Astro Tips: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಹಾಗಾದ್ರೆ ತಪ್ಪದೇ ಆತನಿಗೆ ಈ ಹೂಗಳನ್ನು ಅರ್ಪಿಸಿ
ಇಂದು ಬುಧವಾರದ ಶುಭ ದಿನವಾದ್ದರಿಂದ ನಾವು ಭಗವಾನ್ ಗಣೇಶನನ್ನು ಪೂಜಿಸುತ್ತೇವೆ. ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ನಾವು ಈ ದಿನ ಪೂಜೆಯಲ್ಲಿ ಬಳಸುವುದರಿಂದ ಅವನ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಹಾಗೇ ಇಂದು ಗಣೇಶನಿಗೆ ಪ್ರಿಯವಾದ ಹೂಗಳನ್ನು ಅರ್ಪಿಸುವುದರಿಂದಲೂ ಆತನ ಕೃಪೆ ಪಾತ್ರರಾಗಬಹುದಾಗಿದ್ದು, ಆತನಿಗೆ ಪ್ರಿಯವಾದ ಹೂಗಳನ್ನು ನೀಡಿ, ಬೇಡಿಕೊಂಡರೆ ಸಾಕು, ಆತ ತೃಪ್ತನಾಗುತ್ತಾನೆ. ಗಣೇಶನಿಗೆ ಇಷ್ಟವಾದ ಹೂವುಗಳ ಬಗ್ಗೆ ಇಲ್ಲಿದೆ ನೋಡಿ...?


ಪ್ರಥಮ ಪೂಜಿತ ಗಣೇಶನನ್ನು ಸ್ವತಃ ರಿದ್ಧಿ-ಸಿದ್ಧಿಯನ್ನು ಕೊಡುವವನು ಮತ್ತು ಮಂಗಳಕರವಾದುದ್ದನ್ನು ಒದಗಿಸುವವನು ಎಂದು ಕರೆಯಲಾಗುತ್ತದೆ. ಅವನು ಭಕ್ತರ ಅಡೆತಡೆಗಳನ್ನು, ತೊಂದರೆಗಳನ್ನು, ರೋಗಗಳನ್ನು ಮತ್ತು ಬಡತನವನ್ನು ತೊಡೆದು ಹಾಕುವ ಶಕ್ತಿಯನ್ನು ಹೊಂದಿದವನು. ಬುಧವಾರವನ್ನು ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಗಣೇಶನು ಭಕ್ತರ ಧುಃಖ, ನೋವುಗಳನ್ನು ನಿವಾರಿಸುವುದರಿಂದ ಆತನನ್ನು ವಿಘ್ನಹರ್ತ ಎಂದೂ ಕರೆಯಲಾಗುತ್ತದೆ(Astro Tips). ನೀವೂ ಸಹ ಗಣಪತಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಬುಧವಾರದಂದು, ಲಡ್ಡುಗಳು ಮತ್ತು ಮೋದಕಗಳನ್ನು ಹೊರತುಪಡಿಸಿ ವಿವಿಧ ರೀತಿಯ ಹೂಗಳನ್ನು - ಎಲೆಗಳನ್ನು ಅರ್ಪಿಸುವುದರ ಮೂಲಕ ವಿಘ್ನ ನಿವಾರಕ ಗಣಪತಿಯನ್ನು ಒಲಿಸಿಕೊಳ್ಳಬಹುದು.
ಗಜಾನನಿಗೆ ಎಲ್ಲ ಹೂವುಗಳಿಗಿಂತಲೂ ಪ್ರಿಯವಾದುದ್ದು ಎಂದರೆ, ಗರಿಕೆ ಹುಲ್ಲು. ತನ್ನೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಈ ಹುಲ್ಲನ್ನು ನೀಡಿ, ಬೇಡಿಕೊಂಡರೆ ಸಾಕು, ಆತ ತೃಪ್ತನಾಗುತ್ತಾನೆ. ಇದನ್ನು ಹೊರತುಪಡಿಸಿ, ಗಣೇಶನಿಗೆ ಇಷ್ಟವಾದ ಹೂವುಗಳ ಬಗ್ಗೆ ಇಲ್ಲಿದೆ ನೋಡಿ.
ಕೆಂಪು ದಾಸವಾಳ: ಗಣೇಶನ ನೆಚ್ಚಿನ ಹೂವುಗಳಲ್ಲಿ ಕೆಂಪು ದಾಸವಾಳ ಕೂಡ ಒಂದಾಗಿದ್ದು, ಬುಧವಾರ ಗಣೇಶ ಪೂಜೆಯಲ್ಲಿ ಆತನ ವಿಗ್ರಹಕ್ಕೆ ಈ ಕೆಂಪು ದಾಸವಾಳವನ್ನು ಅರ್ಪಿಸಿದ್ದರೆ ಶತ್ರುಗಳ ಕಾಟದಿಂದ ಮುಕ್ತಿ ಹೊಂದ ಬಹುದಾಗಿದ್ದು, ಸಮೃದ್ಧಿ ಮತ್ತು ಇದನ್ನು ಅರ್ಪಿಸಲಾಗುತ್ತದೆ.
