ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಗಣೇಶನಿಗೆ ಪ್ರಿಯವಾದ ಬುಧವಾರದಂದು ಈ ವಸ್ತುಗಳನ್ನು ಅರ್ಪಿಸಿ ಸಾಕು; ಸಂಪತ್ತು ಹೆಚ್ಚಾಗುತ್ತದೆ

ಪ್ರತಿ ಪೂಜೆಗೂ ಮುಂಚಿತವಾಗಿ ಗಣೇಶನನ್ನು ಪೂಜಿಸಲಾಗುತ್ತದೆ, ಆಗ ಮಾತ್ರ ಇತರ ದೇವರುಗಳ ಪೂಜೆ ಮಾನ್ಯವಾಗಿರುತ್ತದೆ, ಆದರೆ ಮತ್ತೊಂದೆಡೆ ಬಪ್ಪನ ಆರಾಧನೆಯಲ್ಲಿ ಕೆಲವು ವಿಶೇಷ ವಿಷಯಗಳನ್ನು ನೋಡಿಕೊಳ್ಳಬೇಕು ಮತ್ತು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಬೇಕು. ಗಣೇಶನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು..? ಎಂಬ ಮಾಹಿತಿ ಇಲ್ಲಿದೆ..

ಬುಧವಾರ ಗಣೇಶನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು..?

ಗಣೇಶ ಫೋಟೋ

Profile Sushmitha Jain Mar 5, 2025 7:11 AM

ಶಿವ ಪುತ್ರ ಗಣೇಶನನ್ನು ವಿಘ್ನ ವಿನಾಶಕ, ಮಂಗಳಮೂರ್ತಿ, ವಕ್ರತುಂಡ, ಮೂಷಿಕ ಎಂದೆಲ್ಲಾ ನಾನಾ ಹೆಸರಿಂದ ಕರೆಯುತ್ತಾರೆ. ಹೊಸ ಕೆಲಸದ ಆರಂಭ, ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಪ್ರಥಮ ಪೂಜಿತ ಗಣೇಶನ ಮೊರೆ ಹೋಗುತ್ತಾರೆ. ಅದರಲ್ಲೂ ಬುಧವಾರ ಗಣೇಶನ ಆರಾಧನೆಗೆ ಶ್ರೇಷ್ಠವಾಗಿದ್ದು, ಈ ದಿನ ಗಣಪನನ್ನು ಪೂಜಿಸುವುದರಿಂದ ವಿಶೇಷ ಪೂಜಾ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೇ ಸುಖ, ಶಾಂತಿ, ಸಮೃದ್ಧಿಯ ಪ್ರಾಪ್ತಿಯೊಂದಿಗೆ ಬುಧ ದೋಷಗಳು ನಿವಾರಣೆಯಾಗುತ್ತದೆ.
ಹಾಗೇ ಈ ದಿನದಂದು ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದರಿಂದ ಅವನ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದ್ರೆ ಗಣೇಶನಿಗೆ ಪ್ರಿಯವಾದ ವಸ್ತುಗಳಾವುವು..? ಆತನ ಪೂಜೆಯಲ್ಲಿ ಯಾವ ವಸ್ತುಗಳನ್ನು ಅರ್ಪಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಗರಿಕೆ ಅರ್ಪಿಸಿ

ಗಣೇಶನಿಗೆ ಪ್ರಿಯವಾದ ವಸ್ತುಗಳಲ್ಲಿ ಗರಿಕೆ ಪ್ರಮುಖವಾದುದ್ದು. ಗರಿಕೆಯಿಲ್ಲದೆ ಮಾಡುವ ಗಣಪತಿ ಪೂಜೆಯು ನಮಗೆ ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ. ಹಾಗಾಗಿ, ಗಣಪತಿಯನ್ನು ಪೂಜಿಸುವ ಸಮಯದಲ್ಲಿ ಆತನಿಗೆ ಗರಿಕೆಯನ್ನು ಕಡ್ಡಾಯವಾಗಿ ಅರ್ಪಿಸಿ. ಬುಧವಾರದಂದು ಗಣಪತಿಯನ್ನು ಪೂಜಿಸುವಾಗ ಆತನಿಗೆ ಗರಿಕೆಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುವುದು ಹಾಗೂ ಆ ವ್ಯಕ್ತಿಯು ದೀರ್ಘಾಯುಷ್ಯವನ್ನು ಪಡೆದುಕೊಳ್ಳುವನು ಎನ್ನುವ ನಂಬಿಕೆಯಿದೆ. ಹಾಗಾಗಿ, ಗಣೇಶನನ್ನು ಪೂಜಿಸುವಾಗ ಆತನಿಗೆ ತಪ್ಪದೇ ಗರಿಕೆಯನ್ನು ಅರ್ಪಿಸಿ ಪೂಜೆ ಮಾಡಿ. ಗರಿಕೆಯನ್ನು ದೂರ್ವಾ ಎಂದೂ ಕರೆಯಲಾಗುತ್ತದೆ.
ಗಣೇಶನಿಗೆ ಸಿಂಧೂರ ಅರ್ಪಿಸಿ
ಬುಧವಾರದಂದು ಗಣೇಶ ದೇವಸ್ಥಾನಕ್ಕೆ ಹೋಗಿ ಸಿಂಧೂರ, ಹೂವುಗಳನ್ನು ಅರ್ಪಿಸಿ. ಬುಧವಾರ ಯಾವುದಾದರು ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೆ ಹಣೆಗೆ ಕೆಂಪು ಸಿಂಧೂರ ಹಚ್ಚಿಕೊಂಡು ಹೊರಗೆ ಹೋಗಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹಾಗೇ ಬುಧವಾರದಂದು ಗಣೇಶನಿಗೆ ಮೋದಕ ಅಥವಾ ಲಾಡುವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಗಣಪತಿಯು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಈ ಸುದ್ದಿಯನ್ನು ಓದಿ: Vastu Tips: ಮನೆಯಲ್ಲಿ ಶಾಂತಿ - ಸಕಾರಾತ್ಮಕತೆ ಹೆಚ್ಚಿಸಲು ಬುದ್ಧನನ್ನು ಮನೆಯ ಯಾವ ಮೂಲೆಯಲ್ಲಿ ಇಡಬೇಕು?
ದಾನ ಮಾಡಿ

ಬುಧವಾರದಂದು ಈ ವಸ್ತುಗಳನ್ನು ದಾನ ಮಾಡುವುದು ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳುವಿರಿ ಎಂದು ಹೇಳಲಾಗುತ್ತದೆ. ಬುಧವಾರ ಹಸಿರು ಬಣ್ಣದ ಹೆಸರು ಕಾಳುಗಳನ್ನು ದಾನ ಮಾಡುವುದು ತುಂಬಾ ಫಲಪ್ರದವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಬುಧನ ಸ್ಥಾನವು ಬಲಗೊಳ್ಳುತ್ತದೆ ಮತ್ತು ಗಣೇಶನ ಜೊತೆಗೆ ಭಗವಾನ್‌ ಶಿವನ ಆಶೀರ್ವಾದವೂ ನಿಮ್ಮ ಮೇಲಿರುತ್ತದೆ.

ಈ ನೈವೇದ್ಯ ಅರ್ಪಿಸಿ

ಗಣೇಶನಿಗೆ ತುಂಬಾನೇ ಪ್ರಿಯವಾದ ಮತ್ತೊಂದು ವಸ್ತುವೆಂದರೆ ಅದುವೇ ಮೋದಕ. ಬುಧವಾರದ ದಿನದಂದು ನೀವು ಗಣಪತಿಯನ್ನು ಪೂಜಿಸುವ ಸಮಯದಲ್ಲಿ ಆತನಿಗೆ ಮೋದಕವನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಬೇಕು. ನೀವು ಗಣಪತಿಗೆ ಮೋದಕವನ್ನು ಅರ್ಪಿಸುವುದರಿಂದ ಗಣಪತಿಯ ಕೃಪೆಯನ್ನು ಮಾತ್ರವಲ್ಲ, ದೇವಾನು ದೇವತೆಗಳ ಕೃಪೆಯನ್ನು ಕೂಡ ಪಡೆದುಕೊಳ್ಳುತ್ತೀರಿ. ಇದು ನಿಮಗೆ ಎಲ್ಲಾ ದೇವರು ಮತ್ತು ದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.