ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 28th: ರಾಹುವಿನಿಂದ ಈ ರಾಶಿಗೆ ಅದೃಷ್ಟ ಜೊತೆಗೆ ಉದ್ಯೋಗದಲ್ಲಿ ಬಡ್ತಿ

ನಿತ್ಯ ಭವಿಷ್ಯ ನವೆಂಬರ್‌ 28, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ಅಷ್ಟಮಿ ತಿಥಿ, ಶತಭಿಷ ನಕ್ಷತ್ರದ ನವೆಂಬರ್ 28ನೇ ತಾರೀಖಿನ ಶುಕ್ರ ವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಶುಕ್ರವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ದಿನ ಭವಿಷ್ಯ(ಸಂಗ್ರಹ ಚಿತ್ರ) -

Profile
Pushpa Kumari Nov 28, 2025 5:45 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ಅಷ್ಟಮಿ ತಿಥಿ, ಶತಭಿಷ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ (Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಶತಭಿಷ ನಕ್ಷತ್ರದ ಅಧಿಪತಿ ರಾಹು ಆಗಿದ್ದಾನೆ. ಹೀಗಾಗಿ ಇದರಿಂದ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾದ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಅತೀ ಹೆಚ್ಚಿನ ಸಂತೋಷವನ್ನು ನೀವು ಕಾಣುತ್ತೀರಿ.‌ ನಿಮ್ಮ ಮಿತ್ರರೊಂದಿಗೆ ಖುಷಿಯೊಂದಿಗೆ ಇರುತ್ತೀರಿ‌. ಅದೇ ರೀತಿ ಧನ ಆಗಮನದ ಸೂಚನೆ ಕೂಡ ಇರುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಒಂದು ಯಶಸ್ಸು ಸಿಗುತ್ತದೆ.‌ ಹಾಗೆಯೇ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಕೂಡ ಬರುವ ಸಾಧ್ಯತೆ ಇದೆ.‌

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮವಾದ ದಿನವಾಗಿದ್ದು ಭಾಗ್ಯೋದಯ ವಾದ ದಿನವಾಗಿದೆ. ಇಂದು ನೀವು ಒಂದು ಪ್ರತಿಷ್ಠಿತ ಕೆಲಸವನ್ನು ನೀವು ಮಾಡುತ್ತೀರಿ.‌ ನಿಮ್ಮ ಕೆಲಸ ಕಾರ್ಯಕ್ಕೆ ಹೊಗಳಿಕೆಯ ಮಾತುಗಳು ಕೂಡ ಇಂದು ಬರಬಹುದು.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಸ್ವಲ್ಪ ಕ್ಲಿಷ್ಟಕರವಾದ ದಿನ ಆಗಲಿದೆ‌. ಮನಸ್ಸಿಗೆ ಹೆಚ್ಚಿನ ಬೇಸರ,ತೊಂದರೆ ನಿಮಗೆ ಎದುರಾಗಲಿದೆ.ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಲು ಹೋಗಬೇಡಿ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ನಿಮ್ಮ ಪ್ರೀತಿ ಪಾತ್ರರಿಂದ ಅತೀ ಹೆಚ್ಚಿನ ಸಂತೋಷ, ನೆಮ್ಮದಿ ನಿಮಗೆ ಸಿಗುತ್ತದೆ. ಎಲ್ಲ ಕಡೆಯಿಂದಲೂ ನಿಮಗೆ ಸೌಹಾರ್ದ ಪ್ರಾಪ್ತಿಯಾಗುತ್ತದೆ.

Vastu Tips: ನಿಮ್ಮ ವಾಸಸ್ಥಳ ಮತ್ತು ಕಚೇರಿ ವಾತಾವರಣವನ್ನು ಪಾಸಿಟಿವ್ ಎನರ್ಜಿಭರಿತವನ್ನಾಗಿಸಲು ಇಲ್ಲಿದೆ ಸಿಂಪಲ್ ವಾಸ್ತು ಟಿಪ್ಸ್

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆ ಯಲ್ಲಿ ಜಯ ಸಿಗುತ್ತದೆ. ವೈರಿಗಳನ್ನು ಹಿಮ್ಮೆಟ್ಟಲಿದ್ದೀರಿ. ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಹಣಕಾಸಿನ ವೆಚ್ಚದ ಬಗ್ಗೆ ಯೋಚನೆ ಕಾಡಬಹುದು. ಮುಂದಿನ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಅತೀ ಆತಂಕ ಕಾಡಬಹುದು.‌ ಅದೇ ರೀತಿ ಮಿತೃತ್ವ ದಲ್ಲಿ ನೀವು ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರು ತಾಯಿಯ ಆರೋಗ್ಯ ಹಾಗೂ ಮನೆಯ ಆಸ್ತಿ ಪಾಸ್ತಿ ವಿಚಾರವಾಗಿ ಹೆಚ್ಚು ಗಮನ ನೀಡ ಬೇಕಾಗುತ್ತದೆ.‌ ಸಂಸಾರದ ಬಗ್ಗೆ ಕೂಡ ಹೆಚ್ಚಿನ ಕಾಳಜಿಯನ್ನು ವಹಿಸಬೇಕು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೂ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಪತ್ರಿಕೋದ್ಯಮ, ಮಾಸ್ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ಲಾಭ ಸಿಗಲಿದೆ.

ಮಕರ ರಾಶಿ: ಮಕರ ರಾಶಿ ಅವರು ಕುಟುಂಬದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಮನೆಯಲ್ಲಿ ಅತೀ ಸಂತೋಷ ವಾದ ಕ್ಷಣವನ್ನು ನೀವು ನೋಡಬಹುದು.

ಕುಂಭರಾಶಿ: ಕುಂಭರಾಶಿಯವರಿಗೆ ಕ್ಲಿಷ್ಟಕರವಾದ ದಿನವಾಗಿದ್ದು ಯಾವುದೇ ಮುಖ್ಯವಾದ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಲು ಹೋಗಬೇಡಿ.

ಮೀನ ರಾಶಿ: ಮೀನ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹಾಗೆಯೇ ನಿಮ್ಮ ಮಿತೃತ್ವದಲ್ಲಿ ಕೂಡ ಒಡಕು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.