Hindu: ಹಿಂದೂಗಳು ಒಂದಾಗುವ ಸಮಯ ಬಂದಿದೆ: ಬಿಜೆಪಿ ಮುಖಂಡ ಎನ್ ಎಂ ರವಿನಾರಾಯಣ ರೆಡ್ಡಿ ಎಚ್ಚರಿಕೆ
ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ, ಶಿವಕುಮಾರ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಮಾರಣಹೋಮ ನಡೆಸುತ್ತಿದ್ದಾರೆ, ಹಿಂದೂ ದೇವಾಲಯಗಳನ್ನು ನಾಶ ಮಾಡುತ್ತಿದ್ದಾರೆ
Ashok Nayak
Dec 3, 2024 8:58 PM
ಗೌರಿಬಿದನೂರು : ಬಾಂಗ್ಲಾದೇಶದಲ್ಲಿ ಅಲ್ಲಿನ ಹಿಂದೂಗಳ ಮೇಲೆ ಮುಸ್ಲೀಮರು ನಡೆಸುತ್ತಿರುವ ದಾಳಿ, ರಾಜ್ಯದಲ್ಲಿ ವಕ್ಫ್ ಸಂಸ್ಥೆ ನಡೆಸುತ್ತಿರುವ ಲ್ಯಾಂಡ್ ಜೀಹಾದ್ ಕರ್ಮಕಾಂಡಗಳನ್ನು ನೋಡಿಯಾದರೂ ಹಿಂದೂಗಳು ಒಂದಾಗಬೇಕಿದೆ ಎಂದು ಬಿಜೆಪಿ ಮುಖಂಡ ಎನ್ ಎಂ ರವಿನಾರಾಯಣ ರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಡಿ.೯ರ ಸೋಮವಾರ ಬೆಳಗ್ಗೆ 11 ಘಂಟೆಗೆ ಶನಿಮಹಾತ್ಮ ದೇವಸ್ಥಾನದಿಂದ ನಾಗಯ್ಯ ರೆಡ್ಡಿ ವೃತ್ತದವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಲ್ಲೇ ಮೀರಿದೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದಾಳಿ ನಡೆಸಿ, ವಿಕೃತಿ ಮೆರೆಯುತ್ತಿದ್ದಾರೆ, ಆದರೆ ಈ ಬಗ್ಗೆ ಯಾರು ಚಕಾರ ಎತ್ತದೆ, ಮೌನಕ್ಕೆ ಶರಣಾಗಿದ್ದಾರೆ, ಇದೆ ಬೇರೆ ಧರ್ಮಗಳ ಮೇಲೆ ನಡೆದಿದ್ದರೆ, ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸುತ್ತಿದ್ದರು. ಭಾರತ ದೇಶದಲ್ಲಿದ್ದು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿ ಹಿಂದೂ ಸಮುದಾಯವನ್ನು ಪ್ರಚೋದನೆ ಮಾಡುವ ಕೆಲಸಗಳನ್ನು ಇತರರು ಮಾಡುತ್ತಿದ್ದಾರೆ. ಇಂತಹ ಸಮಾಜ ವಿರೋಧಿ ಹೇಳಿಕೆಗಳನ್ನು ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡು ಕಠಿಣ ಕ್ರಮಕೈಗೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸಿದರೆ, ಇದು ಧರ್ಮ ಯುದ್ಧಕ್ಕೆ ಸಾಕ್ಷಿಯಾಗಲಿದೆ ಎಂದು ಎಚ್ಚರಿಕೆ ನೀಡಿದ ಅವರು ಈ ಕೂಡಲೇ ಪ್ರಧಾನ ಮಂತ್ರಿ ಮಧ್ಯ ಪ್ರವೇಶಿಸಿ ಹಿಂದುಗಳಿಗೆ ರಕ್ಷಣೆ ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ, ರಮೇಶ್ ರಾವ್ ಶೆಲ್ಕೆ ಮಾತನಾಡಿ ನಮ್ಮಲ್ಲಿರುವ ಸಹನೆ ಮತ್ತು ಸಹಬಾಳ್ವೆ ನಮ್ಮ ಹಿಂದುಗಳಿಗೆ ತಿರುಗುಬಾಣವಾಗಿದೆ, ಅದು ನಮ್ಮ ದೌರ್ಬಲ್ಯವಲ್ಲ, ನೆರೆಯ ರಾಷ್ಟçದಲ್ಲಿ ನಡೆದ ಇಂತಹ ಕೃತ್ಯಗಳಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು, ಹಾಗೂ ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಹಿಂದೂ ಸಮಾಜ ಉಳಿಯಲು ಸಾಧ್ಯ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ, ಶಿವಕುಮಾರ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಮಾರಣಹೋಮ ನಡೆಸುತ್ತಿದ್ದಾರೆ, ಹಿಂದೂ ದೇವಾಲಯಗಳನ್ನು ನಾಶ ಮಾಡುತ್ತಿದ್ದಾರೆ, ಅಲ್ಲಿ ೨೮% ಇದ್ದ ಹಿಂದೂಗಳು ಇಂದು ೮% ಗೆ ಬಂದಿಳಿದಿದ್ದಾರೆ. ಆಪತ್ಕಾಲದಲ್ಲಿ ಪ್ರತಿ ಬಾರಿ ಭಾರತ ಅವರಿಗೆ ಸಹಾಯ ಮಾಡಿದೆ. ಆದರೆ ಅವರಿಗೆ ಕೃತಜ್ಞತೆ ಇಲ್ಲ, ಇದು ಹೀಗೆ ಮುಂದುವರೆದರೆ ಇಲ್ಲಿರುವ ಬಾಂಗ್ಲಾ ವಲಸಿಗರರನ್ನು ಹೊರ ದಬ್ಬಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಮುಖಂಡರಾದ ಶಶಿಧರ್, ಮುನಿಲಕ್ಷ್ಮಮ್ಮ , ಮಾರ್ಕೆಟ್ ಮೋಹನ್, ಜಯಣ್ಣ, ಮುದುಕೃಷ್ಣ, ಮುಂತಾದವರು ಉಪಸ್ಥಿತರಿದ್ದರು.