ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಆಪತ್ತು ತರಬಹುದು ಅಡುಗೆ ಮನೆಯಲ್ಲಿರುವ ತೆರೆದ ಕಸದ ಬುಟ್ಟಿ

ಅಡುಗೆ ಮನೆ ಸ್ವಚ್ಛ ಮತ್ತು ಶುದ್ಧವಾಗಿರಬೇಕು. ಇಲ್ಲಿ ಯಾವುದೇ ರೀತಿಯ ಕೊಳಕು ಇರಬಾರದು. ಅಡುಗೆ ಮನೆಯಲ್ಲಿ ತೆರೆದ ಕಸದ ಬುಟ್ಟಿಯನ್ನು ಇಡುವುದು ಅಪಾಯವನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಹೀಗಾಗಿ ಅಡುಗೆ ಮನೆಯಲ್ಲಿ ಯಾವತ್ತೂ ತೆರೆದ ಕಸದ ಬುಟ್ಟಿಯನ್ನು ಇಡಬೇಡಿ.

ಅಡುಗೆಮನೆಯಲ್ಲಿ ಇಡಬೇಡಿ ತೆರೆದ ಕಸದ ಬುಟ್ಟಿ

-

ಬೆಂಗಳೂರು: ಅಡುಗೆ (Vastu for kitchen) ಮಾಡುವಾಗ ಸಾಕಷ್ಟು ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಕೂಡಲೇ ಅದನ್ನು ವಿಲೇವಾರಿ ಮಾಡಲು ತೆರೆದ ಕಸದ ಬುಟ್ಟಿಯನ್ನು (Dustbin) ಹೆಚ್ಚಿನವರು ಇಟ್ಟುಕೊಳ್ಳುತ್ತಾರೆ. ಆದರೆ ಇದು ತಪ್ಪು ಎನ್ನುತ್ತದೆ ವಾಸ್ತು ಶಾಸ್ತ (Vastu Shastra). ಅಡುಗೆ ಮನೆಯಲ್ಲಿ (Kitchen room) ತೆರೆದ ಕಸದ ಬುಟ್ಟಿಗಳನ್ನು ಇಡುವುದು ಮನೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಅಡುಗೆ ಮನೆಯಲ್ಲಿ ಕಸದ ಬುಟ್ಟಿ ಇಡುವಾಗ ಕೆಲವೊಂದು ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಅಡುಗೆ ಮನೆಯು ಕೇವಲ ಆಹಾರವನ್ನು ಬೇಯಿಸುವ ಸ್ಥಳವಲ್ಲ. ಅದು ಸಂಪೂರ್ಣ ಕುಟುಂಬದ ಆರೋಗ್ಯ ಮತ್ತು ಸಮೃದ್ಧಿಗೆ ಸಂಬಂಧಿಸಿದ ಸ್ಥಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅಡುಗೆ ಮನೆಯಲ್ಲಿ ಶುಚಿತ್ವ ಅಥವಾ ವಾಸ್ತುವಿಗೆ ಸಂಬಂಧಿಸಿದ ಸಣ್ಣ ವಿಷಯಗಳನ್ನು ನಿರ್ಲಕ್ಷಿಸಿದರೆ ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.

ನಾವು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದು ಅಡುಗೆ ಮನೆಯಲ್ಲಿ ತೆರೆದ ಕಸದ ಬುಟ್ಟಿ ಇಡುವುದು ಕೂಡ ಆಗಿದೆ. ಇದು ಮನೆಯ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿ ಮನೆಯಲ್ಲಿ ಹರಡುತ್ತದೆ.

