ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಪರ್ಸ್ ನಲ್ಲಿಟ್ಟುಕೊಳ್ಳುವ ಈ ವಸ್ತುಗಳು ಅದೃಷ್ಟವನ್ನು ಆಕರ್ಷಿಸುತ್ತದೆ..! ಆ ವಸ್ತುಗಳು ಯಾವುವು ನೋಡಿ

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಸ್ಥಾನಮಾನ ಇದೆ. ಮನೆ ಖರೀದಿ, ನಿರ್ಮಾಣದಿಂದ ಹಿಡಿದು ಮನೆಯಲ್ಲಿ ಇಡುವ ವಸ್ತುಗಳವರೆಗೆ ಎಲ್ಲದಕ್ಕೂ ವಾಸ್ತು ನಿಯಮಗಳಿವೆ. ಹಾಗೆಯೇ ದುಡಿದ-ಗಳಿಸಿದ ಹಣವನ್ನು ಹಿಡುವ ಪರ್ಸ್ ಗೂ ವಾಸ್ತುವಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವಾಸ್ತುಪ್ರಕಾರ ಪರ್ಸ್ ನಲ್ಲಿ ಇಡುವ ಈ ಕೆಲವು ವಸ್ತುಗಳು ಮನೆಯೊಳಗೆ ಅದೃಷ್ಟವನ್ನು ಆಕರ್ಷಿಸುತ್ತವೆ. ಹಾಗಾದ್ರೆ ಆ ವಸ್ತುಗಳು ಯಾವುವು ಎಂಬುದನ್ನು ನೋಡಿ.

ನಿಮ್ಮ ಪರ್ಸ್ ಗೂ ಇದೆ ವಾಸ್ತು ನಿಯಮ..!

ಸಾಂದರ್ಭಿಕ ಚಿತ್ರ -

Profile
Sushmitha Jain Nov 14, 2025 6:00 AM

ಬೆಂಗಳೂರು: ಯಾರಿಗೆ ತಾವು ಸಿರಿವಂತರಾಗಬೇಕು - ಹಣವಂತರಾಗಬೇಕು ಎಂಬ ಬಯಕೆ ಇರುವುದಿಲ್ಲ ಹೇಳಿ... ಪ್ರತಿಯೋರ್ವರಿಗೂ ಈ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ. ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಜನರು ಏನಾದರೂ ಮಾಡಲು ಸಿದ್ಧರಿರುತ್ತಾರೆ. ವಾಸ್ತುಶಾಸ್ತ್ರದಲ್ಲಿ(Vastu Shasthra) ಈ ಅಭಿವೃದ್ಧಿ ಪಡೆಯಲು ತುಂಬಾ ಸುಲಭವಾದ ಸಲಹೆಗಳನ್ನು ನೀಡಲಾಗಿದೆ. ನಿಮ್ಮ ಪರ್ಸ್(Purse) ಕೂಡ ಈ ವಿಷಯದಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ಹೌದು ಹಿಂದೂ ಧರ್ಮದಲ್ಲಿ(Hindu Dharma) ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ನಮ್ಮ ಸುತ್ತಲಿನ ವಿಷಯಗಳು ನಮ್ಮ ಜೀವನದ ಮೇಲೆ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ. ಅಂತಹ ಪ್ರಮುಖ ವಸ್ತುಗಳಲ್ಲಿ ಪರ್ಸ್ ಕೂಡ ಒಂದಾಗಿದ್ದು, ಪರ್ಸ್ ನಲ್ಲಿ ಇಟ್ಟುಕೊಳ್ಳುವ ಕೆಲ ವಸ್ತುಗಳಿಂದ ಧನಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ವಾಸ್ತುವಿನಲ್ಲಿ ಅದೃಷ್ಟವನ್ನು ಆಕರ್ಷಿಸುವ ವಸ್ತುಗಳನ್ನು ಪರ್ಸ್ ಅಲ್ಲಿ ಇಟ್ಟುಕೊಳ್ಳುವಂತೆಯೂ ವಾಸ್ತುವಿನಲ್ಲಿಯೂ ವಿವರಿಸಲಾಗಿದೆ. ಹಾಗಾದರೆ ಆ ವಸ್ತುಗಳು ಯಾವುವು...? ಅವುಗಳನ್ನು ಇಟ್ಟುಕೊಳ್ಳುವುದರಿಂದ ಏನೆಲ್ಲಾ ಉಪಯೋಗ ಆಗಲಿದೆ..? ಎಂಬುದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ಲಕ್ಷ್ಮೀ ದೇವಿಯ ಫೋಟೋ

ಯಾರಾದರೂ ಹಣದ ಸಮಸ್ಯೆ ಎದುರಿಸುತ್ತಿದ್ದರೆ ಅಂತವರು ತಮ್ಮ ಪರ್ಸ್‌ನಲ್ಲಿ ಲಕ್ಷ್ಮಿ ದೇವಿಯ ಫೋಟೋ ಫೋಟೋವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ.

