ದಿನ ಭವಿಷ್ಯ, ಮಾರ್ಚ್ 28, 2026: ಈ ಐದು ರಾಶಿಗಳಿಗೆ ಇಂದು ಅತೀ ಹೆಚ್ಚಿನ ಯಶಸ್ಸು ಸಿಗುವ ದಿನ!
Horoscope Today March 28: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ದಶಮಿ ತಿಥಿ, ಪುಷ್ಯ ನಕ್ಷತ್ರದ ಮಾರ್ಚ್ 28ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ಪುಷ್ಯ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಮನೆಯ ಜವಾಬ್ದಾರಿ ಇಂದು ಹೆಚ್ಚಾಗಿ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನವಹಿಸಬೇಕು. ಅದೇ ರೀತಿ ಕುಟುಂಬ ಸಂತೋಷ ಕಾಪಾಡುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತೀ ಉತ್ತಮ ವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮಾತಿನಿಂದ ಎಲ್ಲವನ್ನು ನೀವು ಗೆಲ್ಲಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರು ನಿಮ್ಮ ಸಂಸಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮನೆಯ ಜವಾಬ್ದಾರಿಗಳು ಕೂಡ ಇಂದು ಹೆಚ್ಚಾಗಿಯೇ ಇರುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ರಾಶಿಯಲ್ಲೇ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ನೀವು ಅಂದು ಕೊಂಡ ಕೆಲಸ ಕಾರ್ಯಗಳು ಕಾರ್ಯಗತಗೊಳ್ಳಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಆದರೂ ಕೂಡ ಹಿಂದಿನ ಎರಡು ಮೂರು ದಿನದ ತೊಂದರೆ ಸ್ವಲ್ಪ ಮಾಯವಾಗಿ ಮುಂದಿನ ದಿನಕ್ಕೆ ಉತ್ತಮ ಮಾರ್ಗದರ್ಶನ ಸಿಗಬಹುದು.
Vastu Tips: ಸುಗಂಧರಾಜ ಗಿಡ ಮನೆಯಲ್ಲಿ ನೆಟ್ಟರೆ ಸೌಭಾಗ್ಯ: ವಾಸ್ತು ಪ್ರಕಾರ ಯಾವ ದಿಕ್ಕು ಸೂಕ್ತ?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಭಾಗ್ಯೋದಯವಾಗುತ್ತದೆ. ಮಿತ್ರರಿಂದ ಅತೀ ಹೆಚ್ಚಿನ ಖುಷಿ ಸಿಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯಕ್ಷೇತ್ರದ ಜವಾಬ್ದಾರಿ ತುಂಬಾನೇ ಜಾಸ್ತಿಯಾಗಿರುತ್ತದೆ. ಆದರೆ ಈ ಜವಾಬ್ದಾರಿಗೆ ಹೆಚ್ಚಿನ ಯಶಸ್ಸು ಕೂಡ ನಿಮಗೆ ಸಿಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅದೃಷ್ಟ ಪರೀಕ್ಷೆ ನಡೆಯುತ್ತಿರುತ್ತದೆ. ಆದರೆ ಇದ್ದ ಸಮಸ್ಯೆ ಗಳು ಬಗೆಹರಿದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ವಿಚಾರದಲ್ಲಿ ನಾನಾ ರೀತಿಯ ಯೋಚನೆಗಳು ನಿಮಗೆ ಕಾಡಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಎಲ್ಲರಿಂದ ನಿಮಗೆ ಅಕ್ಕರೆ ಪ್ರಾಪ್ತಿಯಾಗುತ್ತದೆ. ಆದರೆ ಎಲ್ಲರ ಜೊತೆ ನೀವು ವಿನಯಪೂರ್ವಕವಾಗಿ ನಡೆದುಕೊಳ್ಳಬೇಕು.
ಕುಂಭರಾಶಿ: ಈ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಮುನ್ನಡೆಯನ್ನು ಸಾಧಿಸುತ್ತೀರಿ. ಶತ್ರುಗಳನ್ನು ಹಿಮ್ಮೆಟ್ಟಲಿದ್ದು ಎಲ್ಲದರಲ್ಲೂ ಯಶಸ್ಸು ಕಾಣುತ್ತೀರಿ
ಮೀನ ರಾಶಿ: ಮೀನ ರಾಶಿಗೆ ಕ್ಲಿಷ್ಟಕರವಾದ ದಿನವಾಗಿದೆ. ಸಂಜೆಯವರೆಗೆ ಸ್ವಲ್ಪ ಚಾಲೆಂಜ್ ಗಳು ಇರಬಹುದು. ಹಾಗಾಗಿ ಸರಿಯಾದ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳಿ.