Daily Horoscope: ತುಲಾ ಸಂಕ್ರಮಣದ ಇಂದು ಈ ರಾಶಿಯವರಿಗೆ ಉತ್ತಮ ಫಲ
ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಏಕಾದಶಿ ತಿಥಿ, ಮಘಾ ನಕ್ಷತ್ರ, ಅಕ್ಟೋಬರ್ 17ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Daily Horoscope -

ಬೆಂಗಳೂರು: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಏಕಾದಶಿ ತಿಥಿ, ಅಕ್ಟೋಬರ್ 17ನೇ ತಾರೀಖಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ತುಲಾ ಸಂಕ್ರಮಣ ಇದ್ದು, ರವಿ ತುಲಾ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಹೀಗಾಗಿ ಎಲ್ಲ ರಾಶಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ನಿಮ್ಮ ಪಾರ್ಟನರ್‌ಶಿಪ್ ವ್ಯವಹಾರದಲ್ಲಿ ಒಡಕು ಉಂಟಾಗಬಹುದು. ಬೇರೆಯವರಿಂದ ಬರುವ ಸಹಕಾರ ಇಂದು ಕಡಿಮೆಯಾಗಬಹುದು. ಹಾಗಾಗಿ ಬಹಳ ಹುಷಾರಾಗಿ ವ್ಯವಹಾರವನ್ನು ಮಾಡಬೇಕಾ ಗುತ್ತದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಶತ್ರು ನಾಶ ಆಗಲಿದೆ. ಆರೋಗ್ಯದಲ್ಲಿ ನೆಮ್ಮದಿ ಜತೆಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು, ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ಅತ್ಯುತ್ತಮ ದಿನವಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಸ್ವಲ್ಪ ಕಷ್ಟದ ದಿನವಾಗಿದೆ. ನಿಮ್ಮ ಪ್ರೀತಿ, ಪ್ರೇಮ ದಾಂಪತ್ಯದಲ್ಲಿ ಕಷ್ಟ ಉಂಟಾಗಬಹುದು. ಪೋಷಕರಿಗೆ ಮಕ್ಕಳಿಂದ ಕಷ್ಟ ಆಗಬಹುದು. ಗರ್ಭಿಣಿಯರು ಆರೋಗ್ಯದ ಕಡೆ ಗಮನ ಹರಿಸಬೇಕು. ವ್ಯವಹಾರದಲ್ಲಿ ಇರುವವರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಈ ರಾಶಿಯವರು ಹುಷಾರಾಗಿ ಇರಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮನೆಯ ವಿಚಾರ, ತಾಯಿಯ ಆರೋಗ್ಯ ವಿಚಾರ ಬಗ್ಗೆ ತೊಂದರೆ ಆಗಬಹುದು. ಆಸ್ತಿ ಪಾಸ್ತಿ ವಿಚಾರವಾಗಿಯೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಕೋರ್ಟ್, ಕಚೇರಿ ವ್ಯವಹಾರ ಮಾಡುವವರು ಎಚ್ಚರಿಕೆಯಿಂದ ಇರಬೇಕು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ನೀಚ ಸ್ಥಾನದಲ್ಲಿ ರವಿ ಇದ್ದರೂ ಕೂಡ ಒಳ್ಳೆಯ ಪ್ರತಿಫಲ ನೀವು ನೋಡಬಹುದು. ಇಂದು ಆತ್ಮವಿಶ್ವಾಸ ಹೆಚ್ಚಿರಲಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮನೆಯಲ್ಲಿ ಮತ್ತು ಹಣಕಾಸಿನ ವಿಚಾರದಲ್ಲಿ ಕಡಿಮೆ ಅಸಕ್ತಿ ಿರುವಂತಹ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಸಂಸಾರದಲ್ಲಿ ಇಂದು ಏರುಪೇರು ಆಗಬಹುದು.
ತುಲಾ ರಾಶಿ: ರವಿ ನಿಮ್ಮ ರಾಶಿಯಲ್ಲೆ ಇರುವುದರಿಂದ ಹೆಚ್ಚಿನ ಜನರು ನಿಮ್ಮ ಬಗ್ಗೆಯೇ ಗಮನ ನೀಡುತ್ತಾರೆ. ಹಾಗಾಗಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೀಯಾಳಿಕೆ ಉಂಟಾಗಬಹುದು. ಆದ್ದರಿಂದ ಬಹಳ ವಿನಯ ಪೂರ್ವಕವಾಗಿ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ.
ಇದನ್ನು ಓದಿ:Vastu Tips: ಮನೆ ತಗೊತಿದ್ದೀರಾ? ಈ ವಾಸ್ತು ವಿಚಾರಗಳು ಗೊತ್ತಿರಲಿ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರ ವ್ಯಯ ಭಾವಕ್ಕೆ ರವಿ ಬರುತ್ತಿದ್ದಾನೆ. ಹಾಗಾಗಿ ಯಾರ ಸಹಕಾರ ನಿಮಗೆ ಸಿಗುವುದಿಲ್ಲ. ಎರಡು ತಿಂಗಳು ನಿಮಗೆ ಕಷ್ಟ ಇರಬಹುದು. ಹಾಗಾಗಿ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬೇಡಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಅತ್ಯುತ್ತಮ ಫಲ ಗೋಚರವಾಗಲಿದೆ. ನಿಮಗೆ ಇಡೀ ವರ್ಷದಲ್ಲಿ ಇಲ್ಲದಷ್ಟು ಧನಾಗಮನ ಆಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಅದೃಷ್ಟದ ದಿನವಾಗಲಿದ್ದು ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆ ಇದೆ. ಇತರರಿಂದ ಗೌರವ, ಹೊಗಳಿಕೆ ಎಲ್ಲವೂ ಪ್ರಾಪ್ತಿಯಾಗಲಿದೆ. ಒಂದು ವರ್ಷದಿಂದ ಉಂಟಾದ ಕಷ್ಟಕ್ಕೆ ಪ್ರತಿಫಲ ಪ್ರಾಪ್ತಿಯಾಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೂ ಉತ್ತಮ ದಿನವಾಗಲಿದೆ. ಭಾಗ್ಯ ಸ್ಥಾನಕ್ಕೆ ರವಿ ಬಂದಿರುವುದರಿಂದ ಕೆಲಸ ಕಾರ್ಯದಲ್ಲಿ ಜಾಗೃತೆ ವಹಿಸಬೇಕು. ನಿಮ್ಮ ಬಾಸ್, ನಿಮ್ಮ ಸೀನಿಯರ್‌ಗಳು ನಿಮ್ಮನ್ನು ಹೆಚ್ಚಾಗಿ ಗಮನಿಸುತ್ತಾರೆ. ಹೊಸ ಕೆಲಸ ಹುಡುಕುತ್ತಿದ್ದವರಿಗೆ ಸರಿಯಾದ ಕೆಲಸ ಪ್ರಾಪ್ತಿಯಾಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಸ್ವಲ್ಪ ಕಷ್ಟ ಎದುರಾಗಲಿದೆ. ಬೇರೆಯವರಿಂದ ಸ್ವಲ್ಪ ದೂರ ಇರಬಹುದಾದ ಸಂದರ್ಭ ಬರಬಹುದು. ಆದರೆ ಆಧ್ಯಾತ್ಮಿಕತೆ ಯಿಂದ ಮನಸ್ಸಿಗೆ ನೆಮ್ಮದಿ ಕಾಣಬಹುದು.