ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯಲ್ಲಿ ಶಕ್ತಿ, ಸಮೃದ್ಧಿಯನ್ನು ಹೆಚ್ಚಿಸುತ್ತವೆ ಈ ಬಣ್ಣಗಳು

ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತಿದ್ದರೆ ಮಾತ್ರ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಯಾಗಲು ಸಾಧ್ಯವಿದೆ. ಮನೆಗೆ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಕೆಲವು ಬಣ್ಣಗಳು ಸಹಾಯ ಮಾಡುತ್ತದೆ. ಅಂತಹ ಬಣ್ಣಗಳು ಯಾವುದು, ಅವು ಯಾವ ರೀತಿ ಸಹಾಯ ಮಾಡುತ್ತದೆ ಮೊದಲಾದ ಮಾಹಿತಿ ಇಲ್ಲಿದೆ.

ಬೆಂಗಳೂರು: ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿ ನೆಲೆಯಾಗಬೇಕಾದರೆ ಸಕಾರಾತ್ಮಕ ಶಕ್ತಿಯ (Positive energy) ಹರಿವು ನಿರಂತರವಾಗಿರಬೇಕು. ಒಂದು ವೇಳೆ ಇದರ ಹರಿವಿನಲ್ಲಿ ಕೊಂಚ ಅಡಚಣೆಯಾದರೂ ಕೆಲವೊಂದು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಮನೆಗೆ (vastu for home) ಸುಲಭವಾಗಿ ಸಕಾರಾತ್ಮಕ ಶಕ್ತಿ ಬರುವಂತೆ ಮಾಡಲು ಬಣ್ಣಗಳು ಸಹಾಯ ಮಾಡುತ್ತವೆ. ಅಂತಹ ಬಣ್ಣಗಳು (Vastu for Colors) ಯಾವುದು, ಅವುಗಳನ್ನು ಯಾವ ರೀತಿ ಬಳಸಬೇಕು ಎನ್ನುವ ಕುರಿತು ವಾಸ್ತು ಶಾಸ್ತ್ರ (Vastu Shastra) ಉಲ್ಲೇಖಿಸಲಾಗಿದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಮನೆಗೆ ಕಿತ್ತಳೆ, ಕೆಂಪು ಮತ್ತು ಗುಲಾಬಿ ಬಣ್ಣಗಳು ಶಕ್ತಿ ಮತ್ತು ಸಮೃದ್ಧಿಯನ್ನು ತುಂಬುತ್ತದೆ. ಇವುಗಳು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಆಗ್ನೇಯ ದಿಕ್ಕನ್ನು ಅಗ್ನಿಯ ಸ್ಥಳವೆಂದು ಪರಿಗಣಿಸಲಾಗಿದೆ. ಇದು ಮನೆಯ ಶಕ್ತಿ, ಅಡುಗೆ ಪ್ರಕ್ರಿಯೆ ಮತ್ತು ಜೀವನದ ಪ್ರಗತಿಗೆ ಸಂಬಂಧಿಸಿದೆ. ಅಗ್ನಿ ಅಂಶದ ಸರಿಯಾದ ಸಮತೋಲನವು ಮನೆಗೆ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆಗ್ನೇಯ ಮೂಲೆಯನ್ನು ಶಕ್ತಿಯುತವಾಗಿಡಲು ಕಿತ್ತಳೆ, ಕೆಂಪು ಮತ್ತು ಗುಲಾಬಿ ಬಣ್ಣಗಳ ಬಳಕೆ ಸೂಕ್ತವಾಗಿದೆ. ಈ ಬಣ್ಣಗಳು ಅಗ್ನಿ ಅಂಶದ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಮನೆಯ ವಾತಾವರಣವನ್ನು ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ತುಂಬುತ್ತವೆ. ಕೆಂಪು ಬಣ್ಣವು ಶಕ್ತಿ ಮತ್ತು ಧೈರ್ಯದ ಪ್ರತೀಕವಾಗಿದೆ. ಕಿತ್ತಳೆ ಬಣ್ಣವು ಸೃಜನಶೀಲತೆ ಮತ್ತು ಗುಲಾಬಿ ಬಣ್ಣವು ಸಂಬಂಧಗಳಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಈ ಬಣ್ಣಗಳನ್ನು ವರ್ಣಚಿತ್ರ, ವಾಲ್‌ಪೇಪರ್‌, ಪರದೆ ಅಥವಾ ಅಲಂಕಾರಿಕ ವಸ್ತುಗಳಲ್ಲಿ ಇಡಬಹುದಾಗಿದೆ. ನಿರ್ದಿಷ್ಟ ದಿಕ್ಕಿನಲ್ಲಿಡುವುದು ಉತ್ತಮ. ಅಡುಗೆಮನೆ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳು ಸಹ ಈ ದಿಕ್ಕಿನಲ್ಲಿದ್ದರೆ ಸರಿಯಾದ ಬಣ್ಣಗಳ ಆಯ್ಕೆಯು ಅಲ್ಲಿನ ಶಕ್ತಿಯನ್ನು ಸಮತೋಲನಗೊಳಿಸುತ್ತದೆ.

ಆಗ್ನೇಯ ಮೂಲೆಯಲ್ಲಿರುವ ಅಗ್ನಿ ಅಂಶವನ್ನು ಸಮತೋಲನಗೊಳಿಸುವುದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಮತ್ತು ಕೆಲಸದಲ್ಲಿ ಪ್ರಗತಿಯನ್ನು ತರುತ್ತದೆ. ಈ ಬಣ್ಣಗಳ ಸರಿಯಾದ ಬಳಕೆಯು ಕುಟುಂಬ ಸದಸ್ಯರ ಮಾನಸಿಕ ಸ್ಥಿತಿಯನ್ನು ಸಕಾರಾತ್ಮಕವಾಗಿಡಲು ಸಹಾಯ ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Vastu Tips: ಮನೆಗೆ ಮನಿ ಪ್ಲಾಂಟ್ ತರಬೇಕೆಂದಿದ್ದೀರಾ? ಇದು ತಿಳಿದಿರಲಿ

ಗಾಢ ಬಣ್ಣಗಳು ಬೆಂಕಿಯ ಅಂಶವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ತಿಳಿ ಬಣ್ಣಗಳ ಆಯ್ಕೆ ಸೂಕ್ತ. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ವಾಸ್ತು ತಜ್ಞರು.

ವಿದ್ಯಾ ಇರ್ವತ್ತೂರು

View all posts by this author