2026ರಲ್ಲಿ ಮೀನ ರಾಶಿಯವರಿಗೆ ಅದೃಷ್ಟವೋ ಅದೃಷ್ಟ!
Varsha Bhavisya: ಗ್ರಹ ಸಂಚಾರದಿಂದ ಮೀನ ರಾಶಿಯವರಿಗೆ 2026 ಮಹತ್ವದ ವರ್ಷ ಎನಿಸಿಕೊಳ್ಳಲಿದೆ. ಆರ್ಥಿಕ ಶಿಸ್ತು ಮತ್ತು ಹೊಂದಾಣಿಕೆಯಿಂದ ಕಾರ್ಯಸಿದ್ಧಿ ಹಾಗೂ ಒಳಿತು ಲಭಿಸುತ್ತದೆ ಎಂದು ಭಾರತೀಯ ಜೋತಿಷ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ಹೇಳಿದ್ದಾರೆ.
ಮೀನ ರಾಶಿ ಭವಿಷ್ಯ -
ಬೆಂಗಳೂರು, ಜ. 24: 2026ರಲ್ಲಿ ಶನಿ, ಗುರು, ರಾಹು-ಕೇತು ಸೇರಿದಂತೆ ಅನೇಕ ಪ್ರಮುಖ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಲಿವೆ. ಗ್ರಹಗಳ ಈ ಸಂಚಾರವು ಪ್ರತಿ ರಾಶಿಚಕ್ರದ ಜನರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ವಿಶೇಷವಾಗಿ ದ್ವಾದಶ ರಾಶಿಗಳಲ್ಲಿ 12ನೇ ಸ್ಥಾನದಲ್ಲಿರುವ ಮೀನ ರಾಶಿಯ ಜನರು 2026ರಲ್ಲಿ ಒಳಿತಾಗಬೇಕೆಂದರೆ ಹಾಗೂ ಎಲ್ಲ ಕಾರ್ಯಗಳಲ್ಲಿ ಸಿದ್ಧಿ ಸಿಗಬೇಕೆಂದರೆ ಏನೆಲ್ಲಾ ಅನುಸರಿಸಬೇಕು ಎಂಬವುದನ್ನು ಇಲ್ಲಿ ತಿಳಿಯೋಣ.
ಭಾರತೀಯ ಜೋತಿಷ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ಈ ಬಗ್ಗೆ 'ವಿಶ್ವವಾಣಿ'ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಮೀನ ರಾಶಿಯವರಿಂದ 2026ನೇ ವರ್ಷವು ಆರ್ಥಿಕವಾಗಿ ಶಿಸ್ತು, ಹೊಂದಾಣಿಕೆಯನ್ನು ಬಯಸುತ್ತದೆ. ಆದಾಯದ ಹೊಸ ಮೂಲಗಳು ಮತ್ತು ಹೂಡಿಕೆ ಅವಕಾಶಗಳಿದ್ದರೂ ಖರ್ಚುಗಳ ಬಗ್ಗೆ ಗಮನಹರಿಸಬೇಕು. ಪ್ರೀತಿ ಮತ್ತು ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ವೈವಾಹಿಕ ಜೀವನಕ್ಕೆ ಒಳ್ಳೆಯ ಸಮಯವಾಗಿದ್ದರೂ, ಸಂಗಾತಿಯೊಂದಿಗೆ ಸಣ್ಣ ಭಿನ್ನಾಭಿಪ್ರಾಯಗಳನ್ನು ತಕ್ಷಣ ಬಗೆಹರಿಸಿಕೊಳ್ಳುವುದು ಮುಖ್ಯ.
ಗುರು ಬಲ
ಈ ಮೀನ ರಾಶಿಯವರಿಗೆ ಜೂನ್‌ನಿಂದ ಅಕ್ಟೋಬರ್‌ವರೆಗೆ ಗುರುಬಲ ಸಿಗಲಿದೆ. ಈ ರಾಶಿಯವರ ಯಜಮಾನ ಗುರು ಆಗಿದ್ದು, ಗುರುಬಲವು ದೊರೆಯುವುದರಿಂದ ರಾಜಕೀಯ, ವ್ಯವಹಾರ, ರಿಯಲ್ ಎಸ್ಟೇಟ್ ಸೇರಿದಂತೆ ಯಾವುದೇ ವ್ಯಾಪಾರ-ವಹಿವಾಟಿನಲ್ಲಿ ಅದ್ಭುತವಾದ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ಮಕ್ಕಳ ಕ್ಷೇಮಕ್ಕೆ ಬೇಕಾದ ವಾತಾವರಣವನ್ನು ಈ ಅವಧಿಯಲ್ಲಿ ಗುರುಬಲದ ಮೂಲಕ ಸಂಪಾದಿಸಿಕೊಳ್ಳಬಹುದು.