ಅಡುಗೆ ಮನೆಯಂತಹ ಪವಿತ್ರ ಮತ್ತು ಶಕ್ತಿಯಿಂದ ತುಂಬಿದ ಸ್ಥಳದಲ್ಲಿ ತೆರೆದ ಕಸದ ಬುಟ್ಟಿ ಇರಿಸುವುದು ಮನೆಯ ಶಾಂತಿ ಮತ್ತು ಸಂತೋಷದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಆಹಾರದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲಿ ಕಸದ ಬುಟ್ಟಿಯನ್ನು ತೆರೆದಿಡುವ ಬದಲು ಮುಚ್ಚಿಡುವುದು ಒಳ್ಳೆಯದು.

bin1

ತೆರೆದಿರುವ ಕಸದ ಬುಟ್ಟಿಯಿಂದ ಹೊರಹೊಮ್ಮುವ ವಾಸನೆ ಮತ್ತು ಬ್ಯಾಕ್ಟೀರಿಯಾಗಳು ಅಡುಗೆ ಮನೆಯಲ್ಲಿನ ಆಹಾರವನ್ನು ಕಲುಷಿತಗೊಳಿಸುತ್ತದೆ. ಇದು ಆಹಾರ ವಿಷ, ಅಲರ್ಜಿ ಮತ್ತು ಇತರ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮನೆಯಲ್ಲಿ ಕಸದ ಬುಟ್ಟಿಯನ್ನು ಹೊರಗೆ ಇಡುವುದು ಅಥವಾ ಮುಚ್ಚುವುದು ಮುಖ್ಯ. ಯಾಕೆಂದರೆ ಇದು ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುವುದಿಲ್ಲ. ಮನೆಯ ವಾಸ್ತುವಿನ ಮೇಲೂ ಪರಿಣಾಮ ಬಿರುವುದು.

ವಾಸ್ತು ಶಾಸ್ತ್ರದ ಪ್ರಕಾರ ಕೊಳಕು ಇರುವಲ್ಲಿ ಲಕ್ಷ್ಮೀ ವಾಸವಾಗುವುದಿಲ್ಲ. ಅಡುಗೆ ಮನೆಯಲ್ಲಿ ತೆರೆದಿರುವ ಕಸದ ಬುಟ್ಟಿಯನ್ನು ಇಡುವುದರಿಂದ ಆರ್ಥಿಕ ನಷ್ಟ, ವೆಚ್ಚದಲ್ಲಿ ಹೆಚ್ಚಳ ಮತ್ತು ಆದಾಯದಲ್ಲಿ ಇಳಿಕೆಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಅಡುಗೆಮನೆಯಲ್ಲಿ ಸ್ವಚ್ಛವಾದ ಕಸದ ಬುಟ್ಟಿಯನ್ನು ಇಟ್ಟುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅದರ ಮೇಲೆ ಸದಾ ಮುಚ್ಚಳವನ್ನು ಇರಿಸಿ. ಇದು ಅನಗತ್ಯ ಖರ್ಚುಗಳ ಮೇಲೆ ಕಡಿವಾಣ ಹಾಕುತ್ತದೆ.

ಅಡುಗೆ ಮನೆಯ ಕಸದ ಬುಟ್ಟಿಯನ್ನು ಯಾವಾಗಲೂ ಮುಚ್ಚಳದಿಂದ ಮುಚ್ಚಿ. ಪ್ರತಿದಿನ ಕಸದ ಬುಟ್ಟಿಯನ್ನು ಸ್ವಚ್ಛಗೊಳಿಸಿ ಮತ್ತು ಸಮಯಕ್ಕೆ ಸರಿಯಾಗಿ ಖಾಲಿ ಮಾಡಿ. ಅಡುಗೆ ಮನೆಯಲ್ಲಿ ಕಸದ ಬುಟ್ಟಿಯನ್ನು ಇಡಲು ಉತ್ತಮ ದಿಕ್ಕು ನೈಋತ್ಯವಾಗಿದೆ. ಯಾವಾಗಲೂ ಕಸದ ಬುಟ್ಟಿಯ ಬಳಿ ಬೇವಿನ ಎಲೆ ಅಥವಾ ಕರ್ಪೂರವನ್ನು ಇರಿಸಿ.

ಇದನ್ನೂ ಓದಿ: Vastu Tips: ಮಲಗುವಾಗ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು ಯಾಕೆ ಗೊತ್ತೆ?

ತೆರೆದ ಕಸದ ಬುಟ್ಟಿ ಮನೆ ಮಂದಿಯ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಾದರೆ ಸ್ವಚ್ಛತೆ ಮತ್ತು ವಾಸ್ತುವಿನ ಈ ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು.