ಬೆಂಗಳೂರು: ವೈವಾಹಿಕ ಬದುಕಿನಲ್ಲಿ ಪ್ರೀತಿಯಲ್ಲಿ ಏರುಪೇರುಗಳಾಗುವುದು ಸಹಜ. ಜೀವನದಲ್ಲಿ ಬರುವ ತೊಂದರೆಗಳನ್ನು ಎದುರಿಸಿ ಪ್ರೀತಿಯಲ್ಲಿ ಸ್ಥಿರತೆ ಮತ್ತು ದೃಢತೆಯನ್ನು ಉಳಿಸಿಕೊಳ್ಳಬೇಕಾಗಿರುವುದು ದಂಪತಿಯ ಜವಾಬ್ದಾರಿಯಾಗಿರುತ್ತದೆ. ಕೆಲವೊಮ್ಮೆ ದಂಪತಿಯ ಪ್ರೀತಿಯ ಮೇಲೆ ವಾಸ್ತು (vastu tips) ದೋಷದ ಪ್ರಭಾವ ಕೂಡ ಉಂಟಾಗುತ್ತದೆ. ಹೀಗಾಗಿ ಇದನ್ನೆಲ್ಲ ನಿವಾರಿಸಲು ವಾಸ್ತು ಶಾಸ್ತ್ರ (vastu shastra) ಹೇಳುವ ಕೆಲವೊಂದು ಉಪಾಯಗಳನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಅವುಗಳಲ್ಲಿ ಗಿಳಿಯ ಫೋಟೊ (vastu for Parrot Couple Photo) ಕೂಡ ಒಂದು. ಜೋಡಿ ಗಿಳಿಗಳ ಫೋಟೊವನ್ನು ಸರಿಯಾದ ಸ್ಥಳದಲ್ಲಿ ಇರಿಸುವುದರಿಂದ ದಂಪತಿಯ ನಡುವೆ ಪ್ರೀತಿ ಹೆಚ್ಚಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ.
ಗಿಳಿಗಳನ್ನು ಅತ್ಯಂತ ಶುಭ ಸಂಕೇತವೆಂದು ವಾಸ್ತು ಶಾಸ್ತ್ರ ಪರಿಗಣಿಸಿದೆ. ಗಿಳಿಗಳನ್ನು ಪ್ರೀತಿ, ಪ್ರಣಯ, ನಿಷ್ಠೆ ಮತ್ತು ವೈವಾಹಿಕ ಆನಂದದ ಅತ್ಯಂತ ಪ್ರಬಲ ಸಂಕೇತವೆಂದು ಗುರುತಿಸಲಾಗಿದೆ. ಗಿಳಿಗಳು ಜ್ಞಾನದ ದೇವತೆ ಸರಸ್ವತಿಯೊಂದಿಗೆ ಕೂಡ ಸಂಬಂಧ ಹೊಂದಿದೆ. ಇದರ ಫೋಟೊವನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆ ಮಂದಿಯಲ್ಲಿ ಬುದ್ಧಿವಂತಿಕೆ ಮತ್ತು ಸಂವಹನ ಹೆಚ್ಚಾಗುತ್ತದೆ. ಆದರೆ ಇದಕ್ಕಾಗಿ ಸರಿಯಾದ ಸ್ಥಳ ಮುಖ್ಯವಾಗುತ್ತದೆ.
ಇದನ್ನೂ ಓದಿ: Vastu Tips: ಪರ್ಸ್ ನಲ್ಲಿಟ್ಟುಕೊಳ್ಳುವ ಈ ವಸ್ತುಗಳು ಅದೃಷ್ಟವನ್ನು ಆಕರ್ಷಿಸುತ್ತದೆ..! ಆ ವಸ್ತುಗಳು ಯಾವುವು ನೋಡಿ
ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಗಿಳಿಯ ಪ್ರತಿಮೆ ಅಥವಾ ಫೋಟೊವನನು ಇಡುವುದರಿಂದ ಕುಟುಂಬದಲ್ಲಿ ಸಂಬಂಧಗಳಲ್ಲಿ ವಿಶ್ವಾಸ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ.
