ದಿನ ಭವಿಷ್ಯ, ಆಗಸ್ಟ್ 22, 2026: ಇಂದು ಈ ರಾಶಿಯವರು ವೈಯಕ್ತಿಕ ನಿರ್ಧಾರ ಕೈಗೊಳ್ಳುವಾಗ ಜಾಗೃತರಾಗಿರಿ!
Horoscope Today August 22nd: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದಶಮಿ ತಿಥಿ, ಜೇಷ್ಠ ನಕ್ಷತ್ರದ,ಆಗಸ್ಟ್ 22ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಹಣಕಾಸಿನ ವಿಚಾರ ಹಾಗೂ ಪ್ರೇಮ- ಪ್ರೀತಿ ವಿಚಾರದಲ್ಲಿ ಕ್ಲೇಷ ಉಂಟಾಗುವ ಸಾಧ್ಯತೆ ಇರುತ್ತದೆ. ಮಾತುಕತೆಯಲ್ಲಿ ಕೂಡ ಗೊಂದಲ ಉಂಟಾಗಬಹುದು.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಇಂದು ಮನಸ್ಸಿಗೆ ನೆಮ್ಮದಿ ಇದ್ದು ಸಂಸಾರದಲ್ಲೂ ಖುಷಿ ಸಿಗುತ್ತದೆ. ಹಣಕಾಸಿನ ವಿಚಾರದಲ್ಲೂ ಅಭಿವೃದ್ಧಿ ಇರುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಗೆ ಇಂದು ಕಷ್ಟಕರವಾದ ದಿನ ಇರುತ್ತದೆ. ಬಂಧು ಬಾಂಧವರಿಂದ ವೈಮನಸ್ಸು ಹಾಗೂ ಮಾತಿನಿಂದ ತೊಂದರೆಗೆ ಒಳಗಾಗಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಸಂಸಾರದಲ್ಲಿ ಹಿತ ಇರುತ್ತದೆ. ಅದೇ ರೀತಿ ಧನ ಆಗಮನದ ಸೂಚನೆಗಳು ಕೂಡ ಇರುತ್ತವೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟಕರವಾದ ಗೋಚರ ಇರುತ್ತದೆ. ನಿಮ್ಮ ರಾಶಿಗೆ ಬುಧ ಬಂದಿರುವುದರಿಂದ ಮಾತುಕತೆಯಲ್ಲಿ ತೊಂದರೆ ಎದುರಾಗಬಹುದು. ನೀವು ಹೇಳಿದ್ದು ಎಲ್ಲವೂ ಇಂದು ತಪ್ಪಾಗಿ ಕಾಡಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಯಾವುದೇ ಮಾತುಕತೆ ಹಾಗೂ ವಿಚಾರಗಳು ನಿಮ್ಮ ಪರವಾಗಿ ನಡೆಯುವುದಿಲ್ಲ. ಹೀಗಾಗಿ ಮುಖ್ಯವಾದ ವಿಚಾರದಲ್ಲಿ ತೊಂದರೆ ಉಂಟಾಗುತ್ತವೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಿತ್ರರಿಂದ ಧನ ಆಗಮನವಾಗುವ ಸಾಧ್ಯತೆ ಇರುತ್ತದೆ.
ವೃಶ್ಚಿಕ ರಾಶಿ: ಈ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಇರುತ್ತದೆ. ನಿಮ್ಮ ಕೆಲಸ ಕಾರ್ಯದಲ್ಲಿ ನೀವು ಪ್ರಗತಿಯನ್ನು ಕಾಣುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಕಷ್ಟಕರವಾದ ದಿನ ವಾಗಿದೆ. ಮಾತುಕತೆಯಲ್ಲಿ ಹಿನ್ನಡೆಯಾಗಬಹುದು. ಸ್ನೇಹಿತರಿಂದಲೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಹಿಂದಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಕುಂಭ ರಾಶಿ: ಈ ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ತೊಂದರೆ ಎದುರಾಗಬಹುದು. ಬೇರೆಯವರ ಮಾತಿನಿಂದ ಬೇಸರ ಉಂಟಾಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದ್ದು ಭಾಗ್ಯೋದಯವಾಗಿರುತ್ತದೆ. ಶತ್ರುಗಳನ್ನು ಹಿಮ್ಮೆಟ್ಟಲಿದ್ದು ಹೆಚ್ಚಿನ ಪ್ರಗತಿಯನ್ನು ನೀವು ಕಾಣುತ್ತೀರಿ.