ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೋಲಿನ ಬೆನ್ನಲ್ಲೇ ನಾಯಕ ಪಂತ್, ಕೋಚ್‌ ಲ್ಯಾಂಗರ್‌ ಜತೆ ಮಾಲಿಕ ಗೊಯೆಂಕಾ ಬಿಸಿ ಬಿಸಿ ಚರ್ಚೆ; ವಿಡಿಯೊ ವೈರಲ್‌

LSG vs DC: ಈ ಹಿಂದೆ ನಾಯಕನಾಗಿದ್ಧ ಕೆ.ಎಲ್‌ ರಾಹುಲ್‌ ಮತ್ತು ಕಳೆದ ಆವೃತ್ತಿಯಲ್ಲಿಯೂ ಪಂತ್‌ ಜತೆ ಗೊಯೆಂಕಾ ವಾಗ್ವಾದ ನಡೆಸಿ ಭಾರೀ ಟೀಕೆಗೆ ಗುರಿಯಾಗಿದ್ದರು. ನೆಟ್ಟಿಗರು ಸಂಜೀವ್ ಗೊಯೆಂಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮ ಈ ವರ್ತನೆಯಿಂದ ಆಟಗಾರರ ಮೇಲೆ ಒತ್ತಡದ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಸೋಲಿಗೆ ಪಂತ್‌ರನ್ನು ತರಾಟೆಗೆ ತೆಗೆದುಕೊಂಡ ಸಂಜೀವ್ ಗೊಯೆಂಕಾ

Sanjiv Goenka and LSG captain and coach in intense chat -

Abhilash BC
Abhilash BC Apr 2, 2026 7:00 AM

ಲಕ್ನೋ, ಎ.2: ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾಲೀಕ ಸಂಜೀವ್ ಗೊಯೆಂಕಾ(Sanjiv Goenka) ಈ ಬಾರಿಯ ಐಪಿಎಲ್‌(IPL 2026) ಟೂರ್ನಿಯಲ್ಲಿಯೂ ಸುದ್ಧಿಯಾಗಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಸೋಲಿನ ಬಳಿಕ ಸಂಜೀವ್ ಗೊಯೆಂಕಾ ಅವರು ನಾಯಕ ರಿಷಭ್‌ ಪಂತ್‌(Rishabh Pant) ಮತ್ತು ಕೋಚ್‌ ಜಸ್ಟಿನ್‌ ಲ್ಯಾಂಗರ್‌(Justin Langer) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈದಾನದಲ್ಲಿ ಇವರಿಬ್ಬರ ಜತೆ ಬಿಸಿ ಬಿಸಿ ಚರ್ಚೆ ನಡೆಸಿದ ವಿಡಿಯೊ ವೈರಲ್‌ ಆಗಿದೆ.

ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಪಂದ್ಯದ ನಂತರ, ಗೋಯೆಂಕಾ ಮೈದಾನದಲ್ಲಿ ತಮ್ಮ ನಾಯಕ ಮತ್ತು ತರಬೇತುದಾರರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಪಂತ್ ಕೂಡ ಉತ್ತರಿಸುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು. ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಹಿಂದೆ ನಾಯಕನಾಗಿದ್ಧ ಕೆ.ಎಲ್‌ ರಾಹುಲ್‌ ಮತ್ತು ಕಳೆದ ಆವೃತ್ತಿಯಲ್ಲಿಯೂ ಪಂತ್‌ ಜತೆ ಗೊಯೆಂಕಾ ವಾಗ್ವಾದ ನಡೆಸಿ ಭಾರೀ ಟೀಕೆಗೆ ಗುರಿಯಾಗಿದ್ದರು. ನೆಟ್ಟಿಗರು ಸಂಜೀವ್ ಗೊಯೆಂಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮ ಈ ವರ್ತನೆಯಿಂದ ಆಟಗಾರರ ಮೇಲೆ ಒತ್ತಡದ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.



ಬುಧವಾರ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಲಕ್ನೋ ಸೂಪರ್‌ ಜೈಂಟ್ಸ್‌ 142 ರನ್ ಬಾರಿಸಿ ಸರ್ವಪತನ ಕಂಡಿತು. ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಆರಂಭಿಕ ಆಘಾತ ಅನುಭವಿಸಿದರೂ ಸಮೀರ್‌ ರಿಝ್ವಿ ಅವರ ಅರ್ಧಶತಕದ ಬಲದಿಂದ 17.1 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 145 ರನ್‌ ಗಳಿಸಿ 6 ವಿಕೆಟ್‌ಗಳ ಗೆಲುವು ಪಡೆಯಿತು.

ಲಕ್ನೋ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಡೆಲ್ಲಿ

ಒಂದು ಹಂತದಲ್ಲಿ ಡೆಲ್ಲಿ ಸೋಲುವುದು ಬುಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸಮೀರ್‌ ರಿಝ್ವಿ ಒತ್ತಡವನ್ನು ಮೆಟ್ಟಿ ನಿಂತರು. ಅವರು ಕೊನೆಯವರೆಗೂ ಬ್ಯಾಟ್‌ ಮಾಡಿ 47 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 70 ರನ್‌ ಸಿಡಿಸಿದರು ಹಾಗೂ ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್‌ ನೀಡಿದ್ದ ಟ್ರಿಸ್ಟನ್‌ ಅವರ ಜೊತೆ 119 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಟ್ರಸ್ಟಿನ್‌ ಸ್ಟಬ್ಸ್‌ ಕೂಡ ಸಮಯಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದರು. ಅವರು ಆಡಿದ 32 ಎಸೆತಗಳಲ್ಲಿ ಅಜೇಯ 39 ರನ್‌ ಗಳಿಸಿದರು.