ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಿದರೆ ಒಳ್ಳೆಯದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Vastu Tips for Kitchen: ವಾಸ್ತು ಶಾಸ್ತ್ರದಲ್ಲಿ ಅಡುಗೆ ಕೋಣೆಯನ್ನು ಮನೆಯ ಬಹಳ ಮುಖ್ಯವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇದು ಸರಿಯಾದ ದಿಕ್ಕಿನಲ್ಲಿಲ್ಲದಿದ್ದರೆ, ಕುಟುಂಬದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯನ್ನು ಯಾವ ದಿಕ್ಕಿಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಮನೆಯಲ್ಲಿ ನೆಮ್ಮದಿ ಖುಷಿ ಸಂತೋಷ ನೆಲಸಬೇಕೆಂದರೆ ದೇವರ ಅನುಗ್ರಹದ ಜತೆ ವಾಸ್ತು ಶಾಸ್ತ್ರವೂ(Vastu Shasthra) ಪ್ರಮುಖವಾಗುತ್ತದೆ. ಹಾಗಾಗಿಯೇ ಸನಾತನ ಧರ್ಮದಲ್ಲಿ (Hindu Dharma) ವಾಸ್ತುಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ನಿಯಮ ಪಾಲಿಸಿದರೆ ಸಕಾರಾತ್ಮಕ ಶಕ್ತಿಯೂ (Positive Energy) ಹೆಚ್ಚಾಗುತ್ತದೆ. ಜತೆಗೆ ಸಂಪತ್ತು ಹಾಗೂ ಹಣಕಾಸಿನ ಅಭಿವೃದ್ಧಿ ಆಗಬೇಕಾದರೆ ಜೀವನದಲ್ಲಿ ವಾಸ್ತುವನ್ನು ಅಳವಡಿಕೊಳ್ಳುವುದು ಅತ್ಯಗತ್ಯ. ಅದರಲ್ಲೂ ಮನೆಯ ಅತ್ಯಂತ ಪ್ರಮುಖ ಭಾಗವಾಗಿರುವ ಅಡುಗೆ ಕೋಣೆಯ ವಾಸ್ತು(Kitchen Vastu) ಯಶಸ್ಸು ಹಾಗೂ ಏಳಿಗೆ ತಂದುಕೊಂಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ನಮ್ಮ ಆರೋಗ್ಯ ಹಾಗೂ ಮನೆಯ ಸಮೃದ್ಧಿಗೂ ಮುಖ್ಯವಾಗುತ್ತದೆ.

ಅದೇ ವಾಸ್ತು ದೋಷವಿದ್ದರೆ, ಕುಟುಂಬದಲ್ಲಿ ಅನೇಕ ಬಾರಿ ಕಲಹಗಳು, ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವಾಸ್ತುವನ್ನು ಮನೆಯಲ್ಲಿ ಪಾಲಿಸುವುದರಿಂದ ಧನಾತ್ಮಕ ಶಕ್ತಿಯು ಮನೆಯೊಳಗೆ ಹೆಚ್ಚುತ್ತದೆ ಎಂಬ ನಂಬಿಕೆ ಇದ್ದು, ಮನೆ ಮತ್ತು ಕಚೇರಿ ನಿರ್ಮಾಣ ಮಾಡುವಾಗ ವಾಸ್ತು ನಿಯಮಗಳನ್ನು ತಪ್ಪದೇ ಅನುಸರಿಸಬೇಕು ಎನ್ನುತ್ತಾರೆ ತಜ್ಞರು.

ಅಲ್ಲದೇ ವಾಸ್ತು ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಸರಿಯಾಗಿದ್ದರೆ ಮಾತ್ರ ಜೀವನ ಸುಖಮಯ, ಇಲ್ಲದಿದ್ದರೆ ಒಂದಿಲ್ಲೊಂದು ಸಮಸ್ಯೆ ತಪ್ಪಿದ್ದಲ್ಲ. ಅದರಲ್ಲಿಯೂ ಅಡುಗೆ ಕೋಣೆಯ ವಿನ್ಯಾಸಕ್ಕೆ ವಿಶೇಷ ಗಮನ ನೀಡಬೇಕು. ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು, ಯಾವ ವಸ್ತುವನ್ನು ಎಲ್ಲಿ ಇಡಬೇಕು, ಈ ಎಲ್ಲವೂ ಬಹಳ ಮುಖ್ಯ ಎನಿಸುತ್ತದೆ. ಇದು ಮನೆಯ ಸಂತೋಷ, ನೆಮ್ಮದಿಯ ಜತೆಗೆ ಆರ್ಥಿಕ ಪರಿಸ್ಥಿತಿ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಬನ್ನಿ ಅಡುಗೆ ಮನೆಗೆ ಸಂಬಂಧಪಟ್ಟ ಮತ್ತಷ್ಟು ವಾಸ್ತು ನಿಯಮಗಳನ್ನು ತಿಳಿದುಕೊಳ್ಳೋಣ.

ಈ ಸುದ್ದಿಯನ್ನು ಓದಿ; Viral Video: ವೇಗವಾಗಿ ಚಲಿಸುತ್ತಿದ್ದ ರೈಲಿನ ವಿಂಡ್‌ಸ್ಕ್ರೀನ್‌ಗೆ ಹದ್ದು ಡಿಕ್ಕಿ; ಲೋಕೋ ಪೈಲಟ್‌ಗೆ ಗಾಯ, ಇಲ್ಲಿದೆ ವಿಡಿಯೊ

ಈ ದಿಕ್ಕಿಗೆ ಮುಖ ಮಾಡಿ ನಿಂತು ಅಡುಗೆ ತಯಾರಿಸಿ

ವಾಸ್ತು ಪ್ರಕಾರ ಅಡುಗೆ ಕೋಣೆಯು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಅಡುಗೆ ಮನೆಯ ಬಾಗಿಲನ್ನು ಮನೆಯ ಮುಖ್ಯ ದ್ವಾರಕ್ಕೆ ಕಾಣಿಸದಂತೆ ಮಾಡುವುದು ಬಹಳ ಮುಖ್ಯ. ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು. ಇದನ್ನು ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಶಾಂತಿ, ಸೌಹಾರ್ದತೆ ಇದ್ದರೂ ಕಾಯಿಲೆಗಳು ಬರದಂತೆ ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಉತ್ತಮ.

ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ

ವಾಸ್ತು ಪ್ರಕಾರ ಅಡುಗೆ ಕೋಣೆಯ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದರಿಂದ ಮನೆಯ ಸದಸ್ಯರಿಗೆ ಚರ್ಮ ರೋಗಗಳು ಬರುತ್ತವೆ. ಆಗ್ನೇಯಕ್ಕೆ ಮುಖ ಮಾಡಿ ಅಡುಗೆ ಮಾಡಿದರೆ ಅದು ನಿಮ್ಮ ಮನೆಯ ಶಾಂತಿಯನ್ನು ಕೆಡಿಸುತ್ತದೆ. ಇದರೊಂದಿಗೆ ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ. ದಕ್ಷಿಣ, ಉತ್ತರ ಮತ್ತು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಅಶುಭವಾಗಿದ್ದು, ಹೀಗೆ ಮಾಡುವುದರಿಂದ ಆರ್ಥಿಕ ನಷ್ಟವಾಗುತ್ತದೆ.

ಸ್ವಚ್ಛತೆ ಕಾಪಾಡಿಕೊಳ್ಳಿ

ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಂಚಭೂತಗಳು ಸಮತೋಲನದಲ್ಲಿರಬೇಕು.