ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಶುಭ ಶುಕ್ರವಾರ ಈ ದಿಕ್ಕಿನಲ್ಲಿ ದೀಪ ಹಚ್ಚಿದರೆ ಲಕ್ಷ್ಮೀ ದೇವಿಯ ಕೃಪೆ, ಧನಾಗಮನ

ಶುಕ್ರವಾರ ಕೇವಲ ಲಕ್ಷ್ಮೀ ಪೂಜೆ ಹಾಗೂ ಉಪವಾಸ ವ್ರತ ಮಾಡುವುದರ ಜೊತೆಗೆ ಈ ದಿನ ಕೆಲವು ವಿಶೇಷ ಆಚರಣೆಗಳು ಮತ್ತು ಸರಳ ನಿಯಮಗಳನ್ನು ಪಾಲಿಸುವುದರಿಂದ ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ದೂರವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂತಹ ಕ್ರಮಗಳನ್ನು ಅನುಸರಿಸುವುದರಿಂದ ಆರ್ಥಿಕ ಸ್ಥಿರತೆ ಬಲಗೊಳ್ಳುವುದರ ಜೊತೆಗೆ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ.

ಶುಕ್ರವಾರ ಹೀಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿಯ ಕೃಪೆ, ಧನಾಗಮನ

ಲಕ್ಷ್ಮೀ ದೇವಿ -

Profile
Sushmitha Jain Dec 19, 2025 8:08 AM

ಬೆಂಗಳೂರು: ಸನಾತನ ಧರ್ಮದ(Hindu Religion) ಪ್ರಕಾರ ಶುಕ್ರವಾರವನ್ನು(Friday) ಐಶ್ವರ್ಯ ಮತ್ತು ಸಮೃದ್ಧಿಯ ಅಧಿದೇವತೆಯಾದ ತಾಯಿ ಲಕ್ಷ್ಮೀ ದೇವಿ(Lakshmi Devi) ಪೂಜೆಗೆ ಅತ್ಯಂತ ಶುಭಕರವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿಯನ್ನು ಶಾಸ್ತ್ರಾನುಸಾರವಾಗಿ ಆರಾಧಿಸುವುದು ಹಾಗೂ ಭಕ್ತಿಭಾವದಿಂದ ಪೂಜೆ ಸಲ್ಲಿಸುವುದು ವಿಶೇಷ ಫಲ ನೀಡುತ್ತದೆ ಎನ್ನುವ ನಂಬಿಕೆ ಇದೆ. ಕೆಲವರು ಶುಕ್ರವಾರ ಉಪವಾಸ ವ್ರತವನ್ನು ಪಾಲಿಸಿ, ದೇವಿಯ ಅನುಗ್ರಹವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಈ ವ್ರತವನ್ನು ನಿಷ್ಠೆಯಿಂದ ಆಚರಿಸಿದರೆ ಮನಸ್ಸಿನ ಇಚ್ಛೆಗಳು ನೆರವೇರಲು ಸಹಕಾರಿಯಾಗುತ್ತವೆ, ಜೊತೆಗೆ ಅದೃಷ್ಟ ಸ್ವತಃ ಮನೆ ಬಾಗಿಲಿಗೆ ಬರುತ್ತದೆ ಎಂಬ ನಂಬಿಕೆಯೂ ಇದೆ. ಇದರಿಂದ ಜೀವನದಲ್ಲಿ ಪ್ರಗತಿ ಹೊಂದಲು ಸಹಕಾರಿಯಾಗಲಿದ್ದು, ಉದ್ಯೋಗ - ವ್ಯವಹಾರಗಳಲ್ಲಿ ಆದಾಯ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಶುಕ್ರವಾರ ಕೇವಲ ಲಕ್ಷ್ಮೀ ಪೂಜೆ ಹಾಗೂ ಉಪವಾಸ ವ್ರತ ಮಾಡುವುದರ ಜೊತೆಗೆ ಈ ದಿನ ಕೆಲವು ವಿಶೇಷ ಆಚರಣೆಗಳು ಮತ್ತು ಸರಳ ನಿಯಮಗಳನ್ನು ಪಾಲಿಸುವುದರಿಂದ ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ದೂರವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ (Astro Tips) ಹೇಳುತ್ತದೆ. ಇಂತಹ ಕ್ರಮಗಳನ್ನು ಅನುಸರಿಸುವುದರಿಂದ ಆರ್ಥಿಕ ಸ್ಥಿರತೆ ಬಲಗೊಳ್ಳುವುದರ ಜೊತೆಗೆ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ. ಆದ್ದರಿಂದ ಶುಕ್ರವಾರದಂದು ಸೂಚಿಸಲಾದ ಈ ಕಾರ್ಯಗಳನ್ನು ಶ್ರದ್ಧೆಯಿಂದ ಪಾಲಿಸುವುದು ಲಾಭಕರವೆಂದು ಪರಿಗಣಿಸಲಾಗಿದೆ