ಮಕರ ರಾಶಿಯವರಿಗೆ ಅಕ್ಟೋಬರ್ ಬಳಿಕ ಸಮಸ್ಯೆ ಎದುರಾಗಬಹುದು
ಪ್ರಾರಬ್ಧ ಕಳೆದುಕೊಳ್ಳಲು ಅವಕಾಶ
ಮೀನ ರಾಶಿಯವರಿಗೆ ಅನುಕೂಲ ಮಾಡಿಕೊಡುವಂತಹ ಕೇತು ಸಿಂಹ ರಾಶಿಯಲ್ಲಿ ಇರುವುದರಿಂದ 2026ರಲ್ಲಿ ಈ ರಾಶಿಯವರಿಗೆ ತಮ್ಮ ಪ್ರಾರಬ್ಧವನ್ನು ಕಳೆದುಕೊಳ್ಳಲು ಅವಕಾಶವಿದೆ. ಕೇತುವಿನ ಅನುಗ್ರಹದಿಂದ ಸಾಡೇಸಾತಿ ದಿನಗಳು ಇದ್ದರೂ ಸಹ ಅನೇಕ ವಿಘ್ನಗಳನ್ನು ನಿವಾರಿಸವಂತಹ ದೈತ್ಯ ಶಕ್ತಿ ಈ ರಾಶಿಯವರಿಗೆ ಲಭಿಸಲಿದೆ.
ಆರ್ಥಿಕ ವಿಚಾರದಲ್ಲಿ ಎಚ್ಚರವಹಿಸಿ
ಈ ರಾಶಿಯವರಿಗೆ ಆರ್ಥಿಕ ವಿಚಾರಗಳಲ್ಲಿ ಶನೈಶ್ಚರ ಅನೇಕ ರೀತಿಯಲ್ಲಿ ತೊಂದರೆಗಳನ್ನು ಕೊಡಲು ಕಟಿ ಬದ್ಧನಾಗಿದ್ದರೂ, ಇವರ ಜಾತಕದಲ್ಲಿ ಆರ್ಥಿಕ ಸ್ಥಳದ ಯಜಮಾನ ಮಂಗಳ ಆಗಿರುವುದರಿಂದ ಅವನ ನೆರವು ಸಿಗಲಿದೆ. ಪ್ರಾರಬ್ಧ ನಿವಾರಕ ಷಣ್ಮುಖ ಯಂತ್ರವನ್ನು ಇವರು ಧರಿಸುವುದರಿಂದ ಶನೈಶ್ಚರ ನೀಡಬಹುದಾದಂತಹ ಆರ್ಥಿಕ ನಷ್ಟ ಮಂಗಳನ ಮೂಲಕವಾಗಿ ನಿವಾರಣೆಯಾಗಲಿದೆ.
ಶಶಿ-ಮಂಗಳ ಯೋಗದಿಂದ ಮುಟ್ಟಿದ್ದೆಲ್ಲ ಚಿನ್ನ!
ಶಶಿ ಮಂಗಳ ಯೋಗ ಎಂದರೆ ಜಾತಕದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗಗೊಂಡಾಗ ರೂಪುಗೊಳ್ಳುವ ಯೋಗ ಶುಭವಾಗಿದೆ. ಮೀನ ರಾಶಿಯವರ ಜಾತಕದಲ್ಲಿ ಈ ಶಶಿ ಮಂಗಳ ಯೋಗವಿದ್ದಲ್ಲಿ, ಇವರು ಕೈಗೊಂಡ ಕಾರ್ಯಗಳಲ್ಲಿ ಸಿದ್ಧಿ ಲಭಿಸಿ ಹಣದ ಹೊಳೆ ಹರಿಯಲಿದೆ.
ಷಣ್ಮುಖನ ಆರಾಧನೆ ಮಾಡಿ
ಈ ರಾಶಿಯುವರು ಶಣ್ಮುಖನಿಗೆ ಶರಣಾಗುವ ಮೂಲಕ ಹಲವಾರು ವಿಚಾರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೇ ಶನೈಶ್ಚರನಿಂದ ಎದುರಾಗಬಹುದಂತಹ ಹಲವು ಸಮಸ್ಯೆಗಳು ಷಣ್ಮುಖನ ಆರಾಧನೆಯಿಂದ ಪರಿಹಾರವಾಗಲಿವೆ.
ಮಾತಿನಲ್ಲಿ ನಿಯಂತ್ರಣವಿರಲಿ
ಈ 2026ರಲ್ಲಿ ಮೀನ ರಾಶಿಯವರು ತಮ್ಮ ಮಾತಿನಲ್ಲಿ ನಿಯಂತ್ರಣ ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇದೆ. ನಿಮ್ಮಿಂದ ಮಾತುಗಳು ಬಾರದೇ ಹೋದರು, ಮಾತನಾಡಿಸಿ ತೊಂದರೆ ಕೊಡುವ ದುಷ್ಟರು ಬರುವ ಸಾಧ್ಯತೆಗಳಿವೆ. ಅವರಿಗೆ ನಿಮ್ಮ ಮೌನವೇ ಉತ್ತರವಾಗಿರಲಿ ಎಂದು ಮಹಾಬಲಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.