ಈ ಸುದ್ದಿಯನ್ನು ಓದಿ: Vastu Tips: ಸಂಪತ್ತು ವೃದ್ಧಿಗೆ ಮನೆ ಬಳಿ ಈ ಗಿಡಗಳನ್ನು ನೆಡಿ

ಶ್ರೀಯಂತ್ರ

ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. ಶ್ರೀಯಂತ್ರವನ್ನು ಪರ್ಸ್ ಅಲ್ಲಿ ಇಟ್ಟುಕೊಂಡರೆ ದುಷ್ಟ ಕಣ್ಣಿನಿಂದ ರಕ್ಷಿಸಿಕೊಳ್ಳಬಹುದಾಗಿದೆ. ಜೊತೆಗೆ ಪರ್ಸ್ ಖಾಲಿ ಆಗುವುದನ್ನು ತಡೆಯುತ್ತದೆ

ಮಂತ್ರಾಕ್ಷತೆ

ನಿಮ್ಮ ಪರ್ಸ್‌ನಲ್ಲಿ ಹಣದ ಪ್ರಮಾಣ ಜಾಸ್ತಿ ಆಗಬೇಕು, ಆರ್ಥಿಕ ವ್ಯಯ ಆಗಬಾರದು ಎಂಬ ಇಚ್ಛೆ ಇದ್ದರೆ ದೇವರ ಮಂತ್ರಾಕ್ಷತೆಯನ್ನು ಇಟ್ಟುಕೊಳ್ಳಿ. ಇದರಿಂದ ನಿಮಗೆ ವಿಶೇಷ ಪ್ರಯೋಜನಗಳು ಸಿಗಲಿದ್ದು, ಲಕ್ಷ್ಮಿ ದೇವಿಯ ಆಶೀರ್ವಾದ ದೊರೆತು ಮನೆಯಲ್ಲಿ ಸಂಪತ್ತಿನ ಬೆಳವಣಿಗೆಯಾಗುತ್ತದೆ. ಇನ್ನು ಇದರೊಂದಿಗೆ ಪರ್ಸ್‌ನಲ್ಲಿ ಹರಳೆಣ್ಣೆಯ ಸಣ್ಣ ಪ್ಯಾಕೆಟ್ ಅನ್ನು ಇಟ್ಟುಕೊಳ್ಳುವುದರಿಂದ ಮತ್ತಷ್ಟು ಆರ್ಥಿಕ ಪ್ರಯೋಜನಗಳು ನಿಮ್ಮ ಪಾಲಿಗೆ ಬರಲಿದ್ದು, ವಾಸ್ತು ಶಾಸ್ತ್ರದ ಪ್ರಕಾರ, ಹರಳೆಣ್ಣೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇದರಿಂದಾಗಿ ನಿಮ್ಮ ಹಣವನ್ನು ವ್ಯರ್ಥ ಆಗುವುದನ್ನು ಇದು ತಡೆಯುತ್ತದೆ.

ತಪ್ಪಿಯೂ ಹರಿದ ನೋಟನ್ನು ಇಡಬೇಡಿ

ವಾಸ್ತು ಶಾಸ್ತ್ರವು ನಮ್ಮ ಪರ್ಸ್‌ನಲ್ಲಿ ಇಡಬಾರದಂತಹ ವಸ್ತುಗಳ ಬಗ್ಗೆಯೂ ಹೇಳುತ್ತದೆ. ಕೆಲ ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಆರ್ಥಿಕ ತೊಂದರೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಜೀವನದಲ್ಲಿ ಕಷ್ಟಗಳನ್ನೂ ತರುತ್ತದೆ. ಪರ್ಸ್‌ನಲ್ಲಿ ಇಡಲು ಅಶುಭಕರವಾದಂತಹ ವಸ್ತುಗಳು ಪೈಕಿ
ಹರಿದ ನೋಟುಗಳು ಒಂದಾಗಿದ್ದು, ನಿಮ್ಮ ಪರ್ಸ್ ಅಲ್ಲಿ ಇಡುವುದರಿಂದ ಅಥವಾ ಬೇರೆ ಯಾರಾದರೂ ಕೊಟ್ಟಾಗ ಅದನ್ನು ನೀವೇ ಇಟ್ಟುಕೊಳ್ಳುವುದರಿಂದ ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರಲಿದ್ದು, ನಿಮ್ಮ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.
ಹರಿದ ನೋಟುಗಳಿಗೆ ನಿಮ್ಮ ಯಶಸ್ಸನ್ನು ತಡೆಯುವ ಶಕ್ತಿ ಇದೆ. ಅಲ್ಲದೇ ಪರ್ಸ್ ನಲ್ಲಿ ಹರಿದು ಹೋದಂತಹ ನೋಟುಗಳನ್ನು ಇಟ್ಟುಕೊಳ್ಳುವುದರಿಂದ ಲಕ್ಷೀ ದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಆರ್ಥಿಕವಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ಕೂಡ ಬರಬಹುದು.