ರೈಲು ಪ್ರಯಾಣದಲ್ಲಿ ಆಹಾರ ಖರೀದಿಸುವ ಮುನ್ನ ಎಚ್ಚರ! ಉದ್ಯೋಗ್ ನಗರಿ ಎಕ್ಸ್‌ಪ್ರೆಸ್ ಟ್ರೈನ್ ಫುಡ್‌ನಲ್ಲಿ ಇಲಿ ಓಡಾಟ
Viral Video: ಉದ್ಯೋಗ ನಗರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಆಹಾರದ ಮೇಲೆ ಇಲಿಯೊಂದು ತೆವಳುತ್ತಿರುವುದು ಮತ್ತು ಹಿಟ್ಟನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೈಲ್ವೇ ಆಡಳಿತ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿದ್ದಾರೆ.
ರೈಲು ಪ್ರಯಾಣಿಕರಿಗಾಗಿ ತಯಾರಿಸಿದ ಆಹಾರದಲ್ಲಿ ಇಲಿ ಓಡಾಟ -
ದೆಹಲಿ, ಆ. 14: ಭಾರತೀಯ ರೈಲ್ವೆಯಲ್ಲಿ ಆಹಾರ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡುವಂತಹ ಮತ್ತೊಂದು ಘಟನೆ ವರದಿಯಾಗಿದೆ. ಕಳಪೆ ಆಹಾರ, ನೈರ್ಮಲ್ಯ ಕುರಿತು ಪ್ರಯಾಣಿಕರು ದೂರಿರುವ ಅನೇಕ ಪ್ರಕರನ ವರದಿಯಾಗಿದೆ. ಈ ಮಧ್ಯೆ ಈ ಬೆಳವನಿಗೆ ಸಂಭವಿಸಿದೆ. ಉದ್ಯೋಗ ನಗರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಆಹಾರದ ಮೇಲೆ ಇಲಿಯೊಂದು ತೆವಳುತ್ತಿರುವುದು ಮತ್ತು ಹಿಟ್ಟನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ರೈಲ್ವೇ ಆಡಳಿತ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿದ್ದಾರೆ.
ಇತ್ತೀಚೆಗಷ್ಟೇ ಆಹಾರ ಕೆಟ್ಟು ಹೋಗಿ ವಾಸನೆ ಬರುತ್ತಿದೆ ಹಾಗೂ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಪ್ರಯಾಣಿಕರು ಆಕ್ರೋಶ ಪಡಿಸಿ ಚಲಿಸುತ್ತಿದ್ದ ರೈಲಿನಿಂದ ಆಹಾರವನ್ನು ಹೊರಗೆ ಎಸೆಯುತ್ತಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಆಹಾರದ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ಪ್ರಯಾಣಿಕರಿಗೆ ಮತ್ತೊಮ್ಮೆ ಗಂಭೀರ ಕಳವಳವನ್ನು ಉಂಟು ಮಾಡಿದೆ.
ವಿಡಿಯೊ ನೋಡಿ:
🚨 12173 Udyog Nagri Express की pantry से जुड़ा एक बेहद गंभीर वीडियो सोशल मीडिया पर वायरल है।
— Sarfaraz Zain (@SarfarazZain01) August 11, 2026
वीडियो में pantry के अंदर चूहा खाद्य सामग्री/आटे के पास दिखाई दे रहा है, जो यात्रियों की hygiene और food safety को लेकर गंभीर सवाल खड़े करता है।@RailMinIndia @IRCTCofficial @RailwaySeva… pic.twitter.com/steLQAgR6p
ರೈಲಿನಲ್ಲಿ ಪ್ರಯಾಣಿಸುವ ಅನೇಕರು ಇದೇ ಆಹಾರವನ್ನು ಅವಲಂಬಿಸಿದ್ದಾರೆ. ಆದರೆ ರೈಲಿನ ಪ್ಯಾಂಟ್ರಿಯೊಳಗೆ ಆಹಾರ ಪದಾರ್ಥಗಳ ಸುತ್ತಲೂ ಇಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಈ ಘಟನೆ ಮಹಾರಾಷ್ಟ್ರದ ಲೋಕಮಾನ್ಯ ತಿಲಕ್ ಟರ್ಮಿನಸ್ ಮತ್ತು ಉತ್ತರ ಪ್ರದೇಶದ ಮಾ ಬೇಲ್ಹಾ ದೇವಿ ಧಾಮ್ ಪ್ರತಾಪ ಗಢ ಜಂಕ್ಷನ್ ನಡುವೆ ಚಲಿಸುವ ಉದ್ಯೋಗ್ ನಗರಿ ಎಕ್ಸ್‌ಪ್ರೆಸ್ ಪ್ಯಾಂಟ್ರಿಯೊಳಗೆ ನಡೆದಿದೆ.
ʼʼನಂಗೂ ಅಡ್ಮಿಷನ್ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿದ ಮೊಸಳೆ
ವೈರಲ್ ವೀಡಿಯೊದಲ್ಲಿ, ಹಿಟ್ಟಿನ ಉಂಡೆಗಳನ್ನು ಮುಚ್ಚಳವಿಲ್ಲದ ಪಾತ್ರೆಯಲ್ಲಿ ಇಡಲಾಗಿದ್ದು ಇಲಿಯೊಂದು ತಿನ್ನುತ್ತಿರುವುದು ಕಂಡುಬಂದಿದೆ. ಕೋಚ್ ಮೂಲಕ ಹಾದುಹೋಗುತ್ತಿದ್ದ ಕೆಲವು ಪ್ರಯಾಣಿಕರು ಅದನ್ನು ಚಿತ್ರೀಕರಿಸಿ ಹಂಚಿಕೊಂಡಿದ್ದಾರೆ. ರೈಲಿನಲ್ಲಿ ತಯಾರಿಸಿದ ಆಹಾರವನ್ನು ನೂರಾರು ಪ್ರಯಾಣಿಕರು ಸೇವಿಸುತ್ತಿದ್ದು, ಈ ಘಟನೆ ಕಳವಳ ಹುಟ್ಟುಹಾಕಿದೆ.
ಅನೇಕರು ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ ಖಾತೆಗಳನ್ನು ಟ್ಯಾಗ್ ಮಾಡಿ, ಸಂಬಂಧಪಟ್ಟ ಪ್ಯಾಂಟ್ರಿ ಗುತ್ತಿಗೆದಾರರ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಬಳಕೆದಾರರೊಬ್ಬರು ಈ ದೃಶ್ಯ ನಿಜವೆಂದು ಕಂಡುಬಂದರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ಇದು ನಿಜವಾಗಿಯೂ ತುಂಬಾ ಗಂಭೀರವಾದ ವಿಚಾರ ಪ್ರಯಾಣಿಕರ ಜೀವದ ಜೊತೆ ಆಟವಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.