Daily Horoscope: ಆಶ್ಲೇಷ ನಕ್ಷತ್ರದ ಅಧಿಪತಿ ಬುಧನಿಂದ ಈ ರಾಶಿಯವರಿಗೆ ಭಾರಿ ಯಶಸ್ಸು
ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ದಶಮಿ ತಿಥಿ, ಆಶ್ಲೇಷ ನಕ್ಷತ್ರ, ಅಕ್ಟೋಬರ್ 16ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Daily Horoscope -

ಬೆಂಗಳೂರು: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ದಶಮಿ ತಿಥಿ, ಅಕ್ಟೋಬರ್ 16ನೇ ತಾರೀಖಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಆಶ್ಲೇಷ ನಕ್ಷತ್ರದ ಅಧಿಪತಿ ಬುಧ ಆಗಿದ್ದಾನೆ. ಹೀಗಾಗಿ ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ನಿಮ್ಮ ಚತುರ್ಥ ಭಾವಕ್ಕೆ ಚಂದ್ರ ಬಂದಿರುವುದರಿಂದ ಹೆಚ್ಚು ಭಾವನಾತ್ಮಕವಾಗಿ ಇರುತ್ತೀರಿ. ಯಾರ ಜತೆ ನೀವು ವಾಸ ಮಾಡುತ್ತಿದ್ದೀರಿ ಅಂತವರ ಕಡೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಬಹಳ ತಾಳ್ಮೆಯಿಂದ ಎಲ್ಲರ ಜತೆ ನೀವು ವ್ಯವಹಾರ ಮಾಡಬೇಕು. ಅದೇ ರೀತಿ ತಾಯಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಸಾಮಾಜಿಕ ಕಾರ್ಯದಲ್ಲಿ ಹಾಗೂ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸ್ವಲ್ಪ ಕಷ್ಟದ ದಿನ. ನಿಮ್ಮ ಮನೆಯಲ್ಲಿ ವಾಸಿಸುವವರ ಜತೆ ಆರ್ಥಿಕ ಸುಭದ್ರತೆ ಹಾಗೂ ಅವರ ಭವಿಷ್ಯದ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ನೀವು ವಹಿಸಬೇಕಾಗುತ್ತದೆ. ಹಾಗಾಗಿ ಕುಟುಂಬದ ಕಡೆಗೆ ಹೆಚ್ಚಿನ ಗಮನ ನೀಡಬೇಕಾದ ದಿನ ಆಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಉತ್ತಮ ದಿನ. ಹಿಂದಿನ ಎರಡು ಮೂರು ದಿನಗಳ ಮನಸ್ಸಿನ ನೋವು ಕಷ್ಟ ಎಲ್ಲವೂ ಮಾಯವಾಗಲಿದೆ. ಇಂದು ಖುಷಿಯಿಂದ ನೀವು ದಿನವನ್ನು ಕಳೆಯಲಿದ್ದೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಆದ್ದರಿಂದ ಮುಖ್ಯವಾದ ಯಾವುದೇ ಕೆಲಸದಲ್ಲಿ ನಿರ್ಧಾರ ಮಾಡಲು ಹೋಗಬೇಡಿ. ಆದರೆ ಮನಸ್ಸಿಗೆ ಶಾಂತಿ ಸಿಗಬೇಕಾದರೆ ಧ್ಯಾನಧಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಅದೇ ರೀತಿ ಗುಂಪು ಕೆಲಸದಿಂದ ನಿಮಗೆ ಲಾಭ ಸಿಗಲಿದೆ.
ತುಲಾ ರಾಶಿ: ತುಲಾ ರಾಶಿಯಲ್ಲಿರುವವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಅದೇ ರೀತಿ ಕಾರ್ಯ ಕ್ಷೇತ್ರದಲ್ಲಿ ಚಾಲೆಂಜ್‌ಗಳು ಎದುರಾಗಬಹುದು. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೂ ಹಿರಿಯರ, ಭಗವಂತನ ಆಶೀರ್ವಾದ ಇಲ್ಲದೆ ಇಂದು ಏನು ಮಾಡಲಾಗುವುದಿಲ್ಲ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮನಸ್ಸಿಗೆ ಬಹಳನೇ ಕಷ್ಟದ ದಿನ. ಮುಖ್ಯವಾದ ವಿಚಾರದಲ್ಲಿ ಯಾವುದೇ ನೆಮ್ಮದಿ ನಿಮಗೆ ಸಿಗುವುದಿಲ್ಲ. ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಎಲ್ಲ ಕೆಲಸದಲ್ಲೂ ಜಯ ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದ ಸೌಹಾರ್ದ, ಅಕ್ಕರೆ ಎಲ್ಲವೂ ಪ್ರಾಪ್ತಿಯಾಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೂ ಉತ್ತಮ ದಿನವಾಗಿದ್ದು, ಎಲ್ಲರಿಂದಲೂ ಸಹಕಾರ ಪ್ರಾಪ್ತಿಯಾಗುತ್ತದೆ. ಅತೀ ಖುಷಿಯಿಂದ ದಿನವನ್ನು ನೀವು ಕಳೆಯಲಿದ್ದೀರಿ.
ಮೀನ ರಾಶಿ: ಮೀನ ರಾಶಿಯವರು ಐಕ್ಯೂ, ಬುದ್ಧಿವಂತಿಕೆಯಿಂದ ಎಲ್ಲವನ್ನು ಗೆಲ್ಲುತ್ತೀರಿ. ಆದರೂ ಮನಸ್ಸಿಗೆ ಸ್ವಲ್ಪ ನೋವು ಇದ್ದೇ ಇರಲಿದೆ. ಬಿಸೆನೆಸ್ ವ್ಯವಹಾರದಲ್ಲಿ ಇರುವವರಿಗೆ ಸ್ವಲ್ಪ ಕಷ್ಟದ ದಿನವಾಗಿದ್ದು ಎಚ್ಚರವಾಗಿರಿ.