ಮದ್ಯಪಾನ ಮಾಡುತ್ತೀರಾ? ಜನಿವಾರ ಧರಿಸುತ್ತೀರಾ? ಸಂದರ್ಶನದಲ್ಲಿ ರಾಮ ಮಂದಿರ ಸಿಇಒ ಆಕಾಂಕ್ಷಿಗಳಿಗೆ ಪ್ರಶ್ನೆ
ಮದ್ಯಪಾನ ಮಾಡುತ್ತೀರಾ, ಜನಿವಾರ ಧರಿಸುತ್ತೀರಾ, ಮಾಂಸಾಹಾರ ಸೇವನೆ ಮಾಡುತ್ತೀರಾ... ? ಈ ಮೊದಲಾದ ಪ್ರಶ್ನೆಗಳನ್ನು ಅಯೋಧ್ಯೆ ರಾಮ ಮಂದಿರದ ಸಿಇಒ ಆಕಾಂಕ್ಷಿಗಳಿಗೆ ಕೇಳಲಾಗಿದೆ. ಇತ್ತೀಚೆಗೆ ಮಂದಿರದ ದೇಣಿಗೆ ಹಣ ದುರುಪಯೋಗದ ಬಳಿಕ ತೆರವಾಗಿರುವ ಹುದ್ದೆಗೆ ಒಟ್ಟು 18 ಮಂದಿಯ ಸಂದರ್ಶನ ನಡೆಸಲಾಗಿದೆ.
ಸಂಗ್ರಹ ಚಿತ್ರ -
ಉತ್ತರ ಪ್ರದೇಶ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir ) ದೇಣಿಗೆ ಕಳ್ಳತನ ಪ್ರಕರಣ ಬೆಳಕಿ ಬಂದ ಬಳಿಕ ಇದೀಗ ಪೂರ್ಣಾವಧಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (chief executive officer) ನೇಮಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಅಂತಿಮ ಹಂತದ ಸಂದರ್ಶನಕ್ಕೆ ಹಾಜರಾದ 18 ಮಂದಿಗೆ ಮದ್ಯಪಾನ ಮಾಡುತ್ತೀರಾ, ಜನಿವಾರ ಧರಿಸುತ್ತೀರಾ, ಮಾಂಸಾಹಾರ ಸೇವನೆ ಮಾಡುತ್ತೀರಾ... ? ಈ ಮೊದಲಾದ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.
ಅಯೋಧ್ಯೆಯ ರಾಮ ಮಂದಿರವನ್ನು ನಿರ್ವಹಿಸುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಹುದ್ದೆಗೆ ಆಕಾಂಕ್ಷಿಗಳಿಗೆ ಮಂಗಳವಾರ, ಬುಧವಾರ ಸಂದರ್ಶನ ನಡೆಸಲಾಗಿದೆ. ಹುದ್ದೆ ಆಕಾಂಕ್ಷಿಗಳಲ್ಲಿ ಮೂವರು ಮಾಜಿ ಐಎಎಸ್ ಅಧಿಕಾರಿಗಳು, ನಾಲ್ವರು ಮಾಜಿ ಮಿಲಿಟರಿ ಅಧಿಕಾರಿಗಳು ಸೇರಿದ್ದಾರೆ.
ದೆಹಲಿ ಶಾಲಾ ಮಕ್ಕಳಿಗೆ ಇನ್ನು ಮಧ್ಯಾಹ್ನ ಊಟಕ್ಕೆ ಇಡ್ಲಿ- ಸಾಂಬಾರ್! ದಿಢೀರ್ ಮೆನು ಬದಲಾಯಿಸಿದ ಶಿಕ್ಷಣ ಇಲಾಖೆ
ಸಂದರ್ಶನಕ್ಕೆ ಹಾಜರಾಗಿದ್ದವರಿಗೆ ನೀವು ಕಟ್ಟಾ ಹಿಂದೂವೇ ಅಥವಾ ಕೇವಲ ನಂಬಿಕೆಯುಳ್ಳವರೇ?, ಪವಿತ್ರ ದಾರ ಧರಿಸುತ್ತೀರಾ?, ಮದ್ಯಪಾನ ಮಾಡುತ್ತೀರಾ ಮತ್ತು ಮಾಂಸ ತಿನ್ನುತ್ತೀರಾ?, 20,000 ರಿಂದ 5 ಲಕ್ಷದವರೆಗಿನ ಜನಸಂದಣಿಯನ್ನು ನಿರ್ವಹಿಸಬಹುದೇ? ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ.
