ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ಬಲವಂತದ ಮಾಘಸ್ನಾನವೇ?

ನೀಟ್ ಪರೀಕ್ಷೆಯಲ್ಲಿ ಶೇ.99.99ರಷ್ಟು ಅಂಕಗಳನ್ನು ಗಳಿಸಿದ್ದ ಹಾಗೂ ಕೌನ್ಸೆಲಿಂಗ್‌ನಲ್ಲಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಸೀಟು ದಕ್ಕಿಸಿ ಕೊಂಡಿದ್ದ ವಿದ್ಯಾರ್ಥಿಯೊಬ್ಬ, ‘ನಾನು ವೈದ್ಯಕೀಯ ವ್ಯಾಸಂಗ ಮಾಡಲಾರೆ, ವೈದ್ಯನಾಗಲು ನನಗೆ ಇಷ್ಟವಿಲ್ಲ’ ಎಂದು ಚೀಟಿಯಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ.

ನೀಟ್ ಪರೀಕ್ಷೆಯಲ್ಲಿ ಶೇ.99.99ರಷ್ಟು ಅಂಕಗಳನ್ನು ಗಳಿಸಿದ್ದ ಹಾಗೂ ಕೌನ್ಸೆಲಿಂಗ್‌ನಲ್ಲಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಸೀಟು ದಕ್ಕಿಸಿ ಕೊಂಡಿದ್ದ ವಿದ್ಯಾರ್ಥಿಯೊಬ್ಬ, ‘ನಾನು ವೈದ್ಯಕೀಯ ವ್ಯಾಸಂಗ ಮಾಡಲಾರೆ, ವೈದ್ಯನಾಗಲು ನನಗೆ ಇಷ್ಟವಿಲ್ಲ’ ಎಂದು ಚೀಟಿಯಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರ ದಿಂದ ವರದಿಯಾಗಿದೆ.

ಯಾವುದಾದರೊಂದು ಪರೀಕ್ಷೆಯಲ್ಲಿ ಕಡಿಮೆ ಅಂಕವನ್ನು ಪಡೆದಾಗಲೋ, ಅನುತ್ತೀರ್ಣ ರಾದಾಗಲೋ ಅಥವಾ ಬಯಸಿದ ಉದ್ಯೋಗವನ್ನು ದಕ್ಕಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ಇಂಟರ್‌ವ್ಯೂನಲ್ಲಿ ವಿಫಲರಾದಾಗಲೋ ಅಭ್ಯರ್ಥಿಗಳು ಹೀಗೆ ಆತ್ಮಹತ್ಯೆಗೆ ಶರಣಾಗುವ ಘಟನೆಗಳ ಬಗ್ಗೆ ನಾವು ಕೇಳಿರುವುದುಂಟು.

ಇದನ್ನೂ ಓದಿ: Vishwavani Editorial: ಡಿಜಿಟಲ್ ಅರೆಸ್ಟ್ ಎಂಬ ಪಿಡುಗು

ಆದರೆ ಇಲ್ಲಿ, ಸದರಿ ವಿದ್ಯಾ ರ್ಥಿಯು ಅಂಕಗಳಿಕೆಯಲ್ಲಿ ಪರಮೋಚ್ಚ ಸಾಧನೆ ಮಾಡಿ, ವೈದ್ಯಕೀಯ ಸೀಟನ್ನು ದಕ್ಕಿಸಿಕೊಂಡ ನಂತರವೂ ಹೀಗೆ ನೇಣಿಗೆ ಕೊರಳೊಡ್ಡಿರುವುದನ್ನು ನೋಡಿದರೆ, ಒಳಗೊಳಗೇ ಆತ ಅದಿನ್ನಾವ ಒತ್ತಡವನ್ನು ಎದುರಿಸುತ್ತಿದ್ದಿರಬಹುದು? ಇದು ಹೆತ್ತವರು ಆತನಿಗೆ ಬಲವಂತದ ಮಾಘಸ್ನಾನ ಮಾಡಿಸಲು ಮುಂದಾಗಿದ್ದುದರ ಫಲಶ್ರುತಿಯೇ? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ.

ಏಕೆಂದರೆ, ಕೆಲ ಮಕ್ಕಳಿಗೆ ಕಲೆ-ಸಾಹಿತ್ಯ, ಸಮಾಜ ವಿಜ್ಞಾನ, ಮನಶ್ಶಾಸ್ತ್ರ ಹೀಗೆ ಬೇರೇನೋ ವಿಷಯ ದಲ್ಲಿ ವ್ಯಾಸಂಗವನ್ನು ಮುಂದುವರಿಸಬೇಕೆಂಬ ಬಯಕೆಯಿದ್ದರೂ, ನೆರೆಹೊರೆಯವರ ನಡುವೆ ಹೆತ್ತವರ ಪ್ರತಿಷ್ಠೆಯನ್ನು ಉಳಿಸಿ-ಬೆಳೆಸಲು ‘ಮೆಡಿಕಲ್-ಎಂಜಿನಿಯರಿಂಗ್’ನಂಥ ಪ್ರತಿಷ್ಠಿತ ಕೋರ್ಸುಗಳಿಗೇ ಸೇರಿಕೊಳ್ಳಬೇಕಾದ ಪರೋಕ್ಷ ಒತ್ತಡಕ್ಕೆ ಅವರು ಒಳಗಾಗುವ ನಿದರ್ಶನಗಳಿವೆ ಮತ್ತು ನಂತರ ಅದನ್ನು ದಕ್ಕಿಸಿಕೊಳ್ಳಲಾಗದೆ ಹೀಗೆ ಅತಿರೇಕದ ಹೆಜ್ಜೆಗಳನ್ನು ಇಡುತ್ತಾರೆ ಎನ್ನಲಾ ಗುತ್ತದೆ.

ಈಗ ಆಗಿರುವ ವಿದ್ಯಾರ್ಥಿಯ ಸಾವು ಕೂಡ ಅದೇ ವರ್ಗಕ್ಕೆ ಸೇರುವಂಥದಾ? ಈ ನಿಟ್ಟಿನಲ್ಲಿ ನಡೆಯುವ ಕೂಲಂಕಷ ತನಿಖೆ ಮಾತ್ರವೇ ವಾಸ್ತವವನ್ನು ಬಯಲಿಗೆಳೆಯಬಲ್ಲದು..