ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಎಪ್ರಿಲ್ 22, 2026: ಇಂದು ಚಂದ್ರ, ಗುರು ಹಾಗೂ ರಾಹುವಿನ ಸಮ್ಮಿಲನದಿಂದ ಈ ರಾಶಿಗೆ ಪ್ರಮುಖ ಬದಲಾವಣೆ

Horoscope Today April 22: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ ಆರಿದ್ರಾ ನಕ್ಷತ್ರದ ಎಪ್ರಿಲ್ 22 ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅತೀ ಮುಖ್ಯ ಬದಲಾವಣೆ ಸಾಧ್ಯತೆ

ಇಂಟರ್ ನೆಟ್ ಚಿತ್ರ -

Profile
Pushpa Kumari Apr 22, 2026 6:00 AM

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ,ವಸಂತ ಋತು, ವೈಶಾಖ ಮಾಸೆ, ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಆರಿದ್ರಾ ನಕ್ಷತ್ರದ ಅಧಿಪತಿ ರಾಹು ಆಗಿದ್ದಾನೆ. ಅದೇ ರೀತಿ ಇಂದು ಚಂದ್ರ ಹಾಗೂ ಗುರು ರಾಹುವಿನ ಜೊತೆ ಗೂಡುತ್ತಿದ್ದು ಮೂರು ಗ್ರಹದ ಸಮ್ಮಿಲನವಾಗಲಿದೆ. ಮೇಷ ರಾಶಿಗೆ ನಿಮ್ಮ ಸಾಮಾಜಿಕ ಚಟುವಟಿಕೆಯಲ್ಲಿ ಸಣ್ಣ ಮಟ್ಟಿಗೆ ತೊಂದರೆಯಾಗಬಹುದು. ನಿಮ್ಮ ಮಾತಿನಲ್ಲಿಯೂ ಹೆಚ್ಚಿನ ನಿಗಾ ಇರಿಸಬೇಕಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮನೆಯಲ್ಲಿ ಕಷ್ಟಕರವಾದ ವಾತಾವರಣ ಇರಬಹುದು. ಬೇರೆಯವರು ನಿಮ್ಮನ್ನು ಟೀಕೆ ಮಾಡುವ ಸಂದರ್ಭ ಬರಬಹುದು. ಹಾಗಾಗಿ ಯೋಚಿಸಿ ಕೆಲಸ ಮಾಡಬೇಕಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಹಠ ಸ್ವಭಾವ ಜಾಸ್ತಿಯಾಗಬಹುದು. ಬೇರೆಯವರಿಗೆ ಹಾಗೂ ಹಿರಿಯರಿಗೆ ನಿಮ್ಮ ನಡತೆಯಿಂದ ನೋವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಭಾವನಾತ್ಮಕವಾಗಿ ಕಾಡುವ ಸಾಧ್ಯತೆ ಇಂದು ಹೆಚ್ಚಾಗಿ ಇರುತ್ತದೆ.‌ ನಿಮ್ಮ ಕೆಲಸದಲ್ಲಿ ಸೋಲು ಉಂಟಾಗಬಹುದು ಎನ್ನುವ ಭಾವನೆಯೂ ನಿಮ್ಮಲ್ಲಿ ಬರಬಹುದು.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಗುಂಪು ಕೆಲಸದಲ್ಲಿ ಕೂಡ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗಬಹುದು. ಕಾರ್ಯಕ್ಷೇತ್ರದಲ್ಲಿ ಗೆಲವನ್ನು ನೀವು ಕಾಣಬಹುದು. ಹೆಚ್ಚಿನ ಮಾರ್ಗದರ್ಶನ ನಿಮಗೆ ಸಿಗಬಹುದು.

ತುಲಾ ರಾಶಿ: ತುಲಾ ರಾಶಿಯವರಿಗೆ ನಿಮ್ಮ ಸಮಸ್ಯೆಗಳು ಹಾಗೆಯೇ ಮುಂದುವರಿಯುವ ಸಾಧ್ಯತೆ ಇರುತ್ತದೆ. ಕೆಲವು ದಿನದವರೆಗೆ ತಾಳ್ಮೆಯಿಂದ ಇದ್ದರೆ ಒಳ್ಳೆಯದು

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ಗೋಚರ ಇರುತ್ತದೆ. ಭಾವುಕತೆ ಹೆಚ್ಚಾಗಿ ಕಾಡುವ ಸಾಧ್ಯತೆ ಬರಬಹುದು‌. ಯಾವುದೇ ಮಾರ್ಗದರ್ಶನ ನಿಮಗೆ ಸಿಗದೇ ಇರಬಹುದು‌

ಧನಸ್ಸು ರಾಶಿ: ಧನಸ್ಸು ರಾಶಿಗೆ ನಿಮ್ಮ ಪ್ರೀತಿ ಪಾತ್ರರ ಬಗ್ಗೆ ಯಾವುದೇ ಒಂದು ವಿಚಾರದಲ್ಲಿ ಶಂಕೆ ವ್ಯಕ್ತವಾಗುವ ಸಾಧ್ಯತೆ ಬರಬಹುದು. ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ‌. ಶತ್ರುಗಳನ್ನು ಹಿಮ್ಮೆಟ್ಟಬಹುದು. ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಮಕ್ಕಳ ವಿಚಾರದಲ್ಲಿ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿಯೂ ನೀವು ಜಾಗೃತರಾಗಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ‌‌. ಆದರೆ ಬಿಸೆನೆಸ್ ವ್ಯವಹಾರದಲ್ಲಿ ಸ್ವಲ್ಪ ಜಾಗೃತಿ ವಹಿಸಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.