ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ ಏಪ್ರಿಲ್ 2, 2026: ಈ ರಾಶಿಯವರ ಪಾಲಿಗೆ ಶುಭ ಗುರುವಾರ; ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯ

Horoscope Today April 2: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ಪೌರ್ಣಮಿ ತಿಥಿ, ಹಸ್ತ ನಕ್ಷತ್ರದ ಎಪ್ರಿಲ್ 2ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಈ ರಾಶಿಗೆ ಇಂದು ಹಣಕಾಸಿನ ವಿಚಾರದಲ್ಲಿ ಲಾಭ

ಇಂಟರ್‌ನೆಟ್ ಚಿತ್ರ -

Profile
Pushpa Kumari Apr 2, 2026 6:06 AM

ಬೆಂಗಳೂರು, ಏ. 2: ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಇಂದು ಕುಜ ವಕ್ರ ತ್ಯಾಗ ಮಾಡುತ್ತಿದ್ದಾನೆ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಮಿತ್ರತ್ವದಲ್ಲಿ ಒಡಕು ಉಂಟಾಗುವ ಸಾಧ್ಯತೆಗಳು ಹೆಚ್ಚು. ಕೆಲವೊಂದು ಅನವಶ್ಯಕ ಸಮಸ್ಯೆಗಳು ನಿಮಗೆ ಎದುರಾಗಬಹುದು‌.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಅತ್ಯುತ್ತಮ ಫಲ ಗೋಚರವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಧನಾಗಮನವಾಗಲಿದೆ. ನೆಮ್ಮದಿ ಕಾಣುತ್ತೀರಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಉತ್ತಮ ದಿನವಾಗಲಿದೆ. ಉತ್ತಮ ಉದ್ಯೋಗ, ಪ್ರಮೋಷನ್, ಗೌರವ ಕೂಡ ಪ್ರಾಪ್ತಿಯಾಗುತ್ತದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಭಾಗ್ಯ ಸ್ಥಾನಕ್ಕೆ ಕುಜ ಬರುತ್ತಿದ್ದಾನೆ. ಹೀಗಾಗಿ ನಿಮ್ಮ ಅದೃಷ್ಟ ಪರೀಕ್ಷೆ ನಡೆಯುತ್ತದೆ. ಬೇರೆಯವರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಕೂಡ ಇದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಸಂಬಂಧದಲ್ಲಿ ಒಡಕು ಕಾಣುವ ಸಾಧ್ಯತೆ ಇರುತ್ತದೆ. ಅದೇ ರೀತಿ ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ಕೂಡ ಸಿಗಲಾರದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸಪ್ತಮದಲ್ಲಿ ಕುಜ ಬರುತ್ತಿದ್ದಾನೆ. ಹೀಗಾಗಿ ಮುಖ್ಯವಾದ ವ್ಯವಹಾರದಲ್ಲಿ ತೊಂದರೆ ಆಗಬಹುದು. ಮುಖ್ಯ ಸಂಬಂಧದಲ್ಲಿ ಕೂಡ ಕಲಹ ಆಗಬಹುದು‌.

ನಿದ್ರಾಹೀನತೆ ಹೆಚ್ಚಳಕ್ಕೆ ಮಲಗುವ ಕೋಣೆಯೇ ಕಾರಣವೇ?

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮದಿನವಾಗಲಿದೆ‌. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.‌ ಆದರೆ ಆರೋಗ್ಯ ಸಮಸ್ಯೆ ಕಾಡಲಿದ್ದು ಶತ್ರುಗಳ ಸಮಸ್ಯೆ ಕೂಡ ಜಾಸ್ತಿಯಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರವಾಗಿ ತೊಂದರೆ ಜಾಸ್ತಿಯಾಗಬಹುದು. ವ್ಯವಹಾರದಲ್ಲೂ ನಷ್ಟ ಆಗುವ ಸಾಧ್ಯತೆ ಇದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಆಸ್ತಿ ಪಾಸ್ತಿ ವಿಚಾರ, ಮನೆಯ ವಿಚಾರಗಳ ಬಗ್ಗೆ ತೊಂದರೆ ಜಾಸ್ತಿ ಆಗಬಹುದು‌. ರಿಯಲ್ ಎಸ್ಟೇಟ್ ಬಿಸೆನೆಸ್‌ನಲ್ಲೂ ತೊಂದರೆ ಆಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ‌‌. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಮಿತ್ರರಿಂದ ಒಳಿತು ಆಗುವ ಸಾಧ್ಯತೆ ಇದೆ.

ಕುಂಭ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನೆಯಲ್ಲಿ, ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ಆದರೆ ಹಣಕಾಸಿನ ವಿಚಾರವಾಗಿ ಜಾಗೃತರಾಗಿ ಇರಬೇಕು.

ಮೀನ ರಾಶಿ: ಮೀನ ರಾಶಿಗೆ ಕುಜ ಪ್ರವೇಶ ಮಾಡುವುದರಿಂದ ಕೋಪ, ಮುಂಗೋಪ ಜಾಸ್ತಿಯಾಗುತ್ತದೆ. ಇತರರಿಂದ ಟೀಕೆಗಳು ಬಂದರೂ ವಿನಯತೆಯಿಂದ ಇರಬೇಕಾಗುತ್ತದೆ.