Daily Horoscope: ನರಕ ಚತುರ್ದಶಿಯಿಂದ ಈ ರಾಶಿಗಳಿಗೆ ಎಲ್ಲ ಕ್ಷೇತ್ರದಲ್ಲೂ ಭಾರೀ ಒಳಿತು!
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಚತುರ್ದಶಿ ತಿಥಿ, ಹಸ್ತ ನಕ್ಷತ್ರ,ಅಕ್ಟೋಬರ್ 20 ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

-

ಬೆಂಗಳೂರು: ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಚತುರ್ದಶಿ ತಿಥಿ, ಅಕ್ಟೋಬರ್ 20ನೇ ತಾರೀಖಿನ ಸೋವಾರದ ಈ ದಿನ ನರಕ ಚತುರ್ದಶಿಯಾಗಿದೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ(Daily Horoscope) ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಹಸ್ತ ನಕ್ಷತ್ರ ಇದ್ದು ಮೇಷ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ಶತ್ರುಗಳು ಇಂದು ನಾಶವಾಗ ಲಿದ್ದಾರೆ. ಅದೇ ರೀತಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ನಿಮ್ಮ ಅಂದು ಕೊಂಡ ಕೆಲಸ ಕಾರ್ಯಗಳು ಸಂಪೂರ್ಣವಾಗಿ ನಡೆಯಲಿದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನವಾಗಿದೆ. ನಿಮ್ಮ ಬುದ್ದಿ ವಂತಿಕೆಯ ಮೂಲಕ ನೀವು ಕೆಲಸ ಕಾರ್ಯಗಳನ್ನು ಮಾಡಬೇಕು. ಆದರೂ ಹಣಕಾಸಿನ ವಿಚಾರ ಹಾಗೂ ದಾಂಪತ್ಯ ವಿಚಾರದಲ್ಲಿ ತೊಂದರೆ ಆಗಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನವಾಗಿದೆ. ಇಂದು ನಿಮ್ಮ ಕುಟುಂಬದ ವಿಚಾರದಲ್ಲಿ ತೊಂದರೆ ಆಗಬಹುದು.ಕೋರ್ಟ್ ,ಕಛೇರಿ ವ್ಯವಹಾರದಲ್ಲೂ ಸಮಸ್ಯೆ ಆಗಬಹುದು. ತಾಯಿಯ ಆರೋಗ್ಯ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಇಂದು ಎಲ್ಲರ ಜೊತೆ ಸೌಹಾರ್ದ ಪ್ರಾಪ್ತಿ ಯಾಗಲಿದೆ.ಅದೆ ರೀತಿ ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗಲಿದೆ. ಬಹಳಷ್ಟು ಧೈರ್ಯ, ಆತ್ಮವಿಶ್ವಾಸ ದಿಂದ ನೀವು ಇರುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿ ಅವರು ಯಾರ ಜೊತೆ ವಾಸ ಮಾಡುತ್ತಿದ್ದೀರಿ ಅವರ ಆರ್ಥಿಕ ಸುಭದ್ರತೆ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಕುಟುಂಬದ ಜೊತೆ ಇಂದು ನೀವು ಸಂತೋಷವಾಗಿ ದಿನವನ್ನು ಕಳೆಯಬಹುದು.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತ್ಯುತ್ತಮ ವಾದ ದಿನ ವಾಗಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿಂದೆ ಇದ್ದಂತಹ ಎಲ್ಲ ಸಮಸ್ಯೆಗೂ ಪರಿಹಾರ ಸಿಗಲಿದೆ.
ತುಲಾ ರಾಶಿ: ತುಲಾ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರ ಗಳನ್ನು ಮಾಡಲು ಇಂದು ಹೋಗಬೇಡಿ. ನಿಮ್ಮ ಪ್ರೀತಿ ಪಾತ್ರರು, ಹತ್ತಿರದವರು ಬಿಟ್ಟು ಹೋಗ ಬಹುದು ಎನ್ನುವ ಭಯ ನಿಮ್ಮಲ್ಲಿ ಜಾಸ್ತಿ ಇರಬಹುದು.
ಇದನ್ನು ಓದಿ:Vastu Tips: ಮನೆಯಲ್ಲಿ ಖಾಲಿ ಬಿಡಬಾರದ ಸ್ಥಳ ಯಾವುದು, ಏಕೆ ಗೊತ್ತೇ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತೀ ಉತ್ತಮವಾದ ದಿನ ವಾಗಿದೆ. ಇಷ್ಟಾರ್ಥ ಸಿದ್ದಿ ಯಾಗಲಿದ್ದು ಗುಂಪು ಕೆಲಸದಿಂದ ಧನ ಆಗಮನ ಆಗಲಿದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ಕೂಡ ನಡೆಯಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಸ್ವಲ್ಪ ಕಷ್ಟಕರವಾಗಬಹುದು. ಮುಖ್ಯವಾದ ಕೆಲಸ ಕಾರ್ಯದಲ್ಲಿ ಬಾಸ್ ಗಳು ಕಠಿಣವಾಗಿ ವರ್ತಿಸಬಹುದು. ಹಾಗಾಗಿ ಈ ಬಗ್ಗೆ ಸರಿಯಾಗಿ ಜಾಗೃತೆ ವಹಿಸಿ.
ಮಕರ ರಾಶಿ: ಮಕರ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿರಿಯ ಆಶೀರ್ವಾದ ಬಹಳಷ್ಟು ಮುಖ್ಯವಾಗುತ್ತದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ನಿಮ್ಮ ಪ್ರೀತಿ ಪಾತ್ರರೊಡನೆ ವ್ಯವಹಾರ ಮಾಡಬೇಕಾದರೆ ಅವರ ಭಾವನೆಗಳನ್ನು ಸರಿಯಾಗಿ ತಿಳಿದು ಕೊಳ್ಳಬೇಕು.
ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮ ದಿನವಾಗಿದೆ. ಎಲ್ಲ ಕಡೆಯೂ ಸೌಹಾರ್ದ ಪ್ರಾಪ್ತಿ ಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಪಾರ್ಟ್ನರ್ ಶೀಪ್ ,ವ್ಯವಹಾರದಲ್ಲಿಯೂ ಯಶಸ್ಸು ಸಿಗಲಿದೆ.