ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬಾರದು..?

ನಮ್ಮ ವಾಸ್ತು ಶಾಸ್ತ್ರದಲ್ಲಿ ಯಾವ ದಿಕ್ಕುಗಳಲ್ಲಿ ಊಟ ಮಾಡಬೇಕು, ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬಾರದು ಎಂಬುದನ್ನು ಹೇಳುತ್ತದೆ. ವಾಸ್ತು ಪ್ರಕಾರ, ನಾವು ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬಾರದು..? ಒಂದು ವೇಳೆ ನಿಷೇಧಿತ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ಏನೆಲ್ಲಾ ಅನಾಹುತಗಳಾವುವು ಗೊತ್ತೇ..?

ನಿಷೇಧಿತ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ಏನಾಗುತ್ತದೆ?

Profile Sushmitha Jain Mar 21, 2025 7:00 AM

ಬೆಂಗಳೂರು: ನಮ್ಮ ಜೀವನ(Life)ದಲ್ಲಿ ವಾಸ್ತು(Vastu Tips)ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತುವನ್ನು ಸರಿಯಾಗಿ ಬಳಸಿಕೊಂಡರೆ ಜೀವನವನ್ನು ಉತ್ತಮ ದಿಕ್ಕಿನತ್ತ ಕೊಂಡೊಯ್ಯಬಹುದು. ಈ ಮೂಲಕ, ಜೀವನದಲ್ಲಿ ಯಶಸ್ಸು ಮತ್ತು ನಕಾರಾತ್ಮಕ ವಿಷಯಗಳಿಂದ ರಕ್ಷಣೆಯನ್ನೂ ಪಡೆಯಬಹುದು. ಹಾಗೇ ವಾಸ್ತು ಶಾಸ್ತ್ರದಲ್ಲಿ ಶುಭ ಮತ್ತು ಅಶುಭಕ್ಕೆ ಮಹತ್ವದ ಸ್ಥಾನವಿದ್ದು, ಕೆಲವು ದಿಕ್ಕು(Direction)ಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕೆಲವು ಕೆಲಸಗಳಿಗೆ ಕೆಲವು ದಿಕ್ಕುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ನೀಡಲಾದ ನಿಯಮಗಳನ್ನು ಅನುಸರಿಸಿ, ನೀವು ಯಶಸ್ಸು ಮತ್ತು ಸಂತೋಷವನ್ನು ಪಡೆಯಬಹುದು. ನಾವು ಕಂಡ ಕಂಡಲ್ಲಿ ಕುಳಿತು ಆಹಾರ ಸೇವನೆ ಮಾಡ್ತೇವೆ. ಇತ್ತೀಚಿನ ದಿನಗಳಲ್ಲಿ ಜನರು ಟಿವಿ ಮುಂದೆ ಕುಳಿತು ಆಹಾರ ಸೇವನೆ ಮಾಡುವುದು ಹೆಚ್ಚು. ಆದ್ರೆ ವಾಸ್ತುಶಾಸ್ತ್ರದ ಪ್ರಕಾರ, ಆಹಾರ ಸೇವನೆಯನ್ನು ಎಲ್ಲೆಂದರಲ್ಲಿ ಮಾಡಬಾರದು. ಅದಕ್ಕೂ ದಿಕ್ಕು,ವಾಸ್ತವಿದೆ. ಆಹಾರ ಸೇವಿಸುವಾಗ ಯಾವ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ನಾವಿಂದು ಹೇಳ್ತೆವೆ. ಆಹಾರ ಸೇವಿಸುವಾಗ ಈ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ. ಇದು ಆರೋಗ್ಯ ವೃದ್ಧಿಗೂ ಕಾರಣವಾಗುತ್ತದೆ. ಹಾಗಾದ್ರೆ ಬನ್ನಿ ಊಟ ಮಾಡುವಾಗ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು..? ಯಾವ ದಿಕ್ಕು ಊಟ ಮಾಡಲು ಸೂಕ್ತ ಅಲ್ಲ ಎಂಬುದನ್ನು ನೋಡೋಣಾ..

