ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಎಪ್ರಿಲ್ 14, 2026: ಈ ರಾಶಿಗೆ ಇಂದು ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಹೆಚ್ಚು!

Horoscope Today April 14: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ, ದ್ವಾದಶಿ ತಿಥಿ, ಶತಭಿಷಾ ನಕ್ಷತ್ರದ ಎಪ್ರಿಲ್ 14ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ರವಿ ಮೇಷ ರಾಶಿಗೆ ಪ್ರವೇಶ: ಯಾರಿಗೆ ಒಳಿತು?

ಇಂಟರ್ ನೆಟ್ ಚಿತ್ರ -

Profile
Pushpa Kumari Apr 14, 2026 6:00 AM

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ,ವಸಂತ ಋತು ಚೈತ್ರ ಮಾಸೆ, ಶತಭಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ರವಿ ಮೇಷ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ‌. ಮೇಷ ರಾಶಿಗೆ ಇಂದು ನಿಮ್ಮ ಕೆಲಸ ಕಾರ್ಯದಲ್ಲಿ ಇತರರು ನಿಮ್ಮ ಮೇಲೆಯೇ ದೃಷ್ಟಿ ಇಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡುವಾಗ ಜಾಗರೂಕತೆಯಿಂದ ಇರಬೇಕು.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮುಖ್ಯವಾದ ಮಿತ್ರತ್ವದಲ್ಲಿ ಇಂದು ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಯಾರು ಕೂಡ ಇಂದು ನಿಮ್ಮ ಪರವಾಗಿ ಇರುವುದಿಲ್ಲ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಉತ್ತಮವಾದ ಫಲ ಇರುತ್ತದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗುತ್ತದೆ.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:



ಕಟಕ ರಾಶಿ: ಕಟಕ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಕೆಲಸಸಲ್ಲಿ ಪ್ರಮೋಷನ್ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ‌. ಉತ್ತಮವಾದ ಪ್ರತಿಷ್ಠೆ ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಅದೃಷ್ಟ ಪರೀಕ್ಷೆ ಇಂದು ನಿಮಗೆ ನಡೆಯುತ್ತಿರುತ್ತದೆ. ಆದರೆ ಮನಸ್ಸಿಗೆ ಅಷ್ಟಾಗಿ ನೆಮ್ಮದಿ ಇರುವುದಿಲ್ಲ.

Vastu Tips: ಮನೆಯಲ್ಲಿ ಬಿದಿರು ಗಿಡ ಇಟ್ಟರೆ ಅದೃಷ್ಟ ಹೆಚ್ಚಳ! ಈ ವಾಸ್ತು ನಿಯಮ ಪಾಲಿಸಿದರೆ ಮಾತ್ರ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಆತಂಕ ಪಡುವ ದಿನ ನಿಮ್ಮದು ಆಗುತ್ತದೆ. ಮುಖ್ಯವಾದ ವಿಚಾರದಲ್ಲಿ ಯಾರ ಸಹಕಾರ ಕೂಡ ನಿಮಗೆ ಸಿಗದೇ ಇರಬಹುದು. ಮನಸ್ಸಿಗೆ ಅತೀಯಾದ ಬೇಸರ ಆಗುವ ಸಾಧ್ಯತೆ ಇರುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ರವಿ ಸಪ್ತಮ ಸ್ಥಾನದಲ್ಲಿದ್ದಾನೆ‌. ಇಂದು ಅಷ್ಟೊಂದು ಉತ್ತಮವಾದ ಫಲ ಇಲ್ಲ. ಮುಖ್ಯವಾದ ಮಿತ್ರತ್ವದಲ್ಲಿ ಒಡಕು ಕಾಣುವ ಸಾಧ್ಯತೆಗಳು ಇರುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಿಲಿದ್ದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಧನ ಆಗಮನ ವಾಗುವ ಸಾಧ್ಯತೆ ಕೂಡ ಇರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಪ್ರೇಮ ಪ್ರೀತಿ ವಿಚಾರದಲ್ಲಿ ವೈಮನಸ್ಸು ಕಾಡುವ ಸಾಧ್ಯತೆ ಇರುತ್ತದೆ. ಇಂದು ಯಾವುದೇ ರೀತಿ ಅಹಂ ಭಾವ ಇಟ್ಟುಕೊಳ್ಳಬೇಡಿ.

ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ಗೋಚರ ಇರುತ್ತದೆ. ಯಾರ ಸಹಕಾರ ಕೂಡ ನಿಮಗೆ ಸಿಗದೇ ಇರಬಹುದು‌. ಸಂಸಾರದಲ್ಲಿ ತಾಪತ್ರಯಗಳು ಜಾಸ್ತಿಯಾಗಬಹುದು.

ಕುಂಭರಾಶಿ: ಈ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಆದರೂ ಅತೀ ಹೆಚ್ಚಿನ ಆತ್ಮವಿಶ್ವಾಸ ನಿಮಗೆ ಮೂಡಿ ಬರಬಹುದು .ಸ್ವಂತ ಉದ್ಯಮ ಮಾಡಿದರೆ ಲಾಭ ದಾಯಕ

ಮೀನ ರಾಶಿ: ಮೀನ ರಾಶಿಗೆ ಕಷ್ಟಕರವಾದ ದಿನವಾಗಿದೆ. ಸಂಸಾರದಲ್ಲಿ ತೊಂದರೆ ಉಂಟಾಗಬಹುದು. ಅದೇ ರೀತಿ ಹಣ ವ್ಯಯ ವಾಗುವ ಸಾಧ್ಯತೆ ಕೂಡ ಇದೆ.