ಮನೆಯಲ್ಲಿ ಗಿಳಿಯ ಜೋಡಿ ಚಿತ್ರ ಅಥವಾ ಮೂರ್ತಿಯನ್ನು ಇರಿಸುವುದು ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು. ಹಸಿರು, ಕೆಂಪು ಅಥವಾ ಬಹುವರ್ಣದ ಗಿಳಿಗಳ ಚಿತ್ರಗಳು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
ಪ್ರತಿಮೆಗಳಲ್ಲಿ ಮರ, ಸೆರಾಮಿಕ್, ಸ್ಫಟಿಕ ಅಥವಾ ರಾಳದ ಪ್ರತಿಮೆಗಳನ್ನು ಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಪ್ಲಾಸ್ಟಿಕ್ ಅಥವಾ ಮುರಿದ ಗಿಳಿಯ ಪ್ರತಿಮೆ ಇಡುವುದನ್ನು ತಪ್ಪಿಸಬೇಕು. ಮನೆಯಲ್ಲಿ ಜೋಡಿ ಗಿಳಿಗಳನ್ನು ಇರಿಸಿದರೆ ಶುಕ್ರ ಮತ್ತು ಚಂದ್ರನ ಶಕ್ತಿ ದ್ವಿಗುಣಗೊಳ್ಳುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈಋತ್ಯ ದಿಕ್ಕಿನಲ್ಲಿ ಗಿಳಿಗಳ ಚಿತ್ರಗಳನ್ನು ಇಡಬೇಕು. ಈ ದಿಕ್ಕು ಪ್ರೀತಿ ಮತ್ತು ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ. ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿ ಒಂದು ಜೋಡಿ ಗಿಳಿಗಳ ಫೋಟೊ ಇರಿಸಿದರೆ ದಂಪತಿ ನಡುವೆ ಪ್ರೀತಿ, ತಿಳುವಳಿಕೆ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.
ಮಲಗುವ ಕೋಣೆಯಲ್ಲಿ ಒಂದು ಜೋಡಿ ಗಿಳಿಯ ಚಿತ್ರಗಳನ್ನು ಇಡುವುದರಿಂದ ದಾಂಪತ್ಯ ಜೀವನ ಸುಧಾರಿಸುತ್ತದೆ. ಜಗಳಗಳು ಕಡಿಮೆಯಾಗುತ್ತವೆ ಮತ್ತು ಸಂವಹನ ಹೆಚ್ಚಾಗುತ್ತದೆ. ಪರಸ್ಪರ ಆಕರ್ಷಣೆ ನಿರಂತರವಾಗಿರುತ್ತದೆ. ಅವಿವಾಹಿತರ ಕೋಣೆಯಲ್ಲಿ ಇರಿಸುವುದರಿಂದ ಶೀಘ್ರದಲ್ಲೇ ಮದುವೆಯ ಯೋಗ ಕೂಡಿ ಬರುತ್ತದೆ. ಗಿಳಿಗಳು ಪರಸ್ಪರ ಎದುರಾಗಿದ್ದರೆ ಅದು ಶುಭವೆಂದು ಪರಿಗಣಿಸಲಾಗುತ್ತದೆ.
ಲಿವಿಂಗ್ ರೂಮ್ ಮತ್ತು ಆಫೀಸ್ ರೂಮ್‌ನಲ್ಲೂ ಗಿಳಿಗಳ ಚಿತ್ರಗಳನ್ನು ಇಡಬಹುದು. ಇದು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಕಚೇರಿ ಅಥವಾ ಅಂಗಡಿಯ ನೈಋತ್ಯ ಮೂಲೆಯಲ್ಲಿ ಗಿಳಿಯ ಫೋಟೋವನ್ನು ಇಡುವುದರಿಂದ ವ್ಯವಹಾರದಲ್ಲಿ ವೃದ್ದಿಯುಂಟಾಗುತ್ತದೆ. ಮಕ್ಕಳ ಕೋಣೆಯಲ್ಲಿ ಇದನ್ನು ಇಡುವುದರಿಂದ ಅವರು ತಮ್ಮ ಅಧ್ಯಯನದ ಮೇಲೆ ಹೆಚ್ಚಿನ ಗಮನ ಹರಿಸುವುದು ಸಾಧ್ಯವಾಗುತ್ತದೆ.
ಮನೆಯಲ್ಲಿ ಗಿಳಿಗಳ ಚಿತ್ರಗಳನ್ನು ಇರಿಸುವುದಾದರೆ ಗಿಳಿಯ ಬೆನ್ನನ್ನು ಎದುರು ಕುಳಿತುಕೊಳ್ಳುವವರ ಕಡೆಗೆ ತಿರುಗಿಸಿ ಇಡಬಾರದು. ಈಶಾನ್ಯ ದಿಕ್ಕಿನಲ್ಲಿ ಇಡಬಾರದು.
ಅಲ್ಲದೆ ಮುರಿದ ಅಥವಾ ಧೂಳಿನಿಂದ ಕೂಡಿದ ಗಿಳಿ ಚಿತ್ರ, ಮೂರ್ತಿಗಳನ್ನು ಇರಿಸಬಾರದು. ಸ್ನಾನಗೃಹ ಅಥವಾ ಅಡುಗೆ ಮನೆಗೆ ಎದುರಾಗಿಯೂ ಗಿಳಿಯನ್ನು ಇಡಬಾರದು. ಹಾರುವ ಭಂಗಿಯಲ್ಲಿರುವ ಚಿತ್ರದ ಗಿಳಿಯನ್ನು ಎಂದಿಗೂ ಮನೆಯಲ್ಲಿ ಇರಿಸಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ.