಡ ಪ್ರಮುಖ ಪಾತ್ರವಹಿಸುತ್ತದೆ.

ವಾಸ್ತು ಅನುಸಾರ ಸರಿಯಾದ ಸ್ಥಾನದಲ್ಲಿ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿ, ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ ಮತ್ತು ಕುಟುಂಬದ ಸದಸ್ಯರು ತಮ್ಮ ಜೀವನದಲ್ಲಿ ಸುಧಾರಣೆ ಕಾಣುತ್ತಾರೆ. ಹೊಸ ವರ್ಷಕ್ಕೆ ಕಾಲಿಟ್ಟಿರುವಂತೆ, ಬಹುತೇಕ ಜನರು ತಮ್ಮ ಮನೆಯಲ್ಲಿ ಹಳೆಯ ಕ್ಯಾಲೆಂಡರ್ ತೆಗೆದು, ಹೊಸ ಕ್ಯಾಲೆಂಡರ್‌ನ್ನು ಅಳವಡಿಸುವುದು ವಾಡಿಕೆ. ಅಲ್ಲದೇ ಕ್ಯಾಲೆಂಡರ್ ಮನೆಯ ಪ್ರಗತಿ ಮತ್ತು ಕಾಲಚಕ್ರದ ಸಕಾರಾತ್ಮಕ ಬದಲಾವಣೆಯ ಪ್ರತೀಕ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳುತ್ತದೆ. ಆದರೆ ಕೆಲವರ ಮನೆಯಲ್ಲಿ ಕಂಡ ಕಂಡ ಜಾಗದಲ್ಲೆಲ್ಲ ಕ್ಯಾಲೆಂಡರ್‌ ನೇತು ಹಾಕಿ ಬಿಡುತ್ತಾರೆ. ಇದು ನಾನಾ ಸಮಸ್ಯೆಗಳಿಗೆ ಕಾರಣವಾಗಲಿದ್ದು, ಮನೆಯಲ್ಲಿ ಅಶಾಂತಿಗೂ ಕಾರಣವಾಗುತ್ತದೆ. ಹಾಗಾಗಿ ಈ ಹೊಸ ಕ್ಯಾಲೆಂಡರ್‌ ಅನ್ನು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇರಿಸುವುದು ಬಹಳ ಮುಖ್ಯ. ಈ ಹಿಂದೆ ನಿಮ್ಮ ಮನೆಯಲ್ಲಿ ಕ್ಯಾಲೆಂಡರ್‌ ಅನ್ನು ವಾಸ್ತು ಪ್ರಕಾರ ಇರಿಸಿರದಿದ್ದರೂ, ಈ ವರ್ಷ ಇದರ ಅನುಸರಣೆ ಮಾಡುವುದು ಉತ್ತಮ. ಸರಿಯಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುವುದರಿಂದ ಮನೆಯಲ್ಲಿ ಉತ್ತಮ ಬದಲಾವಣೆಗಳು ಆಗುತ್ತದೆ.

ಹಾಗಾದ್ರೆ ಬನ್ನಿ ವಾಸ್ತು ಸಲಹೆ ಪ್ರಕಾರ (Vastu Tips) ಹೊಸ ವರ್ಷದ ಕ್ಯಾಲೆಂಡರ್ ಅನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ಮತ್ತು ಯಾವ ದಿಕ್ಕಿನಲ್ಲಿ ಇರಿಸಬಾರದು? ಎಂಬುದನ್ನು ನೋಡೋಣ:

ವಾಸ್ತು ಶಾಸ್ತ್ರದ ಪ್ರಕಾರ, ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಹಳೆಯ ಕ್ಯಾಲೆಂಡರ್ ಅನ್ನು ಮನೆಯಿಂದ ತೆಗೆದುಹಾಕುವುದು ಅತ್ಯಂತ ಅಗತ್ಯ. ಹಳೆಯ ಕ್ಯಾಲೆಂಡರ್ ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸಿ, ಕುಟುಂಬದ ಸದಸ್ಯರ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎನ್ನಲಾಗುತ್ತದೆ. ಹಾಗೆಯೇ ಕ್ಯಾಲೆಂಡರ್ ಅನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ದೊರಕುತ್ತದೆ ಎಂಬ ನಂಬಿಕೆ ವಾಸ್ತು ಶಾಸ್ತ್ರದಲ್ಲಿ ಇದೆ.

