ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಎಪ್ರಿಲ್ 27, 2026: ಇಂದು ಈ ರಾಶಿಗೆ ಕೆಲಸ ಕಾರ್ಯದಲ್ಲಿ ಟೀಕೆ ಎದುರಾಗುವ ಸಾಧ್ಯತೆ!

Horoscope Today April 27: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಏಕಾದಶಿ ತಿಥಿ, ಪೂರ್ವ ಪಾಲ್ಗುಣಿ ನಕ್ಷತ್ರದ ಎಪ್ರಿಲ್ 27 ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ತೊಂದರೆ ಎದುರಾಗಲಿದೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Apr 27, 2026 6:00 AM

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ,ವಸಂತ ಋತು, ವೈಶಾಖ ಮಾಸೆ, ಪೂರ್ವ ಪಾಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಹೆಂಗಸರಿಂದ ನಿಮಗೆ ಟೀಕೆ ಎದುರಾಗುವ ಸಾಧ್ಯತೆ ಇಂದು ಇರುತ್ತದೆ. ಅದೇ ರೀತಿ ಮಿತ್ರತ್ವದಲ್ಲಿ ಕೂಡ ಒಡಕು ಉಂಟಾಗುವ ಸಾಧ್ಯತೆಗಳು ನಿಮಗೆ ಇರುತ್ತದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ತಂದೆ- ತಾಯಿ ಸಂಸಾರದ ಮೂಲಕ ಖುಷಿಯ ದಿನ ನಿಮ್ಮದು ಆಗುತ್ತದೆ. ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಉತ್ತಮವಾದ ದಿನವಾಗಿದೆ. ಎಲ್ಲ ಕೆಲಸ ಕಾರ್ಯದಲ್ಲಿ ಗೆಲುವು ನಿಮ್ಮದಾಗುತ್ತದೆ. ಹೆಚ್ಚಿನ ಆತ್ಮವಿಶ್ವಾಸ ನಿಮಗೆ ಇಂದು ಇರುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಮನೆಯಲ್ಲಿ ಅತೀ ಹೆಚ್ಚಿನ ನೆಮ್ಮದಿ ಇರುತ್ತದೆ. ಹೆಣ್ಣು ಮಕ್ಕಳಿಂದ ನಿಮಗಿಂದು ಖುಷಿಯಾದ ವಾತಾವರಣ ಇರುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಿತ್ರತ್ವದಲ್ಲಿ ಖುಷಿ ನಿಮಗೆ ಇಂದು ಸಿಗುತ್ತದೆ. ಬೇರೆಯವರಿಂದ ಎಲ್ಲ ಕೆಲಸದಲ್ಲಿ ನೀವಿಂದು ಜಯಿಸಬಹುದಾಗಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಹೆಣ್ಣು ಮಕ್ಕಳಿಂದ ಇಂದು ಟೀಕೆಯನ್ನು ಕೇಳಬೇಕಾಗಿ ಬರಬಹುದು‌. ಎರಡು ದಿನಗಳ ನಂತರ ಎಲ್ಲ ಸಮಸ್ಯೆಗೆ ಪರಿಹಾರ ಸಿಗಬಹುದು.

ತುಲಾ ರಾಶಿ: ತುಲಾ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರೇಮ, ಪ್ರೀತಿ ಪ್ರಕರಣದಲ್ಲೂ ಯಶಸ್ಸು ಗಳಿಸುತ್ತೀರಿ.

Vastu Tips: ಅಡುಗೆಮನೆಯ ವಾಸ್ತು ನಿಯಮಗಳು: ಆರೋಗ್ಯ, ಸಮೃದ್ಧಿಗೆ ಈ ಸರಳ ಟಿಪ್ಸ್ ಪಾಲಿಸಿ

ವೃಶ್ಚಿಕ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಅಂದು ಕೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮವಾದ ದಿನವಾಗಿದ್ದು ಭಾಗ್ಯೋದಯವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ದೇವರ ಅನುಗ್ರಹ ಹೆಚ್ಚು ಪ್ರಾಪ್ತಿಯಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೆಲಸದಲ್ಲೂ ಟೀಕೆ ಎದುರಾಗಲಿದ್ದು ಹೆಂಗಸರ ಮೂಲದಿಂದ ನಿಮಗೆ ತೊಂದರೆ ಉಂಟಾಗಬಹುದು.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನ ವಾಗಿದೆ. ಪ್ರೀತಿ ಪಾತ್ರರಿಂದ ಮನಸ್ಸಿಗೆ ನೆಮ್ಮದಿ ಸಹಕಾರ ಪ್ರಾಪ್ತಿ ಯಾಗುತ್ತದೆ.

ಮೀನ ರಾಶಿ: ಮೀನ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಿಸಬಹುದು. ಎಲ್ಲ ಕೆಲಸ ಕಾರ್ಯದಲ್ಲೂ ಯಶಸ್ಸು ನಿಮಗೆ ಸಿಗುತ್ತದೆ.