Astro Tips: ಶುಕ್ರವಾರ ಈ ಕೆಲಗಳನ್ನು ಮಾಡಿದರೆ ಲಕ್ಷ್ಮಿ ದೇವಿ ಕೋಪಗೊಳ್ಳುವಳು..!
ಶುಕ್ರವಾರದ ದಿನ ಲಕ್ಷ್ಮಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದಿನವನ್ನು ಶುಭದಿನವೆಂದು ಪರಿಗಣಿಸಲಾಗುತ್ತದೆ. ಹಾಗಂತ ಎಲ್ಲ ಕೆಲಸವನ್ನೂ ಶುಕ್ರವಾರ ಮಾಡುವಂತಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ಕೆಲಸಕ್ಕೆ ನಿಷೇಧವಿದೆ. ಶುಕ್ರವಾರದ ದಿನದಂದು ಕೆಲವು ವಸ್ತುಗಳನ್ನು ಖರೀದಿಸಬಾರದು ಅಥವಾ ಶಾಪಿಂಗ್ ಮಾಡಬಾರದು ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಲಕ್ಷ್ಮಿ ದೇವಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ನೀವು ಸಂಪತ್ತಿ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ ಶುಕ್ರವಾರವು ಅತ್ಯಂತ ಮಂಗಳಕರ ದಿನ. ಈ ದಿನ ನೀವು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಮಾತ್ರವಲ್ಲ. ಕೆಲವೊಂದು ನಿಯಮಗಳ ಬಗ್ಗೆಯೂ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಶುಕ್ರವಾರದಂದು ನೀವು ಈ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ವಿಶೇಷವಾಗಿ ಶುಕ್ರವಾರದ ದಿನದಂದು ಕೆಲವು ವಸ್ತುಗಳನ್ನು ಖರೀದಿಸಬಾರದು ಅಥವಾ ಶಾಪಿಂಗ್ ಮಾಡಬಾರದು ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ..
ಪಾತ್ರೆಗಳು
ಮೊದಲನೇಯದಾಗಿ ನಾವು ಶುಕ್ರವಾರದ ದಿನದಂದು ಅಡುಗೆ ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು. ಶುಕ್ರವಾರ ಇವುಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದು ನಿಮ್ಮ ಮನೆಯಲ್ಲಿ ಧಾನ್ಯದ ಕೊರತೆಯನ್ನು ಉಂಟು ಮಾಡಬಹುದು. ಒಂದು ವೇಳೆ ನೀವು ಅಡುಗೆ ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಲು ಬಯಸಿದರೆ ಒಂದು ದಿನ ಮುಂಚಿತವಾಗಿ ಖರೀದಿಸಿ.
ಪೂಜೆಗೆ ಸಂಬಂಧಿಸಿದ ವಸ್ತುಗಳು
ಪೂಜೆಗೆ ಸಂಬಂಧಿಸಿದ ಅಥವಾ ಪೂಜೆ ಸಾಮಾಗ್ರಿಗಳನ್ನು ನೀವು ಶುಕ್ರವಾರದ ದಿನದಂದು ಖರೀದಿಸಬಾರದು. ನೀವು ಶುಕ್ರವಾರ ಪೂಜೆ ವಸ್ತುಗಳನ್ನು ಖರೀದಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮೇಲೆ, ನಿಮ್ಮ ಮನೆಯ ಸದಸ್ಯರ ಮೇಲೆ ಕೆಟ್ಟ ಪ್ರಭಾವ ಬೀರಬಹುದು. ಈ ಕಾರಣಕ್ಕಾಗಿ ನೀವು ಶುಕ್ರವಾರದ ದಿನದಂದು ತಪ್ಪಿಯೂ ಪೂಜೆ ಸಾಮಾಗ್ರಿಗಳನ್ನು ಖರೀದಿಸದಿರಿ.
ಕೈಸಾಲ ನೀಡಬೇಡಿ:
ಶುಕ್ರವಾರದ ದಿನದಂದು ನೀವು ಯಾರಿಗೂ ಹಣವನ್ನು ಸಾಲವಾಗಿ ನೀಡಬಾರದು ಅಥವಾ ಯಾರಿಂದಲೂ ಹಣವನ್ನು ಸಾಲವಾಗಿ ತೆಗೆದುಕೊಳ್ಳಬಾರದು. ಯಾರಿಂದಲಾದರೂ ನೀವು ಈ ದಿನ ಹಣವನ್ನು ಸಾಲವಾಗಿ ಪಡೆದುಕೊಂಡರೆ ಭವಿಷ್ಯದಲ್ಲಿ ಬಡತನವನ್ನು ಅಥವಾ ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನ ನೀವು ಸಾಲ ನೀಡುವುದರಿಂದ ಆ ಹಣ ಮರಳಿ ನಿಮಗೆ ಬಾರದೇ ಇರಬಹುದು.
