ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಸೆಪ್ಟೆಂಬರ್ 5, 2026: ಬಿಸಿನೆಸ್ ವ್ಯವಹಾರ ಆರಂಭಿಸಲು ಇಂದು ಸೂಕ್ತ ಕಾಲ!

Horoscope Today September 5th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆಪಕ್ಷದ, ನವಮಿ ತಿಥಿ, ಮೃಗಶಿರ ನಕ್ಷತ್ರದ, ಸೆಪ್ಟೆಂಬರ್‌ 5ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಈ ರಾಶಿಗೆ ಇಂದು ಹಣಕಾಸು ವ್ಯವಹಾರದಲ್ಲಿ ಲಾಭ

ಇಂಟರ್ ನೆಟ್ ಚಿತ್ರ -

Profile
Pushpa Kumari Sep 5, 2026 6:02 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಬಂಧು- ಮಿತ್ರರಿಂದ ಬಹಳ ಖುಷಿಯಾದ ದಿನವನ್ನು ನೀವು ಕಳೆಯುತ್ತೀರಿ. ಮನೆಯಲ್ಲಿ ಶುಭ- ಸಮಾರಂಭಗಳು ಹಾಗೂ ಪ್ರಗತಿ ಪೂರ್ವಕ ಕೆಲಸಗಳು ನಡೆಯುತ್ತವೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ನೆಮ್ಮದಿ ಸಿಗಲಿದ್ದು ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಗೆ ನಿಮ್ಮ ರಾಶಿಯಲ್ಲೇ ಚಂದ್ರ ಬಂದಿದ್ದಾನೆ. ಹೀಗಾಗಿ ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಶತ್ರುಗಳನ್ನು ಹಿಮ್ಮೆಟ್ಟಿ ನೀವೇ ಜಯವನ್ನು ಕಾಣುತ್ತೀರಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಮಾಡಲು ಹೋಗಬೇಡಿ. ಯಾವುದೇ ಬಿಸೆನೆಸ್ ವ್ಯವಹಾರಗಳನ್ನು ಇಂದು ಮಾಡಲು ಹೋಗಬೇಡಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಲಾಭದ ಸೂಚನೆಗಳು ಇವೆ. ಬಿಸೆನೆಸ್ ವ್ಯವಹಾರದಲ್ಲಿ ಅತೀ ಹೆಚ್ಚಿನ ಲಾಭವನ್ನು ಇಂದು ಕಾಣುತ್ತೀರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಇಂದು ಹೆಚ್ಚಿನ ಪ್ರಗತಿಯನ್ನು ನೀವು ಕಾಣಬಹುದು. ಕೆಲಸದಲ್ಲಿ ನಿಮ್ಮ ಪ್ರತಿಷ್ಠೆ ಇಂದು ಜಾಸ್ತಿಯಾಗಬಹುದು‌ ಹಾಗೂ ಬಾಸ್ ಗಳಿಂದ ಪ್ರಶಂಸೆ ಸಿಗಬಹುದು.

ತುಲಾ ರಾಶಿ: ತುಲಾ ರಾಶಿ ಅವರಿಗೆ ನವಮದಲ್ಲಿ ಕುಜ ಮತ್ತು ಚಂದ್ರ ಒಟ್ಟಿಗೆ ಬಂದಿದ್ದಾನೆ‌. ಹೀಗಾಗಿ ಭಾಗ್ಯೋದಯವಾದ ದಿನ ನಿಮ್ಮದಾಗುತ್ತದೆ. ನೀವು ಅಂದುಕೊಂಡ ದೊಡ್ಡದಾದ ಕೆಲಸ ಕಾರ್ಯವೊಂದು ಇಂದು ಪೂರೈಸಬಹುದು.

Vastu Tips: ಸಾಕುಪ್ರಾಣಿಗಳಿಗೂ ವಾಸ್ತು ಇದೆ! ಯಾವ ಪ್ರಾಣಿಗೆ ಯಾವ ದಿಕ್ಕು ಶುಭ ಗೊತ್ತಾ?

ವೃಶ್ಚಿಕ ರಾಶಿ: ಈ ರಾಶಿಗೆ ಅಷ್ಟಮದಲ್ಲಿ ಚಂದ್ರ ಇದ್ದಾನೆ‌. ಹೀಗಾಗಿ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರವನ್ನು ಇಂದು ಕೈಗೊಳ್ಳಲು ಹೋಗಬೇಡಿ. ಅತೀಯಾದ ತೊಂದರೆಯಲ್ಲಿ ಇಂದು ಸಿಲುಕುವ ಸಾಧ್ಯತೆ ಇರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಸಪ್ತಮದಲ್ಲಿ ಚಂದ್ರ ಇದ್ದಾನೆ. ಹೀಗಾಗಿ ಕೆಲಸ ಕಾರ್ಯದಲ್ಲಿ ಯಶಸ್ಸು ತರುವ ದಿನವಾಗಿದೆ. ಪಾರ್ಟ್ನರಶಿಪ್‌ ವ್ಯವಹಾರದಲ್ಲೂ ಲಾಭ ನಿಮ್ಮದಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಶತ್ರು ನಾಶ ಹಾಗೂ ಧ್ವಂಸವಾಗಲಿದ್ದು ನೀವೇ ಜಯವನ್ನು ಕಾಣುತ್ತೀರಿ. ಬುದ್ಧಿವಂತಿಕೆ ಉಪಯೋಗಿಸಿ ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಕುಂಭ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಆದರೆ ಹೆತ್ತವರು ಇಂದು ಮಕ್ಕಳ ವಿಚಾರವಾಗಿ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ‌. ಇಂದು ಸಂಸಾರ ಹಾಗೂ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ.