ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಡಿಜಿಟಲ್ ಅರೆಸ್ಟ್ ಎಂಬ ಪಿಡುಗು

ರಾಜ್ಯಸಭಾ ಸದಸ್ಯೆಯೊಬ್ಬರನ್ನು ಹಾಗೂ ಸಂಸದರೊಬ್ಬರ ಪತ್ನಿಯನ್ನು ಈ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ಗೆ ಟಾರ್ಗೆಟ್ ಮಾಡಿಕೊಂಡಿದ್ದ ಸುದ್ದಿಯನ್ನು ಈಗಾಗಲೇ ನೀವು ಓದಿದ್ದೀರಿ. ಅಕ್ಷರ ಸ್ಥರ ಪರಿಸ್ಥಿತಿಯೇ ಹೀಗಾದರೆ, ಇಂಥದೊಂದು ಮೋಸದ ಜಾಲದ ಕುರಿತು ಅರಿವಿಲ್ಲದ ಅಮಾಯಕ ರನ್ನು ಸೈಬರ್ ವಂಚಕರು ಯಾವ ಪರಿಯಲ್ಲಿ ಹುರಿದು ಮುಕ್ಕಬಹುದು ಎಂಬುದನ್ನು ಊಹಿಸಿಕೊಳ್ಳಿ.

Vishwavani Editorial: ಡಿಜಿಟಲ್ ಅರೆಸ್ಟ್ ಎಂಬ ಪಿಡುಗು

-

Ashok Nayak
Ashok Nayak Sep 24, 2025 11:18 AM

ತಂತ್ರಜ್ಞಾನ ಮುಂದುವರಿದಂತೆ, ದುರುಳರು ತಮ್ಮ ಕುಕೃತ್ಯಗಳಿಗೆ ತಂತ್ರಜ್ಞಾನದ ಒತ್ತಾಸೆಯನ್ನು ಪಡೆಯುವ ಪರಿಪಾಠವೂ ಜಾಸ್ತಿಯಾಗುತ್ತಿದೆ. ಸೈಬರ್ ವಂಚಕರು ದೂರದ ನೆಲೆಯಲ್ಲಿ ಕೂತು, ಪೊಲೀಸ್ ಅಥವಾ ಯಾವುದೋ ಸರಕಾರಿ ಇಲಾಖೆಯ ಹೆಸರನ್ನು ಮುಂದು ಮಾಡಿಕೊಂಡು ಜನರಿಗೆ ಕರೆಮಾಡಿ ಬೆದರಿಸಿ, ‘ಡಿಜಿಟಲ್ ಅರೆಸ್ಟ್’ಗೆ ಒಳಪಡಿಸಿ ವಂಚಿಸಿ, ತಮ್ಮ ಕಾರ್ಯ ಸಾಧಿಸಿ ಕೊಳ್ಳುವಂಥ ಪ್ರಕರಣಗಳು ಅಬಾಧಿತವಾಗಿ ಮುಂದುವರಿದಿವೆ.

ಇದನ್ನೂ ಓದಿ: Vishwavani Editorial: ಬಾಲ ಬಿಚ್ಚಿದ ಮಗ್ಗುಲುಮುಳ್ಳು

ರಾಜ್ಯಸಭಾ ಸದಸ್ಯೆಯೊಬ್ಬರನ್ನು ಹಾಗೂ ಸಂಸದರೊಬ್ಬರ ಪತ್ನಿಯನ್ನು ಈ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ಗೆ ಟಾರ್ಗೆಟ್ ಮಾಡಿಕೊಂಡಿದ್ದ ಸುದ್ದಿಯನ್ನು ಈಗಾಗಲೇ ನೀವು ಓದಿದ್ದೀರಿ. ಅಕ್ಷರಸ್ಥರ ಪರಿಸ್ಥಿತಿಯೇ ಹೀಗಾದರೆ, ಇಂಥದೊಂದು ಮೋಸದ ಜಾಲದ ಕುರಿತು ಅರಿವಿಲ್ಲದ ಅಮಾಯಕರನ್ನು ಸೈಬರ್ ವಂಚಕರು ಯಾವ ಪರಿಯಲ್ಲಿ ಹುರಿದು ಮುಕ್ಕಬಹುದು ಎಂಬುದನ್ನು ಊಹಿಸಿಕೊಳ್ಳಿ. ದಿನಬೆಳಗಾದರೆ, ಸ್ಮಾರ್ಟ್ ಫೋನ್ ಅನ್ನು ತೆರೆಯುತ್ತಿದ್ದಂತೆ, ‘ಈ ಲಿಂಕ್ ಅನ್ನು ಒತ್ತಿ, ಆಕರ್ಷಕ ಕೊಡುಗೆಯನ್ನು ಪಡೆಯಿರಿ’ ಎಂಬ ಚಿತ್ತಾಕರ್ಷಕ ಹುಳುವನ್ನು ಸಿಕ್ಕಿಸಿ ಕೊಂಡಿರುವ ಗಾಳಗಳು ಅದರ ಮಡಿಲಲ್ಲಿ ಕಾಣುವುದುಂಟು.

ಮೊಬೈಲ್ ಬಳಕೆದಾರರು ಒಂದೊಮ್ಮೆ ಮೈಮರೆತು, ವಂಚಕರು ಅಲ್ಲಿ ನೀಡಿರುವ ಸೂಚನೆಯಂತೆ ನಡೆದುಕೊಂಡರೆ, ಬಳಕೆದಾರರ ಬ್ಯಾಂಕ್ ಖಾತೆಯಲ್ಲಿನ ಹಣವು ಹೇಳ ಹೆಸರಿಲ್ಲದಂತೆ ಮಾಯ ವಾಗುತ್ತದೆ. ಇದು ಸೈಬರ್ ವಂಚನೆಯ ಒಂದು ಪ್ರಭೇದವಷ್ಟೇ, ಹೇಳುತ್ತ ಹೋದರೆ ಇನ್ನೂ ಸಾಕಷ್ಟಿದೆ.

ಹೀಗಾಗಿ, ಇಂಥ ವಂಚನೆ/ಕಳ್ಳತನಕ್ಕೆ ಪರಿಣಾಮಕಾರಿಯಾಗಿ ಮದ್ದು ಅರೆಯಲೆಂದು ಸೈಬರ್ ಪೊಲೀಸ್ ವಲಯಕ್ಕೆ ಇನ್ನಷ್ಟು ಬಲ ತುಂಬಬೇಕಿದೆ. ಇದು ಈ ಕ್ಷಣದ ಅನಿವಾರ್ಯತೆಯೂ ಹೌದು.