Vishwavani Editorial: ಮೈಮರೆವು ದುಬಾರಿಯಾಗಬಲ್ಲದು
ಮಹಾರಾಷ್ಟ್ರದಲ್ಲಿ 15 ಮಂದಿಯ ಸಾವಿಗೆ ಕಾರಣವಾಗಿರುವ ಈ ಕಾಯಿಲೆಯು (ಸಾಲ ದೆಂಬಂತೆ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆಯಂತೆ), ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಈಗಾಗಲೇ ತನ್ನ ಕರಾಮತ್ತನ್ನು ತೋರಿಸಿದೆ. ಕರ್ನಾ ಟಕದಲ್ಲೂ ಇದರ ಪ್ರಕರಣವೊಂದು ವರದಿಯಾಗಿದೆ


ಆ ಕೆಟ್ಟ ಕನಸನ್ನು ಮರೆಯಲುಂಟೇ? 2019ರ ಅಂತ್ಯದಲ್ಲಿ ವಕ್ಕರಿಸಿಕೊಂಡ ಕರೋನಾ ಎಂಬ ಮಹಾಮಾರಿ ನೋಡನೋಡುತ್ತಿದ್ದಂತೆಯೇ ಜಗತ್ತಿನ ವಿವಿಧ ದೇಶಗಳ ಜನರ ಆರೋಗ್ಯಭಾಗ್ಯಕ್ಕೆ ಕೊಳ್ಳಿಯಿಟ್ಟಿದ್ದರ ಜತೆಗೆ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನೂ ಹೈರಾಣು ಮಾಡಿಬಿಟ್ಟಿತು. ಭಾರತವು ಸಕಾಲದಲ್ಲಿ ಇದಕ್ಕೆ ಲಸಿಕೆಯನ್ನು ಕಂಡುಕೊಂಡಿ ದ್ದರಿಂದ ಮತ್ತು ಸಾಕಷ್ಟು ದೇಶಗಳಿಗೂ ಅದನ್ನು ರವಾನಿಸಿದ್ದರಿಂದ, ಸಾವುನೋವುಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆ ಕಂಡುಬಂತು ಎನ್ನಬಹುದು. ಆದರೆ ಅದಕ್ಕೂ ಮುಂಚಿನ ಅವಧಿಯಲ್ಲಿ, ವಿಶ್ವದ ವಿವಿಧೆಡೆ ಜನರು ಅನುಭವಿಸಿದ ತಲ್ಲಣವನ್ನು ಪದಗಳಲ್ಲಿ ಹಿಡಿದಿ ಡಲಾಗದು. ಈ ಸಂದರ್ಭವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿರುವುದಕ್ಕೆ ಕಾರಣ ‘ಗಿಲ್ಲಿ ಯನ್ ಬೆರ್ರೆ ಸಿಂಡ್ರೋಮ್’ (ಜಿಬಿಎಸ್) ಕಾಯಿಲೆ.
ಮಹಾರಾಷ್ಟ್ರದಲ್ಲಿ 15 ಮಂದಿಯ ಸಾವಿಗೆ ಕಾರಣವಾಗಿರುವ ಈ ಕಾಯಿಲೆಯು (ಸಾಲ ದೆಂಬಂತೆ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆಯಂತೆ), ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಈಗಾಗಲೇ ತನ್ನ ಕರಾಮತ್ತನ್ನು ತೋರಿ ಸಿದೆ. ಕರ್ನಾಟಕದಲ್ಲೂ ಇದರ ಪ್ರಕರಣವೊಂದು ವರದಿಯಾಗಿದೆ. ಇಂಥ ಸೋಂಕು ತಗಲುತ್ತಿರುವ ಮಾಹಿತಿ ಬಯಲಾದಾಗಲೆಲ್ಲಾ, ಜನರು ತಲ್ಲಣಗೊಳ್ಳುವುದು ಸಹಜ.
ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಔಷಧಿ/ಲಸಿಕೆಯೇನಾದರೂ ಇದೆಯೇ? ಎಂಬೆಲ್ಲಾ ವಿಷಯಗಳಿಗೆ ಸಂಬಂಽಸಿ ಅವರಲ್ಲಿ ಗೊಂದಲ ಮೂಡುವುದಿದೆ. ಕರೋನಾ ಕಾಲಘಟ್ಟದಲ್ಲಿ ಜನರು ಅನುಭವಿಸಿದ ಕಹಿಯೇ ಇಂಥ ಗೊಂದಲದ ಮರು ಕಳಿಕೆಗೆ ಕಾರಣ. ಇಂಥ ಸಂದರ್ಭದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕಾದ್ದು ಆಳುಗ ವ್ಯವಸ್ಥೆಗಳ ಹೊಣೆ ‘ಜಿಬಿಎಸ್’ ಸಂಬಂಧಿತ ರೋಗಲಕ್ಷಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಸರಳ ರೀತಿಯಲ್ಲಿ ಜನರಿಗೆ ತಿಳಿಸಿಕೊಟ್ಟು, ಅನುಸರಿಸಬೇಕಾದ ಕ್ರಮ ಗಳ ಕುರಿತು ಅವರನ್ನು ಮಾಹಿತಿವಂತರನ್ನಾಗಿ ಮಾಡಬೇಕಾಗುತ್ತದೆ. ಈ ಕೆಲಸ ಸಮರೋ ಪಾದಿಯಲ್ಲಿ ನಡೆಯಲಿ ಎಂಬುದು ಸಹೃದಯಿಗಳ ಆಶಯ.