ಈ ದಿಕ್ಕು ಸೂಕ್ತ:

ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕುಳಿತು ಆಹಾರ ಸೇವನೆ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ಎರಡೂ ದಿಕ್ಕನ್ನು ದೇವರ ವಾಸಸ್ಥಾನವೆಂದು ನಂಬಲಾಗಿದೆ. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಆಹಾರ ತಿನ್ನುವುದರಿಂದ ದೇವರ ಕೃಪೆ ಸದಾ ನಿಮ್ಮ ಮೇಲಿರುತ್ತದೆ. ಆಯುಷ್ಯ ವೃದ್ಧಿಯಾಗುತ್ತದೆ. ಹಾಗೆಯೇ ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಿದ್ರೆ ಶಕ್ತಿ ಹೆಚ್ಚುತ್ತದೆ. ರೋಗ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಓದಿ: Vastu Tips: ನಿಮ್ಮ ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್‌ ಸರಿಯಾದ ದಿಕ್ಕಿನಲ್ಲಿ ಇದೆಯೇ..?

ದಕ್ಷಿಣ ಮತ್ತು ಪಶ್ಚಿಮ ದಿಕ್ಕು ನಿಷಿದ್ಧ:

ದಕ್ಷಿಣ ಮತ್ತು ಪಶ್ಚಿಮಕ್ಕೆ ಮುಖ ಮಾಡಿ ಆಹಾರಸೇವಿಸುವುದು ನಿಷಿದ್ಧ ಆಗಿದ್ದು, ದಕ್ಷಿಣಾಭಿಮುಖವಾಗಿ ಆಹಾರವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಅದರಲ್ಲಿ ಭೂತದ ಪ್ರಭಾವ ಬರುತ್ತದೆ. ಹಾಗೆಯೇ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವುದು ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದಕ್ಷಿಣಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬಾರದು. ಇದು ದುರದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ.

ಈ ತಪ್ಪು ಮಾಡಬೇಡಿ:

ಯಾವಾಗಲೂ ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಶಾಸ್ತ್ರದ ಪ್ರಕಾರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಕಾಲುಗಳನ್ನು ಮಡಚಿ ಆಹಾರ ಸೇವಿಸಬೇಕು. ಆಹಾರದ ತಟ್ಟೆಯನ್ನು ನಿಮ್ಮ ಕಾಲ ಬಳಿ ಇಡುವ ತಪ್ಪು ಮಾಡಬೇಡಿ. ಅದನ್ನು ಕಾಲಿನಿಂದ ಸ್ವಲ್ಪ ಮೇಲ್ಭಾಗದಲ್ಲಿ ಇಡಬೇಕು. ಆಗ ಅನ್ನಪೂರ್ಣೆಗೆ ಗೌರವಿಸಿದಂತಾಗುತ್ತದೆ. ಎಂದಿಗೂ ನಿಮಗೆ ಆಹಾರದ ಕೊರತೆ ಕಾಡುವುದಿಲ್ಲ.

ಈ ವಿಷಯಗಳು ನೆನಪಿರಲಿ

  • ತಿನ್ನುವ ಮೊದಲು ಯಾವಾಗಲೂ ದೇವರಿಗೆ ಅನ್ನವನ್ನು ಅರ್ಪಿಸಬೇಕು. ಊಟ ಮಾಡುವಾಗ ಮಾತನಾಡಬಾರದು. ಹಾಗೆಯೇ ಯಾವುದೇ ಕೆಲಸವನ್ನು ಮಾಡಬಾರದು.
  • ಡೈನಿಂಗ್ ಟೇಬಲ್ ಮೇಲೆ ಯಾವಾಗಲೂ ಕೆಲವು ಆಹಾರ ಪದಾರ್ಥಗಳನ್ನು ಇಟ್ಟಿರಬೇಕು. ಹಾಗಾದಲ್ಲಿ ಎಂದಿಗೂ ಆಹಾರದ ಕೊರತೆ ಕಾಡುವುದಿಲ್ಲವೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
  • ಡೈನಿಂಗ್ ಟೇಬಲ್ ಅನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಕಡೆಗೆ ಇಡಬೇಕು.
  • ಹಾಸಿಗೆಯ ಮೇಲೆ ಕೂತು ಊಟ ಸೇವನೆ ಮಾಡಬಾರದು. ಇದು ವಾಸ್ತುಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ.
  • ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ತಿನ್ನಬೇಡಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.