ದಾತುರ: ಸಾಮಾನ್ಯವಾಗಿ ದಾತುರ ಎಲೆಗಳನ್ನು ಶಿವನ ಪೂಜೆಯಲ್ಲಿ ಬಳಸಲಾಗುತ್ತದೆ. ಹೇಗೇ ತಂದೆ ಶಿವನ ಪೂಜೆಯಲ್ಲಿ ಬಳಸುವ ಹಾಗೂ ಈಶ್ವರನ ಪ್ರಿಯವಾದ ಈ ಹೂವು ಗಣಪನಿಗೂ ಅಚ್ಚುಮೆಚ್ಚಾಗಿದ್ದು, ನಾವು ಗಣೇಶನನ್ನು ಪೂಜಿಸುವಾಗ ಆತನಿಗೆ ದಾತುರ ಎಲೆಗಳನ್ನು ಅರ್ಪಿಸಬೇಕು.
ಚೆಂಡು ಹೂ: ಹೂವುಗಳು ದೈವಿಕ ಶಕ್ತಿಗಳು ಬಹುಬೇಗ ಆಕರ್ಷಿಸಲಿದ್ದು, ಹೂವುಗಳಿಗೆ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಯಾವಾಗಲೂ ನಾವು ದೇವರಿಗೆ ಹೂವುಗಳನ್ನು ಅಥವಾ ಹೂವುಗಳಿಂದ ತಯಾರಿಸಿದ ಹೂಮಾಲೆಯನ್ನು ಅರ್ಪಿಸಬೇಕು. ಗಣೇಶ ಪೂಜೆಯಲ್ಲಿ ಎಂದಿಗೂ ಗಣೇಶನಿಗೆ ಚೆಂಡು ಹೂವನ್ನೇ ಅರ್ಪಿಸಿ.
ಪಾರಿಜಾತ: ಗಣೇಶನಿಗೆ ಪಾರಿಜಾತ ಹೂವುಗಳನ್ನು ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಲಭಿಸಿ, ಸಾಧನೆಯ ಶಿಖರವನ್ನು ಏರಬಹುದು.
Astro Tips: ಗಣೇಶನಿಗೆ ಪ್ರಿಯವಾದ ಬುಧವಾರದಂದು ಈ ವಸ್ತುಗಳನ್ನು ಅರ್ಪಿಸಿ ಸಾಕು; ಸಂಪತ್ತು ಹೆಚ್ಚಾಗುತ್ತದೆ
ಮಲ್ಲಿಗೆ ಹೂ: ಗಣೇಶನಿಗೆ ಮಲ್ಲಿಗೆ ಹೂವೆಂದರೆ ತುಂಬಾನೇ ಇಷ್ಟ, ನೀವು ಗಣೇಶನ ಪೂಜೆಯಲ್ಲಿ ಮಲ್ಲಿಗೆಯನ್ನು ಅರ್ಪಿಸಿದರೆ ಕುಟುಂಬದಲ್ಲಿ ಸಂತೋಷ - ಸುಖ ತುಂಬಿರಲಿದ್ದು, ಮನೆಯ ಸದಸ್ಯರು ಕೂಡ ಹೊಂದಾಣಿಕೆಯಿಂದ ಇರುತ್ತಾರೆ ಎಂದು ಹೇಳಲಾಗುವುದು.
ದಾಳಿಂಬೆ ಹೂ: ಗಣಪನಿಗೆ ದಾಳಿಂಬೆ ಹೂವೆಂದರೆ ತುಂಬಾ ಇಷ್ಟ.ಗಣಪನ ಪೂಜೆಯಲ್ಲಿ ಸಾಮಾನ್ಯವಾಗಿ ದಾಳಿಂಬೆ ಹೂ ಇದ್ದೇ ಇರುತ್ತದೆ. ಈ ಹೂವು ಸಿಗುವುದು ಅಪರೂಪವಾದರೂ, ಪೂಜೆಗೆ ಇಟ್ಟರೆ ಶುಭ ಎನ್ನಲಾಗುತ್ತದೆ.
ತುಳಸಿ: ನಮ್ಮ ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಮಹತ್ತರವಾದ ಸ್ಥಾನವಿದ್ದು, ಸಾಮಾನ್ಯವಾಗಿ ಎಲ್ಲಾ ದೇವರ ಪೂಜೆಗೂ ತುಳಸಿ ಬಳಸುತ್ತೇವೆ. ಹಾಗೇ ಗಣಪನಿಗೂ ತುಳಸಿಯನ್ನು ಮಾಲೆ ಮಾಡಿ ಅರ್ಪಿಸುವುದರಿಂದ ಬೇಡಿದ್ದು ನೆರವೇರುತ್ತದೆ ಹಾಗೂ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.
ಶಂಖ ಹೂ: ಕಡು ನೀಲಿ ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಈ ಹೂವುಗಳನ್ನು ನೀವು ಗಣೇಶನ ಪೂಜೆಗೆ ಬಳಸಬಹುದು. ಇದನ್ನು ಆಯುರ್ವೇದದಲ್ಲಿ ಔಷಧಿಯನ್ನಾಗಿ ಕೂಡ ಬಳಸಲಾಗುವುದು.