ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಸ್ವಾತಿ ನಕ್ಷತ್ರದ ಅಧಿಪತಿ ರಾಹುವಿನಿಂದ ಈ ರಾಶಿಗೆ ಒಳಿತು

ದಿನ ಭವಿಷ್ಯ: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಪ್ರತಿಭಾ ತಿಥಿ, ಸ್ವಾತಿ ನಕ್ಷತ್ರದ ಅಕ್ಟೋಬರ್ 22ನೇ ತಾರೀಖಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿಕೊಟ್ಟಿದ್ದಾರೆ.

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Daily Horoscope -

ಬೆಂಗಳೂರು: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷದ ಪ್ರತಿಭಾ ತಿಥಿ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ದೀಪಾವಳಿಯ ಬಲಿಪಾಡ್ಯಮಿ. ಅದೇ ರೀತಿ ಸ್ವಾತಿ ನಕ್ಷತ್ರದ ಅಧಿಪತಿ ರಾಹು ಆಗಿದ್ದು ಹೆಚ್ಚಿನ ರಾಶಿಗೆ ಇಂದು ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿವರಿಗೆ ಉತ್ತಮವಾದ ದಿನವಾಗಿದೆ‌. ಕುಟುಂಬ, ದಾಂಪತ್ಯ ವಿಚಾರದಲ್ಲಿ ಒಳಿತಾಗಲಿದೆ. ವ್ಯವಹಾರದಲ್ಲಿ ಉತ್ತಮವಾಗಲಿದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಸಾಮಾಜಿಕ ಚಟುವಟಿಕೆಯಲ್ಲಿ ಜಯ ಸಿಗಲಿದೆ. ಮನಸ್ಸಿಗೆ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಶತ್ರು ನಾಶ ಕೂಡ ಆಗಲಿದ್ದಾರೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ನಿಮ್ಮ ಬುದ್ದಿವಂತಿಕೆಯಿಂದ ಮಾಡುವ ಕೆಲಸದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ. ಅದೇ ರೀತಿ ಹಣಕಾಸಿನ ‌ವಿಚಾರದಲ್ಲಿ ನಿಮಗೆ ಲಾಸ್ ಆಗುವ ಸಾಧ್ಯತೆ ಕೂಡ ಇದೆ.

ಕಟಕ ರಾಶಿ: ಕಟಕ ರಾಶಿಯವರು ತಾಯಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.‌ ಅದೇ ರೀತಿ ಆಸ್ತಿ ಪಾಸ್ತಿ ಮನೆಗೆ ಸಂಬಂಧಿಸಿದ ವಿಚಾರದ ಬಗ್ಗೆಯೂ ಎಚ್ಚರಿಕೆವಹಿಸಬೇಕು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಬಹಳ ಉತ್ತಮ ದಿನ. ಸಾಮಾಜಿಕ ಕೆಲಸದಲ್ಲಿ ಕೂಡ ಹೆಚ್ಚಿನ ಯಶಸ್ಸು ನಿಮಗೆ ಸಿಗಲಿದೆ

ಇದನ್ನು ಓದಿ:Vastu Tips: ಜೀವನದ ಪ್ರಗತಿಯನ್ನು ನಿರ್ಧರಿಸುತ್ತದೆ ಕೈ ಗಡಿಯಾರ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಸಾಕಷ್ಟು ಕಷ್ಟ ಎದುರಾಗಲಿದೆ. ಸಂಸಾರದ ತಾಪ ತ್ರಯಗಳು ಜಾಸ್ತಿನೇ ಕಾಡಬಹುದು.‌ ಹೆಣ್ಣು ಮಕ್ಕಳಂತು ಈ ದಿನ ಬಹಳ ಸಮಾಧಾನ ರೀತಿಯಲ್ಲಿ ಇರಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಕಾರ್ಯಕ್ಷೇತ್ರದಲ್ಲಿ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಸಮಸ್ಯೆ ಎಲ್ಲವೂ ಮಾಯವಾಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ವಿಚಾರದಲ್ಲಿ ನಿರ್ಧಾರ ಬೇಡ. ಯಾರಿಗೂ ಇಮೇಲ್ ಕಳುಹಿಸಲು ಹೋಗಬೇಡಿ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗಲಿದೆ. ಅದೇ ರೀತಿ ಇಷ್ಟಾರ್ಥ ಸಿದ್ದಿಯಾಗಲಿದ್ದು ಧನಾಗಮನ ಕೂಡ ಆಗಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು, ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗಲಿದೆ. ಅಂದುಕೊಂಡ ಕೆಲಸಗಳು ಕೂಡ ನೆರವೇರಲಿವೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಹಿರಿಯರಿಂದ ಬಹಳಷ್ಟು ಆಶೀರ್ವಾದ ಪ್ರಾಪ್ತಿಯಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಕ್ಲಿಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಇಂದು ಬೇಡ. ಹೆಚ್ಚಿನ ಮಾತುಕತೆಯನ್ನು ಆಡಲು ಹೋಗಬೇಡಿ. ಧ್ಯಾನಾದಿಗಳನ್ನು ಮಾಡುವ ಮೂಲಕ ಇಂದು ಸಮಯ ಕಳೆಯಿರಿ.