ದಾಸವಾಳದಲ್ಲಿದೆ ವೈವಾಹಿಕ ಜೀವನದ ಖುಷಿಯನ್ನು ಹೆಚ್ಚಿಸುವ ಶಕ್ತಿ; ವಾಸ್ತು ಪ್ರಕಾರ ಹೀಗೆ ಬಳಸಿ

ಪೂರ್ವ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುವುದು ಬಹಳ ಉತ್ತಮ. ಈ ದಿಕ್ಕಿನ ಅಧಿಪತಿ ಸೂರ್ಯ ದೇವರು ಆಗಿರುವುದರಿಂದ, ಇಲ್ಲಿ ಕ್ಯಾಲೆಂಡರ್ ಇಟ್ಟರೆ ಕುಟುಂಬದ ಸದಸ್ಯರ ಜೀವನದಲ್ಲಿ ಬೆಳವಣಿಗೆ ಮತ್ತು ಪ್ರಗತಿ ಕಂಡುಬರುತ್ತದೆ. ಕೆಂಪು ಅಥವಾ ಗುಲಾಬಿ ಬಣ್ಣದ ಹಿನ್ನೆಲೆಯ ಮೇಲೆ ಸೂರ್ಯ ದೇವರ ಚಿತ್ರವಿರುವ ಕ್ಯಾಲೆಂಡರ್ ಈ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಹೇಳಲಾಗುತ್ತದೆ.

ಪಶ್ಚಿಮ ದಿಕ್ಕಿನಲ್ಲಿಯೂ ಕ್ಯಾಲೆಂಡರ್ ಇಡಬಹುದು. ಈ ದಿಕ್ಕನ್ನು ಚಟುವಟಿಕೆ ಮತ್ತು ಕ್ರಿಯಾಶೀಲತೆಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕ್ಯಾಲೆಂಡರ್ ಇಟ್ಟರೆ ಕೆಲಸದಲ್ಲಿ ಅಭಿವೃದ್ಧಿ, ಕಾರ್ಯಕ್ಷಮತೆ ಮತ್ತು ಯಶಸ್ಸು ಲಭಿಸುತ್ತದೆ ಎಂಬ ನಂಬಿಕೆ ಇದೆ.

ಉತ್ತರ ದಿಕ್ಕು ಧನದ ಅಧಿಪತಿ ಕುಬೇರನ ದಿಕ್ಕು. ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುವುದು ಅತ್ಯಂತ ಶುಭ. ಸಂತೋಷದ ದೃಶ್ಯಗಳು, ನದಿ, ಸಮುದ್ರ, ಹಸಿರು ಪ್ರಕೃತಿ, ಮದುವೆ ಸಮಾರಂಭದ ಚಿತ್ರಗಳಿರುವ ಕ್ಯಾಲೆಂಡರ್ ಈ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಐಶ್ವರ್ಯ ಮತ್ತು ಶಾಂತಿ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.

ಇದಕ್ಕೆ ವಿರುದ್ಧವಾಗಿ, ಕೆಲವು ದಿಕ್ಕುಗಳಲ್ಲಿ ಕ್ಯಾಲೆಂಡರ್ ಇಡುವುದನ್ನು ಸಂಪೂರ್ಣವಾಗಿ ನಿಷೇಧವಾಗಿದ್ದು, ದಕ್ಷಿಣ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುವುದು ಅಶುಭವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಕಾಲವನ್ನು ಸೂಚಿಸುವ ವಸ್ತುವಾದ ಕ್ಯಾಲೆಂಡರ್ ಈ ದಿಕ್ಕಿನಲ್ಲಿ ಇದ್ದರೆ ಕುಟುಂಬದ ಪ್ರಗತಿ ಕುಂಠಿತವಾಗಬಹುದು ಮತ್ತು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.

ಅದೇ ರೀತಿ, ಮನೆಯ ಮುಖ್ಯ ಬಾಗಿಲಿನ ಎದುರು ಕ್ಯಾಲೆಂಡರ್ ಹಾಕುವುದು ಒಳ್ಳೆಯದಲ್ಲ. ಇದರಿಂದ ಮನೆಗೆ ಪ್ರವೇಶಿಸುವ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜತೆಗೆ ಜೋರಾಗಿ ಗಾಳಿ ಬೀಸುವ ಸ್ಥಳದಲ್ಲೂ ಕ್ಯಾಲೆಂಡರ್ ಇಡಬಾರದು. ಗಾಳಿಗೆ ಅಲುಗಾಡುವ ಕ್ಯಾಲೆಂಡರ್ ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹೊಸ ವರ್ಷದಲ್ಲಿ ವಾಸ್ತು ನಿಯಮಗಳನ್ನು ಪಾಲಿಸಿ ಸರಿಯಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಇಟ್ಟರೆ, ಮನೆಗೆ ಸುಖ, ಶಾಂತಿ ಮತ್ತು ಸಮೃದ್ಧಿ ದೊರಕುತ್ತದೆ ಎಂಬ ನಂಬಿಕೆ ಇದೆ.