ಹಾಗಾದ್ರೆ ಶುಕ್ರವಾರ ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ಏನು ಮಾಡಬೇಕು..? ಯಾವ ಕೆಲಸ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

Vastu Tips: ಹೊಸವರ್ಷ ಪ್ರಾರಂಭಕ್ಕೂ ಮೊದಲು ಮನೆಗೆ ಈ ವಸ್ತುಗಳನ್ನು ತಂದರೆ ಅದೃಷ್ಟ ನಿಮ್ಮದಾಗುತ್ತದೆ

ಶುಕ್ರವಾರ ಸಂಜೆ ಮನೆಯ ಮುಖ್ಯ ದ್ವಾರದ ಬಳಿ ತುಪ್ಪದ ದೀಪಗಳನ್ನು ಹಚ್ಚುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಈ ದೀಪಗಳ ಬೆಳಕು ಲಕ್ಷ್ಮೀ ದೇವಿಯನ್ನು ಆಕರ್ಷಿಸಿ, ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಕ್ರಮೇಣ ಸುಧಾರಿಸುತ್ತದೆ ಎನ್ನಲಾಗುತ್ತದೆ.

ಸೂರ್ಯಾಸ್ತದ ನಂತರ ಈಶಾನ್ಯ ದಿಕ್ಕಿನಲ್ಲಿ ಶುದ್ಧ ತುಪ್ಪದಿಂದ ಏಳು ದೀಪಗಳನ್ನು ಬೆಳಗಿಸುವುದು ಮತ್ತೊಂದು ಪರಿಣಾಮಕಾರಿ ಪರಿಹಾರ ಕ್ರಮವಾಗಿದೆ. ದೀಪಕ್ಕೆ ಸ್ವಲ್ಪ ಕುಂಕುಮವನ್ನು ಸೇರಿಸಿ ಬೆಳಗಿಸಿದರೆ, ಮನೆಯಲ್ಲಿ ಹಣದ ಹರಿವು ಹೆಚ್ಚಾಗಿ ಅಶುಭ ಯೋಗಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಧರ್ಮಗ್ರಂಥಗಳ ಪ್ರಕಾರ ಪ್ರದೋಷ ಕಾಲವು ಅತ್ಯಂತ ಮಂಗಳಕರ. ಈ ಸಮಯದಲ್ಲಿ ಮನೆಯ ಮುಖ್ಯ ಬಾಗಿಲನ್ನು ತೆರೆಯಿಟ್ಟರೆ ಧನಾತ್ಮಕ ಶಕ್ತಿ ಮನೆಗೆ ಪ್ರವೇಶಿಸಿ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಅದರಿಂದಾಗಿ ಪ್ರದೋಷಕಾಲದ ಪೂಜೆಗೆ ವಿಶೇಷ ಮಹತ್ವ ನೀಡಲಾಗುತ್ತದೆ.

ಕೆಲವು ಮಹಿಳೆಯರು ಶುಕ್ರವಾರ ವೈಭವ ಲಕ್ಷ್ಮೀ ವ್ರತವನ್ನು ಆಚರಿಸುತ್ತಾರೆ. ಸಂಜೆ ಶಾಸ್ತ್ರೋಕ್ತ ವಿಧಾನದಲ್ಲಿ ಪೂಜೆ ಸಲ್ಲಿಸಿದ ಬಳಿಕವೇ ಆಹಾರ ಸ್ವೀಕರಿಸುವ ಈ ವ್ರತವು ಕುಟುಂಬದ ಸುಖಸಮೃದ್ಧಿಗೆ ಸಹಾಯಕವೆಂದು ದೇವಿ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆರತಿಯ ನಂತರ ಕರ್ಪೂರದಿಂದ ಆರತಿ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗಿ ಸುಖ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಇದೆ.