ದಿನ ಭವಿಷ್ಯ, ಮೇ 4, 2026: ಅಭಿವೃದ್ಧಿ ಹೊಂದಲು ಇದು ಉತ್ತಮ ಸಮಯ; ಆರೋಗ್ಯದಲ್ಲೂ ಸುಧಾರಣೆ
Horoscope Today May 4: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ತೃತೀಯ ತಿಥಿ, ಅನುರಾಧ ನಕ್ಷತ್ರದ ಮೇ 4ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು, ಮೇ 4: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ತೃತೀಯ ತಿಥಿ, ಅನುರಾಧ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಯಾವುದೇ ಮುಖ್ಯವಾದ ಇಮೇಲ್, ಸಂದೇಶ ಕಳುಹಿಸಲು ಹೋಗುವುದು ಸರಿಯಲ್ಲ. ಇವತ್ತು ನೀವು ಅಂದುಕೊಂಡದೆಲ್ಲ ವಿರುದ್ಧವಾಗಿ ನಡೆಯುವ ಸಾಧ್ಯತೆ ಇದೆ.
ವೃಷಭ ರಾಶಿ: ಈ ರಾಶಿಗೆ ಅತೀ ಉತ್ತಮ ದಿನವಾಗಿದೆ. ದಾಂಪತ್ಯದಲ್ಲಿ ನೆಮ್ಮದಿ ಇದ್ದು, ಪ್ರೇಮ ಪ್ರೀತಿ ಪ್ರಕರಣದಲ್ಲಿ ಯಶಸ್ಸು ಸಿಗುತ್ತದೆ. ವ್ಯವಹಾರದಲ್ಲಿ ಕೂಡ ಯಶಸ್ಸು ಸಿಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಇಂದು ಕಷ್ಟದ ದಿನವಾಗಲಿದೆ. ಆದರೂ ಆತ್ಮವಿಶ್ವಾಸ ಹೆಚ್ಚಾಗಿ ಇರುವುದರಿಂದ ಶತ್ರುಗಳು ಹಿಮ್ಮೆಟ್ಟಬಹುದು. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆಸ್ತಿ ಪಾಸ್ತಿ ಹಾಗೂ ಬಿಸೆನೆಸ್ ವ್ಯವಹಾರದಲ್ಲಿ ಸಮಸ್ಯೆ ಉಂಟಾಗಬಹುದು. ಮಕ್ಕಳಿಗೆ ಸಂಬಂಧಿಸಿದ ವಿಚಾರವಾಗಿಯೂ ತೊಂದರೆ ಇರಬಹುದು
ಸಿಂಹ ರಾಶಿ: ಸಿಂಹ ರಾಶಿಯವರಿಗೆ ತಾಯಿಯ ಬಗ್ಗೆ ಇಂದು ಬೇಸರ ಇರಬಹುದು. ಆದರೆ ಮನೆಯ ವ್ಯವಹಾರ,ಆಸ್ತಿ ಪಾಸ್ತಿ ವಿಚಾರವಾಗಿ ನೀವೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ
ದುಡ್ಡು ಬರುತ್ತದೆ… ಆದರೆ ಉಳಿಯೋದಿಲ್ಲವಾ? ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ!
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು, ಸಹೋದರ ಸಹೋದರಿಯ ಭಾಂದವ್ಯದಿಂದ ಖುಷಿ, ಸಹಕಾರ ಪ್ರಾಪ್ತಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಅತೀ ಹೆಚ್ಚಿನ ಯಶಸ್ಸು ಪ್ರಾಪ್ತಿಯಾಗುತ್ತದೆ. ಬಂಧು ಬಳಗದವರ ವಿಶ್ವಾಸವನ್ನು ಗಳಿಸುತ್ತೀರಿ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ನೀವು ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅದೇ ರೀತಿ ಮುಖ್ಯವಾದ ಸ್ನೇಹ ಸಂಬಂಧದಲ್ಲಿ ಒಡಕು ಉಂಟಾಗಬಹುದು. ಯಾವುದೇ ಮುಖ್ಯ ನಿರ್ಧಾರ ಇಂದು ಮಾಡಲು ಹೋಗಬೇಡಿ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು, ಎಲ್ಲ ಕೆಲಸದಲ್ಲೂ ಜಯ ಕಾಣುತ್ತೀರಿ.
ಕುಂಭ ರಾಶಿ: ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಎಲ್ಲವೂ ಇಂದು ನಿಮ್ಮ ಪರವಾಗಿಯೇ ನಡೆಯುತ್ತದೆ.
ಮೀನ ರಾಶಿ: ಮೀನ ರಾಶಿಗೆ ಉತ್ತಮ ದಿನವಾಗಲಿದೆ. ಆದರೂ ಕೂಡ ಹಿರಿಯರ ಆಶೀರ್ವಾದ ಮೂಲಕ ಮಾತ್ರ ನೀವು ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ.