Viral Video: ವೇಗವಾಗಿ ಚಲಿಸುತ್ತಿದ್ದ ರೈಲಿನ ವಿಂಡ್‌ಸ್ಕ್ರೀನ್‌ಗೆ ಹದ್ದು ಡಿಕ್ಕಿ; ಲೋಕೋ ಪೈಲಟ್‌ಗೆ ಗಾಯ, ಇಲ್ಲಿದೆ ವಿಡಿಯೊ
Eagle Hits Windscreen of Moving Train: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ಅಸಾಮಾನ್ಯ ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿರುವ ರೈಲಿನ ಗಾಜಿನ ಕಿಟಕಿಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ಲೊಕೊ ಪೈಲಟ್ ಗಾಯಗೊಂಡಿದ್ದಾರೆ. ಘಟನೆಯು ಪ್ರಯಾಣಿಕರಲ್ಲಿ ಆತಂಕವನ್ನು ಹುಟ್ಟಿಸಿದ್ದು, ಅದೃಷ್ಟವಶಾತ್ ಯಾವುದೇ ದುರಂತ ನಡೆದಿಲ್ಲ.
ಹದ್ದು ಡಿಕ್ಕಿಯಾಗಿ ಗಾಯಗೊಂಡ ಲೋಕೋ ಪೈಲಟ್ -
ಶ್ರೀನಗರ: ವೇಗವಾಗಿ ಚಲಿಸುತ್ತಿದ್ದ ರೈಲಿನ ವಿಂಡ್‌ಶೀಲ್ಡ್‌ಗೆ ಹದ್ದೊಂದು (Eagle) ಡಿಕ್ಕಿ ಹೊಡೆದ ಪರಿಣಾಮ, ಗಾಜು ಒಡೆದು ಲೋಕೋ ಪೈಲಟ್ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu-Kashmir) ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಬಾರಾಮುಲ್ಲಾ-ಬನಿಹಾಲ್ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಗೊಂಡ ಪಕ್ಷಿ ಮತ್ತು ಲೋಕೋ ಪೈಲಟ್‍ನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಅಧಿಕಾರಿಗಳ ಪ್ರಕಾರ, ಬಿಜ್‌ಬೆಹರಾ ಮತ್ತು ಅನಂತ್‌ನಾಗ್ ರೈಲ್ವೆ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಹದ್ದು ಇದ್ದಕ್ಕಿದ್ದಂತೆ ರೈಲಿನ ಮುಂದೆ ಕಾಣಿಸಿಕೊಂಡು ಕಾರಿನ ಗಾಜುಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದು, ಪೈಲಟ್‌ಗೆ ಗಾಯವಾಗಿದೆ. ಗಾಯಗೊಂಡ ಚಾಲಕನನ್ನು ವಿಶಾಲ್ ಎಂದು ಗುರುತಿಸಲಾಗಿದ್ದು, ರೈಲು ನಿಲ್ಲಿಸಿದ ನಂತರ ಅವರಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲಾಯಿತು.
ಇದನ್ನೂ ಓದಿ: Viral Video: ಅಂಗಡಿಯವನಿಗೆ ಮೆಣಸಿನ ಪುಡಿ ಎರಚಿ ಆಭರಣ ದೋಚಲು ಯತ್ನಿಸಿದ ಮಹಿಳೆ; ಸಿಕ್ಕಿಬಿದ್ದಿದ್ದು ಹೇಗೆ?
ವರದಿಗಳ ಪ್ರಕಾರ, ರೈಲು ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ, ಪ್ರಯಾಣಿಕರು ಆಘಾತಕ್ಕೊಳಗಾಗಿ ಗೊಂದಲಕ್ಕೊಳಗಾದರು. ಹಕ್ಕಿ ಎಂಜಿನ್‌ನ ಮುಂಭಾಗದ ಗಾಜಿಗೆ ಬಡಿದು ಒಳಗೆ ಬಂದು ಬಿದ್ದಿದೆ. ಗಾಯಗೊಂಡ ಚಾಲಕನ ವಿಡಿಯೊ ವೈರಲ್ ಆಗಿದ್ದು, ಅವರ ಕುತ್ತಿಗೆಯಲ್ಲಿ ಹುದುಗಿರುವ ಗಾಜಿನ ಚೂರುಗಳನ್ನು ವೈದ್ಯರು ಚಿಕಿತ್ಸೆಯ ಸಮಯದಲ್ಲಿ ಎಚ್ಚರಿಕೆಯಿಂದ ತೆಗೆದುಹಾಕಿದ್ದಾರೆ.
