ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜೂನ್ 22, 2026: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅಂದುಕೊಳ್ಳದಷ್ಟು ಲಾಭ ಸಾಧ್ಯತೆ!

Horoscope Today June 22nd: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಅಷ್ಟಮಿ ತಿಥಿ, ಉತ್ತರ ಪಾಲ್ಗುಣಿ ನಕ್ಷತ್ರದ, ಜೂನ್ 22ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಈ ರಾಶಿಯವರಿಗೆ ಇಂದು ಹಣಕಾಸಿನ ವ್ಯವಹಾರದಲ್ಲಿ ಲಾಭದ ಸೂಚನೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Jun 22, 2026 6:00 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಉತ್ತರ ಪಾಲ್ಗುಣಿ ಅನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಇಂದು ಬುಧ ಕಟಕ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಗೆ ಇಂದು ಅತೀ ಹೆಚ್ಚಿನ ನೆಮ್ಮದಿ ಸಿಗಲಿದ್ದು ಕೆಲಸ ಕಾರ್ಯದಲ್ಲಿ ಜಯ ಪ್ರಾಪ್ತಿಯಾಗುತ್ತದೆ. ಕೋರ್ಟ್ ಕಛೇರಿ ವ್ಯವಹಾರದಲ್ಲಿ ಕೂಡ ಜಯ ಸಿಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ದೊಡ್ಡದಾದ ಧನ ಆಗಮನದ ಸೂಚನೆ ಇದೆ. ಕೆಲಸ ಕಾರ್ಯದಲ್ಲಿ ಯಶಸ್ಸು

ಮಿಥುನ ರಾಶಿ: ಇಂದು ಈ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಮನೆಯಲ್ಲಿ ಸಂತೋಷಕರವಾದ ದಿನವನ್ನು ನೀವು ಕಳೆಯಬಹುದು. ಮದುವೆ ಶುಭ ಸಮಾರಂಭ ಜರುಗಬಹುದು. ಅತೀಯಾದ ಧನ ಆಗಮನ ಕೂಡ ಪ್ರಾಪ್ತಿಯಾಗಬಹುದು.

Vastu Tips: ಮನೆಗೆ ಸುಖ, ಶಾಂತಿ, ಸಮೃದ್ಧಿ ಬೇಕೇ? ಈ ವಾಸ್ತು ನಿಯಮ ಪಾಲಿಸಿ

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮಾತಿನಲ್ಲಿ ತೊಂದರೆ ಹಾಗೂ ಮಿತ್ರತ್ವದಲ್ಲಿ ಒಡಕು ಕಾಣಬಹುದು. ಹಾಗಾಗಿ ಜಾಗರೂಕತೆಯಿಂದ ವರ್ತಿಸಬೇಕು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟಕರವಾದ ಗೋಚರ ಇರಲಿದೆ. ಯಾವುದೇ ಒಳ್ಳೆಯ ಫಲಗಳು ನಿಮಗೆ ಇರುವುದಿಲ್ಲ. ಅನೇಕ ರೀತಿಯ ಅಡಚಣೆ ಕೆಲಸ ಕಾರ್ಯದಲ್ಲಿ ಉಂಟಾಗಬಹುದು‌.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಭಾಗ್ಯೋದಯವಾದ ದಿನ ವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಧನ ಆಗಮನದ ಸೂಚನೆ ಇದ್ದು ಮಿತ್ರರಿಂದ ನೆಮ್ಮದಿ ಸಿಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಧನ ಆಗಮನದ ಸೂಚನೆಗಳು ಇಂದು ಎಲ್ಲರಿಂದಲೂ ಒಳಿತನ್ನು ಕಾಣುತ್ತೀರಿ. ಆದರೆ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಗೆ ಕಷ್ಟಕರವಾದ ದಿನವಾಗಿದೆ. ನಿಮ್ಮ ಮಾತುಕತೆಯಲ್ಲಿ ಚ್ಯುತಿ ಬರಬಹುದು‌. ಹಾಗಾಗಿ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಇಂದು ಆಧ್ಯಾತ್ಮಿಕವಾಗಿ ಯಶಸ್ಸು ಕಾಣುತ್ತೀರಿ. ಅತೀ ಹೆಚ್ಚಿನ ನೆಮ್ಮದಿ ಮನಸ್ಸಿಗೆ ಇರುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮುಖ್ಯವಾದ ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಹಾಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಧನ ಆಗಮನದ ಸೂಚನೆಗಳು ಕೂಡ ಇದ್ದು ಯಶಸ್ಸು ಕಾಣುತ್ತೀರಿ‌

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಿತ್ರರಿಂದ ಅತೀ ಹೆಚ್ಚಿನ ನೆಮ್ಮದಿ ಸಿಗಲಿದ್ದು ಯಶಸ್ಸು ಕಾಣುತ್ತೀರಿ‌. ಆದರೆ ಮಾತಿನಲ್ಲಿ ನಿಗಾವಹಿಸಿ.