#WATCH | Ayodhya, UP: On reports of candidates applying for the Shri Ram Janmabhoomi Teerth Kshetra Trust CEO post being asked personal questions in a Google Form, State Congress President Ajay Rai says, "...A religious figure, a saint, or a sage should be appointed to oversee… pic.twitter.com/XouPmILuQE
— ANI UP/Uttarakhand (@ANINewsUP) August 12, 2026
ಅಭ್ಯರ್ಥಿಗಳ ಆಡಳಿತ ಕೌಶಲ, ಜನಸಂದಣಿ ನಿರ್ವಹಣಾ ಅನುಭವ ಮತ್ತು ಹಿಂದೂ ಧರ್ಮದ ಕುರಿತಾಗಿ ನಂಬಿಕೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎನ್ನಲಾಗಿದೆ. ಪ್ರತಿಯೊಬ್ಬರಿಗೂ ಸುಮಾರು 40 ರಿಂದ 50 ನಿಮಿಷಗಳ ಕಾಲ ಸಂದರ್ಶನ ನಡೆಸಲಾಗಿದೆ.
ಅಭ್ಯರ್ಥಿಗಳ ನಾಯಕತ್ವದ ಸಾಮರ್ಥ್ಯಗಳು, ಧಾರ್ಮಿಕ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆ, ರಾಮ ಮಂದಿರದ ಕುರಿತು ಅವರ ದೃಷ್ಟಿಕೋನ ಮತ್ತು ಕೆಲಸದ ಯೋಜನೆಯ ಬಗ್ಗೆಯೂ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಮ ಮಂದಿರದ ದೇಣಿಗೆಗಳ ದುರುಪಯೋಗದ ಬಳಿಕ ಪೂರ್ಣ ಸಮಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಲು ಟ್ರಸ್ಟ್ ನಿರ್ಧರಿಸಿ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕಾಗಿ ಸುಮಾರು 5,200 ಅರ್ಜಿಗಳು ಬಂದಿದ್ದು, ಅವರಲ್ಲಿ ಕೇವಲ 18 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿದೆ. ಇದರಲ್ಲಿ ದಕ್ಷಿಣ ಭಾರತದ ದೇವಾಲಯಗಳ ಮಾಜಿ ಹಿರಿಯ ಅಧಿಕಾರಿಗಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಅಧಿಕೃತ ರಾಷ್ಟ್ರ ಧ್ವಜ ತಯಾರಾಗುವ ಏಕೈಕ ತಾಣ ಯಾವುದು ಗೊತ್ತೆ? ಇದು ಕರ್ನಾಟಕದಲ್ಲೇ ಇದೆ!
ಟ್ರಸ್ಟ್ ರಚಿಸಿರುವ ಮೂವರು ಸದಸ್ಯರ ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಸುರೇಶ್ ಹವಾರೆ ಇದ್ದರು. ಅಂತಿಮವಾಗಿ 18 ಅರ್ಜಿದಾರರಲ್ಲಿ ಮೂವರನ್ನು ಆಯ್ಕೆ ಮಾಡಲಾಗುತ್ತದೆ. ಹೊಸ ಸಿಇಒ ಅವರನ್ನು ಸೆಪ್ಟೆಂಬರ್ 2ರಂದು ಘೋಷಿಸುವ ಸಾಧ್ಯತೆಯಿದೆ.