ಆಸ್ತಿ ಖರೀದಿಗೆ ಹೋಗ್ಬೇಡಿ:
ಶುಕ್ರವಾರ ಶುಭ ದಿನ ಹೌದು, ಆದ್ರೆ ಈ ದಿನ ಆಸ್ತಿ ಖರೀದಿ ಮಾಡಬಾರದು. ಮನೆ, ಆಸ್ತಿ ಖರೀದಿ ಮಾಡೋದು ಜೀವನದ ದೊಡ್ಡ ಕೆಲಸಗಳಲ್ಲಿ ಒಂದು. ಈ ದಿನವನ್ನು ನಾವು ಮುಹೂರ್ತ ನೋಡಿ ನಿಶ್ಚಯಿಸ್ತೇವೆ. ಒಂದ್ವೇಳೆ ಮುಹೂರ್ತ ನೋಡಿ ಖರೀದಿ ಸಾಧ್ಯವಾಗಿಲ್ಲ ಎಂದಾದ್ರೂ ನೀವು ಶುಕ್ರವಾರ ಮಾತ್ರ ಖರೀದಿ ಸಹವಾಸಕ್ಕೆ ಹೋಗ್ಬೇಡಿ. ಇದ್ರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ: Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಗಿಡವಿದ್ದರೆ ಸಂಪತ್ತನ್ನು ಆಕರ್ಷಿಸುವುದು
ಮಹಿಳೆಯರನ್ನು ನಿಂದಿಸಬೇಡಿ:
ಶುಕ್ರವಾರ ಮಾತ್ರವಲ್ಲ ಎಂದೂ ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅವಮಾನಿಸಬಾರದು. ಅವರಿಗೆ ದುಃಖವಾಗುವಂತೆ ನಡೆದುಕೊಳ್ಳಬಾರದು. ಶುಕ್ರವಾರ ಲಕ್ಷ್ಮಿಗೆ ಮೀಸಲಿರುವ ಕಾರಣ ಆ ದಿನವಂತೂ ಎಚ್ಚರಿಕೆಯಿಂದ ಮಾತನಾಡಬೇಕು. ಮನೆಯಲ್ಲಿರುವ ಹೆಣ್ಣು ನೊಂದುಕೊಂಡ್ರೆ ಮನೆ ಉದ್ಧಾರ ಸಾಧ್ಯವಿಲ್ಲ. ಹೆಣ್ಣಿಗೆ ಗೌರವ ಸಿಗದ ಮನೆಯಲ್ಲಿ ಆಸ್ತಿ, ಧನ, ಸಂತೋಷದ ಕೊರತೆಯಾಗುತ್ತದೆ. ಹಾಗಾಗಿ ನೀವು ಶುಕ್ರವಾರ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಅವಮಾನಿಸಬೇಡಿ. ಅವರಿಗೆ ಬೇಸರವಾಗುವಂತೆ ನಡೆದುಕೊಳ್ಳಬೇಡಿ.
ಈ ವಸ್ತುಗಳನ್ನು ದಾನ ನೀಡಬೇಡಿ:
ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಿದೆ. ನೀವು ಯಾವುದೇ ವಸ್ತುವನ್ನು ಶುದ್ಧ ಮನಸ್ಸಿನಿಂದ ದಾನ ಮಾಡಿದ್ರೂ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಂತ ವಾರದ ಎಲ್ಲ ದಿನ ,ಎಲ್ಲ ವಸ್ತುಗಳನ್ನು ದಾನ ಮಾಡೋದು ಸಾಧ್ಯವಿಲ್ಲ. ಶಾಸ್ತ್ರದಲ್ಲಿ ಹೇಳಿದಂತೆ ಅದಕ್ಕೆ ಮೀಸಲಾದ ದಿನವೇ ನೀವು ದಾನ ಮಾಡ್ಬೇಕು. ಶುಕ್ರವಾರದಂದು ನೀವು ಸಕ್ಕರೆ ಹಾಗೂ ಬೆಳ್ಳಿಯ ವಸ್ತುಗಳನ್ನು ದಾನವಾಗಿ ನೀಡಬೇಡಿ. ಸಕ್ಕರೆಯನ್ನು ದಾನ ಮಾಡಿದ್ರೆ ನಿಮ್ಮ ಗ್ರಹದಲ್ಲಿ ಶುಕ್ರ ದುರ್ಬಲನಾಗುತ್ತಾನೆ. ಭೌತಿಕ ಸುಖ ಲಭಿಸುವುದಿಲ್ಲ.