ವಿಡಿಯೊ ವೀಕ್ಷಿಸಿ:
जम्मू-कश्मीर के अनंतनाग जिले में एक चलती हुई ट्रेन की खिड़की से चील टकरा गई,टक्कर इतनी जोरदार थी कि चील विंड स्क्रीन तोड़ती हुई सीधे लोको पायलट से टकराई उसके साथ ही कांच के कुछ टुकड़े भी लोको पायलट से लगे, जिसकी वजह से वह मामूली रूप से जख्मी हो गया
— 🇮🇳Siya Ram 🚩 (@Jisiyaram) November 8, 2025
बारामूला- बनिहाल ट्रेन की घटना pic.twitter.com/7aRUbqCXUf
ಅದೃಷ್ಟವಶಾತ್, ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಡಿಕ್ಕಿಯ ನಂತರ ಹದ್ದು ಎಂಜಿನ್ ವಿಭಾಗದೊಳಗೆ ಬಿದ್ದಿದೆ. ಈ ಘಟನೆಯು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಇಬ್ಬರನ್ನೂ ಅಚ್ಚರಿಗೊಳಿಸಿದೆ. ಏಕೆಂದರೆ ಈ ಮಾರ್ಗದಲ್ಲಿ ಇಂತಹ ಅಪಘಾತಗಳು ಅತ್ಯಂತ ವಿರಳ. ರೈಲು ಅಥವಾ ಅದರ ಮಾರ್ಗದಲ್ಲಿ ಯಾವುದೇ ಸುರಕ್ಷತಾ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ರೈಲ್ವೆ ಅಧಿಕಾರಿಗಳು ಆಂತರಿಕ ಪರಿಶೀಲನೆಯನ್ನು ಪ್ರಾರಂಭಿಸಿದ್ದಾರೆ.
ಹಳಿ ದಾಟುತ್ತಿದ್ದ ಯಾತ್ರಿಕರಿಗೆ ರೈಲು ಡಿಕ್ಕಿ
ರೈಲ್ವೇ ಹಳಿ ದಾಟುತ್ತಿದ್ದ ಯಾತ್ರಿಕರಿಗೆ ರೈಲು ಡಿಕ್ಕಿ ಹೊಡೆದಿದ್ದ ಭೀಕರ ಘಟನೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಮಿರ್ಜಾಪುರದಲ್ಲಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದ್ದು, ಹಲವರು ಸಾವನ್ನಪ್ಪಿದ್ದರು. ಸಂತ್ರಸ್ತರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಚೋಪನ್‌ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಯಾತ್ರಿಕರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಚೋಪನ್‌ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದರು. ಘಟನೆ ಚುನಾರ್ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದ ಯಾತ್ರಿಕರು ಪ್ಯಾಸೆಂಜರ್ ರೈಲಿನಲ್ಲಿ ಆಗಮಿಸಿದ್ದರು. ರೈಲ್ವೆ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರು ರೈಲಿನ ಪ್ಲಾಟ್‌ಫಾರ್ಮ್ ಬದಿಯಲ್ಲಿ ಇಳಿಯದೆ ಮತ್ತೊಂದು ಕಡೆ ಇಳಿದು ಹಳಿಯನ್ನು ದಾಟಲು ಯತ್ನಿಸಿದ್ದಾರೆ. ಆಗ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲು ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪ್ರಯಾಣಿಕರು ಹಳಿ ದಾಟುತ್ತಿದ್ದಾಗ, ಇನ್ನೊಂದು ಬದಿಯಿಂದ ಬಂದ ರೈಲು ಸಂಖ್ಯೆ 12311 (ನೇತಾಜಿ ಎಕ್ಸ್‌ಪ್ರೆಸ್) ನಾಲ್ವರು ಪ್ರಯಾಣಿಕರ ಮೇಲೆ ಹರಿದಿದೆ.