ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vastu Tips: ಸುಗಂಧರಾಜ ಗಿಡ ಮನೆಯಲ್ಲಿ ನೆಟ್ಟರೆ ಸೌಭಾಗ್ಯ: ವಾಸ್ತು ಪ್ರಕಾರ ಯಾವ ದಿಕ್ಕು ಸೂಕ್ತ?

ಸುಗಂಧರಾಜ ಗಿಡವು ಪರಿಮಳಯುಕ್ತ ಹೂಗಳಿಂದ ಮನೆಯ ವಾತಾವರಣವನ್ನು ಸುಂದರಗೊಳಿಸುವುದರ ಜೊತೆಗೆ, ವಾಸ್ತು ಪ್ರಕಾರ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಟ್ಟರೆ ಸಮೃದ್ಧಿ, ಸಂತೋಷ ಮತ್ತು ಜೀವನದಲ್ಲಿ ಪ್ರಗತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ಈ ಗಿಡ ನೆಟ್ಟರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ

ಸುಗಂಧರಾಜ ಗಿಡ -

Profile
Sushmitha Jain Mar 23, 2026 8:48 AM

ಬೆಂಗಳೂರು: ಮನೆಯಲ್ಲಿ ಕೆಲವು ಸಸಿಗಳನ್ನು ಬೆಳೆಸುವುದರಿಂದ ಅಲಂಕಾರ ಹೆಚ್ಚುವುದಷ್ಟೇ ಅಲ್ಲ, ಧನಾತ್ಮಕ ಶಕ್ತಿಯೂ ವೃದ್ಧಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಬಣ್ಣಬಣ್ಣದ ಹೂಗಳ ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೂ ಹರ್ಷ ನೀಡುತ್ತವೆ. ಅಂತಹ ಸಸ್ಯಗಳ ಪೈಕಿ ಪರಿಮಳಯುಕ್ತ ಹೂಬಿಡುವ ಸುಗಂಧರಾಜ ಗಿಡವೂ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಇದರ ಜೊತೆಗೆ, ವಾಸ್ತು ಶಾಸ್ತ್ರದ ಪ್ರಕಾರ ಸುಗಂಧರಾಜ ಗಿಡವನ್ನು ಬಹಳ ಶುಭಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿನ ನಕಾರಾತ್ಮಕತೆಯನ್ನು ಕಡಿಮೆ ಮಾಡಿ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಕೆಲವರ ಅಭಿಪ್ರಾಯದಲ್ಲಿ, ಈ ಗಿಡವು ಜೀವನದಲ್ಲಿನ ವಿವಿಧ ತೊಂದರೆಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

ಹೀಗಾಗಿ, ವಾಸ್ತು ಶಾಸ್ತ್ರದ ಪ್ರಕಾರ (Vastu Tips) ಗಂಧರಾಜ ಗಿಡವನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ನೆಟ್ಟರೆ ಹೆಚ್ಚು ಲಾಭ ದೊರೆಯುತ್ತದೆ ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ವಿಶೇಷವಾಗಿ ಮನೆಯಲ್ಲಿ ಸುಗಂಧ ಸಸ್ಯಗಳನ್ನು ನೆಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ ಎಂದು ನಂಬಲಾಗಿದೆ.

ಇದರ ಹೂಗಳಿಂದ ಹೊರಹೊಮ್ಮುವ ಸುವಾಸನೆ ಸುತ್ತಮುತ್ತಲಿನ ವಾತಾವರಣವನ್ನು ಸುಗಂಧಮಯವಾಗಿಸುತ್ತದೆ. ಜೊತೆಗೆ ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯ ವಾತಾವರಣ ನಿರ್ಮಾಣ ಮಾಡುತ್ತದೆ ಎಂಬ ನಂಬಿಕೆ ಇದೆ.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ವಾಸ್ತು ಶಾಸ್ತ್ರದ ಪ್ರಕಾರ, ಸುಗಂಧರಾಜ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭಕರ. ಈ ದಿಕ್ಕಿನಲ್ಲಿ ಗಿಡವನ್ನು ನೆಟ್ಟರೆ ಮನೆಯಲ್ಲಿನ ಸಮೃದ್ಧಿ ಹೆಚ್ಚಾಗಿ, ಜೀವನದಲ್ಲಿ ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.

ಅದೇ ರೀತಿ, ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉಂಟಾದರೆ ಮನೆಯ ಅಂಗಳದಲ್ಲಿ ಅಥವಾ ಕುಂಡದಲ್ಲಿ ಸುಗಂಧರಾಜ ಗಿಡವನ್ನು ನೆಡುವುದು ಉತ್ತಮ ಎಂದು ನಂಬಲಾಗಿದೆ. ಇದರಿಂದ ಪತಿ-ಪತ್ನಿಯರ ನಡುವಿನ ಸಂಬಂಧ ಗಟ್ಟಿಯಾಗುತ್ತಿದ್ದು, ಪ್ರೀತಿ ಮತ್ತು ಹೊಂದಾಣಿಕೆ ಹೆಚ್ಚುತ್ತದೆ ಎಂದು ಹೇಳುತ್ತಾರೆ.

ಇನ್ನೂ ವಾಸ್ತು ದೃಷ್ಟಿಯಿಂದ ನೋಡಿದರೆ, ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗಲು ಸಹ ಇದು ಸಹಾಯಕವಾಗುತ್ತದೆ ಎಂದು ನಂಬಲಾಗಿದೆ. ಜೊತೆಗೆ, ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚುತ್ತವೆ ಎನ್ನಲಾಗಿದೆ.